ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar) : ಆಷಾಢ ಮಾಸದ ಕೊನೆಯ ದಿನ ಹಾಗೂ ಶ್ರಾವಣ ಮಾಸದ ಆರಂಭಕ್ಕೆ ಮುಂಚಿತವಾಗಿ ಬರುವ ಅಮಾವಾಸ್ಯೆ(Amavasye) ವಿಶೇಷತೆಯಿಂದ ಕೂಡಿದೆ.
ಕರ್ನಾಟಕ(Karnataka), ಮಹಾರಾಷ್ಟ್ರ(Maharashtra), ಗೋವಾದ(Goa) ಕೆಲವು ಗಡಿ ಭಾಗಗಳಲ್ಲಿ ವಿಶೇಷವಾಗಿ ಆಚರಿಸಲ್ಪಡುವ ಶ್ರಾವಣ ಮಾಸದಲ್ಲಿ ಬರುವ ಧಾರ್ಮಿಕ ನಿಷ್ಠೆ ಮತ್ತು ಕಠಿಣ ಆಹಾರ ನಿಯಮಗಳ ಕಾರಣದಿಂದಾಗಿ, ಜನರು ಈ ಅಮವಾಸ್ಯೆ ದಿನ ಭರ್ಜರಿ ಮಾಂಸಾಹಾರಿ ಊಟ ಹಾಗೂ ಮದ್ಯಪಾನವನ್ನು ಮಾಡಿ ಆನಂದಿಸುತ್ತಾರೆ.
ಶ್ರಾವಣ ಮಾಸದಲ್ಲಿ(Shravana Month) ಇಡೀ ಒಂದು ತಿಂಗಳು ಸಾತ್ವಿಕ ಜೀವನ ನಡೆಸಿ, ಮಾಂಸಾಹಾರ ಹಾಗೂ ಮದ್ಯದಿಂದ ದೂರವಿರಬೇಕಾಗುತ್ತದೆ. ಹೀಗಾಗಿ ತಮಗೆ ಇಷ್ಟವಾದ ಅಡುಗೆಯನ್ನು ಸವಿಯಲು ಅಮವಾಸ್ಯೆ ದಿನವನ್ನು ನಿಗದಿಪಡಿಸಿಕೊಳ್ಳುತ್ತಾರೆ.
ಆಷಾಢದ ಮಳೆಯಿಂದಾಗಿ ಗಟಾರಗಳು ತುಂಬಿಕೊಳ್ಳುತ್ತವೆ ಅಥವಾ ಕುಡಿತದ ಮರೆಯಲ್ಲಿ ಗಟಾರಕ್ಕೆ ಬೀಳುವ ತಮಾಷೆಯ ಪ್ರತೀತಿಯಿಂದ ಜನಪದವಾಗಿ ಇದಕ್ಕೆ ‘ಗಟಾರಿ ಅಮವಾಸ್ಯೆ’ ಎಂದು ಉತ್ತರಕನ್ನಡ(Uttarkannada) ಜಿಲ್ಲೆಯ ಕಾರವಾರ(Karwar), ಗೋವಾ(Goa) ಕಡೆಗಳಲ್ಲಿ ಎಂಬ ಹೆಸರು ಬಂದಿದೆ
ಶ್ರಾವಣ ಮಾಸದ ಪವಿತ್ರ ದಿನಗಳು ಮತ್ತು ವ್ರತಗಳನ್ನು ಆಚರಿಸಲು ಮನಸ್ಸನ್ನು ಮತ್ತು ದೇಹವನ್ನು ಸಜ್ಜುಗೊಳಿಸುವ ಸಾಂಪ್ರದಾಯಿಕ ಕ್ರಮ ಎಂದು ಭಾವಿಸಲಾಗಿದೆ. ಕೆಲವೆಡೆ ಈ ಅಮಾವಾಸ್ಯೆಯಂದು ದೀಪ ಪೂಜೆ ಹಾಗೂ ಪಿತೃಗಳಿಗೆ ಸಂಬಂಧಿಸಿದ ತರ್ಪಣ ಕಾರ್ಯಗಳನ್ನು ಮಾಡಲಾಗುತ್ತದೆ.
ಶ್ರಾವಣ ಪ್ರಾರಂಭದ ಅಮವಾಸ್ಯೆಯನ್ನು ನಾಡಿನ ಬೇರೆ ಬೇರೆ ಕಡೆಯಲ್ಲಿ ವಿಶೇಷ ದಿನವಾಗಿ ಆಚರಿಸಲಾಗುತ್ತದೆ. ಅದರಲ್ಲಿ ಭೀಮನ ಅಮವಾಸ್ಯೆಯಾಗಿ, ಹೊಸ ಅಳಿಯಂದಿರ ಅಮವಾಸ್ಯೆಯಾಗಿ, ಶ್ರಾವಣ ಆರಂಭದ ಮುನ್ನಾದಿನವಾಗಿ, ಎಳ್ಳಮವಾಸ್ಯೆಯಾಗಿ ಹೀಗೆ ವೈವಿಧ್ಯಮಯವಾಗಿ ಆಚರಿಸಲಾಗುತ್ತದೆ.
ಗಡಿಭಾಗದಲ್ಲಿ ರಂಗೇರುವ ಗಟಾರ ಅಮವಾಸ್ಯೆ :
ಉತ್ತರಕನ್ನಡ(Uttarkannada) ಜಿಲ್ಲೆಯಲ್ಲಿ ಅದರಲ್ಲಿ ಕರಾವಳಿ ತಾಲೂಕುಗಳಲ್ಲಿ ಶ್ರಾವಣ ಪ್ರಾರಂಭದ ಅಮವಾಸ್ಯೆ ಎಂದರೆ ಇದಕ್ಕೆ ಒಂದು ವಿಶೇಷ ಅರ್ಥವನ್ನೆ ಕಲ್ಪಿಸಿದ್ದಾರೆ. ಹೊಸ ಅನ್ವರ್ಥವನ್ನೆ ಕೊಟ್ಟಿದ್ದಾರೆ. ಇಲ್ಲಿ ಇದಕ್ಕೆ “ಗಟಾರ ಅಮವಾಸ್ಯೆ”(Gatara Amavasye) ಎಂದೇ ನಗೆ ಚಟಾಕಿಯ ಪದವಾಗಿದೆ. ಇಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ವಯೋವೃದ್ದರ ಬಾಯಲ್ಲಿ ಈ ಪದವೂ ಜನಜನಿತವಾಗಿದೆ. ಮದ್ಯ ಪ್ರಿಯರು ಮನಸೋ ಇಚ್ಛೆಯಂತೆ ತುಂಡು-ಗುಂಡು ಹಾಕಿ ಕುಡಿತದ ತಮ್ಮ ಬಯಕೆಯನ್ನು ತೀರಿಸಿಕೊಳ್ಳುತ್ತಾರೆ. ಈ ದಿನದಂದು ಹಳ್ಳಿ ನಗರ ಎನ್ನದೇ ಎಲ್ಲೆಡೆ ಮದ್ಯದಂಗಡಿಗಳು ಭಾರಿ ಮದ್ಯಪ್ರಿಯರಿಂದ ತುಂಬಿರುತ್ತದೆ. ಬೆಳಿಗ್ಗೆಯಿಂದ ಹಿಡಿದು ಮಧ್ಯರಾತ್ರಿಯವರೆಗೂ ‘ಮದ್ಯ’ ದಂಗಡಿಗಳಲ್ಲಿ ಭರಾಟೆ ಜೋರಾಗಿರುತ್ತದೆ.
ಮದ್ಯ ಪ್ರಿಯರು ‘ಅಮಲಿನಲ್ಲಿರುತ್ತಾರೆ. ಕುಡಿದ ಮದ್ಯ ಹೆಚ್ಚಾಗಿ ಕೂಡಲೆ ನಡೆಯಲು-ನಿಲ್ಲಲು ಬಾರದೆ ತೂರಾಡುತ್ತ ಸಾಗುವ ದೃಶ್ಯಕಾಣುತ್ತದೆ. ಹೀಗೆ ತೂರಾಡುತ್ತ ತೂರಾಡುತ್ತ ರಸ್ತೆಯ ಮಗ್ಗಲು, ವಿದ್ಯುತ್ ಕಂಬಗಳು ಹಾಗೂ ರಸ್ತೆಯ ಬದಿಯ ಚರಂಡಿಗಳು ಈ ಕುಡುಕರಿಗೆ ಆಶ್ರಯದ ತಾಣವಾಗುತ್ತದೆ. ಕುಡಿದು ಕೊನೆಗೆ ರಸ್ತೆಯ ಮೇಲೆ ಉರುಳುವದಕ್ಕೆ ಗಟಾರ ಅಮವಾಸ್ಯೆ ಎಂದು ಕರೆಯುತ್ತಾರೆ. ಈ ದಿನ ಗಡಿಭಾಗದ ಎಲ್ಲರ ಬಾಯಲ್ಲಿ ‘ಆಜ ಗಟಾರ ಅಮಾಸ’ ಕೈ ಗೆಲ್ಲೋ ಮಾರಾಯ’ ಎಂದು ಕೇಳುವುದು ರೂಢಿ.
ಈ ಅಮವಾಸ್ಯೆ ಅವರವರ ಭಾವಕ್ಕೆ ಅವರ ಭಕುತಿಯಂತೆ ಆಚರಿಸೋದು ವಿಶೇಷವಾಗಿದೆ.
