ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಲಬುರ್ಗಿ(Kalaburgi) : ಪಾಕಿಸ್ತಾನದೊಂದಿಗೆ (Pakistan) ನಿರಂತರ ಸಂಪರ್ಕ ಹೊಂದಿದ್ದರೆಂಬ ಆರೋಪದ ಹಿನ್ನೆಲೆಯಲ್ಲಿ ಕಲಬುರಗಿಯಲ್ಲಿ ಓರ್ವನನ್ನು ಆ್ಯಂಟಿ ಟೆರರ್ ಸ್ಕ್ವಾಡ್ (ATS) ವಶಕ್ಕೆ ಪಡೆದಿದೆ.
ಕೇಂದ್ರ ಗುಪ್ತಚರ ಇಲಾಖೆ(Central Intelligence Department) ನೀಡಿದ ಮಾಹಿತಿಯ ಮೇರೆಗೆ ಉತ್ತರ ಪ್ರದೇಶದ ಎಟಿಎಸ್(Uttarapradesh ATS) ಅಧಿಕಾರಿಗಳು ಕಲಬುರಗಿಗೆ ಆಗಮಿಸಿ ಇಬ್ಬರನ್ನು ವಶಕ್ಕೆ ಪಡೆದಿದ್ದರು. ಅಜ್ಞಾತ ಸ್ಥಳದಲ್ಲಿ ಇಬ್ಬರನ್ನೂ ವಿಚಾರಣೆ ನಡೆಸಲಾಗಿದೆ. ಈ ಸಂದರ್ಭದಲ್ಲಿ ಮಹಮದ್ ಸಮೀರ್ ಎಂಬಾತನ ಲಿಂಕ್ ಇರೋದು ದೃಢವಾಗಿದ್ದು, ಸಿಸಿಬಿ ಪೊಲೀಸರು(CCB) ವಶಕ್ಕೆ ಪಡೆದು ವಿಚಾರಣೆ ಮುಂದುವರಿಸಿದ್ದಾರೆ. ದೇಶ ವಿರೋಧಿ ಚಟುವಟಿಕೆ ಮಾಡುತ್ತಿದ್ದವರ ಜೊತೆಗೆ ಸಂಪರ್ಕ ಹಿನ್ನಲೆ ಬಂಧಿಸಲಾಗಿದೆ.
ಪಾಕ್(Pak) ಜೊತೆ ನಿರಂತರ ಸಂಪರ್ಕ ಹೊಂದಿದ್ದ ಕಾರಣಕ್ಕಾಗಿ ಬಂಧಿಸಲಾಗಿದೆ. ಉತ್ತರ ಪ್ರದೇಶ ಮೂಲದ(Uttarapradesha Native) ವಿಳಾಸವನ್ನು ಹೊಂದಿರುವ ಮೊಹಮ್ಮದ್ ಸಮೀರ್ ವಾಟ್ಸಾಪ್ ಕಾಲ್(WhatsApp Call), ಫೇಸ್ ಬುಕ್(Facebook), ಮುಖಾಂತರ ಪಾಕ್ ಜೊತೆ ಸಂಪರ್ಕ ಹೊಂದಿದ್ದಾನೆ.
ಉತ್ತರ ಪ್ರದೇಶದ ರೆಸಿಡೆನ್ಶಿಯಲ್ ವಿಳಾಸ ಹೊಂದಿರುವ ಸಮೀರ್ ಮತ್ತು ಸಲ್ಮಾನ್ ಎಂಬಿಬ್ಬರೂ ವಾಟ್ಸ್ಆಪ್ ಕಾಲ್ ಹಾಗೂ ಫೇಸ್ಬುಕ್ ಮೂಲಕ ಪಾಕಿಸ್ತಾನದೊಂದಿಗೆ ಸಂಪರ್ಕ ಹೊಂದಿದ್ದರು ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಎಟಿಎಸ್ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಸಮೀರ್ ಉಳಿದುಕೊಂಡಿದ್ದ ಕೊಠಡಿಯಲ್ಲಿ ಕೆಲವೊಂದು ಮ್ಯಾಪ್ಗಳು ಪತ್ತೆಯಾಗಿವೆ ಎನ್ನಲಾಗಿದೆ. ಈ ಮ್ಯಾಪ್ಗಳ ಕುರಿತೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಕಲಬುರಗಿಯ(Kalaburgi) ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಎಟಿಎಸ್(ATS) ಅಧಿಕಾರಿಗಳ ವಿಚಾರಣೆ ಮುಂದುವರಿಸಿದ್ದಾರೆ.
