ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಕಾನ್ಪುರ(Kanpur) : ತಮ್ಮ ಸಂಬಂಧಿಕರನ್ನು ರೈಲಿಗೆ ಹತ್ತಿಸಲು ತೆರಳಿದ್ದ 12 ಜನರು ವಂದೇ ಭಾರತ್ ಎಕ್ಸ್‌ಪ್ರೆಸ್ (Vance Bharat Express) ರೈಲಿನಲ್ಲೇ ಲಾಕ್ ಆಗಿ, ಬರೋಬ್ಬರಿ 79 ನಿಮಿಷಗಳ ಕಾಲ ಪರದಾಡಿದ ಘಟನೆ ಉತ್ತರ ಪ್ರದೇಶದ(Uttarapradesha) ಕಾನ್ಪುರ ಸೆಂಟ್ರಲ್ ನಿಲ್ದಾಣದಲ್ಲಿ (Kanpur Railway Station) ನಡೆದಿದೆ.

ವಾರಣಾಸಿ-ಹೊಸದೆಹಲಿ(Varanasi-Delhi) ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸ್ವಯಂಚಾಲಿತ ಬಾಗಿಲುಗಳು (automatic doors) ಬಂದ್ ಆದ ಕಾರಣ ಈ ಅಚಾತುರ್ಯ ಸಂಭವಿಸಿದೆ.

ರೈಲು ಹೊರಡುವ ಮುನ್ನ ತಮ್ಮ ಸಂಬಂಧಿಯೊರ್ವರನ್ನ ಕಳಿಸಲು 12 ಜನರು ತೆರಳಿದ್ದರು. ಲಗೇಜ್ ಇಡಲು ಸಹಾಯ ಮಾಡಲು ರೈಲಿನೊಳಗಿದ್ದರು. ರೈಲು ಬಿಟ್ಟಿತು, ಚಲಿಸುತ್ತಿದ್ದಂತೆ ದಿಢೀರ್ ಎಲ್ಲರೂ ಆತಂಕಕ್ಕೊಳಗಾದರು. ರೈಲಿನಲ್ಲಿದ್ದ ಸಿಬ್ಬಂದಿಗೆ ಮಾಹಿತಿ ನೀಡಿದರೂ ತಕ್ಷಣ ರೈಲು ನಿಲ್ಲಿಸಲು ಸಾಧ್ಯವಾಗಿಲ್ಲ. ಕೊನೆಗೆ ಪ್ರಯಾಣಿಕರ ಗಲಾಟೆಯಿಂದ ಎಚ್ಚೆತ್ತ ನಿಯಂತ್ರಣ ಕೋಣೆ (Control Room), ಇಟಾವಾ ಜಂಕ್ಷನ್‌ನಲ್ಲಿ ರೈಲನ್ನು ತುರ್ತಾಗಿ ನಿಲ್ಲಿಸಲಾಯಿತು.

ಕಾನ್ಪುರದಲ್ಲಿ ರೈಲು ಹತ್ತಿದವರು ಇಟಾವಾ ಜಂಕ್ಷನ್ ತಲುಪುವವರೆಗೆ ಸುಮಾರು 79 ನಿಮಿಷಗಳ ಕಾಲ ರೈಲಿನಲ್ಲೇ ಪ್ರಯಾಣಿಸಬೇಕಾಯಿತು.

ಇಟಾವಾದಲ್ಲಿ ರೈಲಿನಿಂದ ಕೆಳಗೆ ಇಳಿಸಿದ ಬಳಿಕ ರೈಲ್ವೆ ರಕ್ಷಣಾ ಪಡೆ (RPF) ಮತ್ತು ವಾಣಿಜ್ಯ ಸಿಬ್ಬಂದಿ, ಸರಿಯಾದ ಟಿಕೆಟ್ ಅಥವಾ ಪ್ಲಾಟ್‌ಫಾರ್ಮ್ ಟಿಕೆಟ್ ಇಲ್ಲದೆ ಪ್ರಯಾಣಿಸಿದ್ದಕ್ಕಾಗಿ ತಲಾ ರೂ. 3,000 ರಂತೆ ಒಟ್ಟು ರೂ. 36,140 ದಂಡ ವಿಧಿಸಿದ್ದಾರೆ.

ಒಟ್ಟಾರೆಯಾಗಿ ಪ್ರೀತಿಪಾತ್ರರನ್ನು ಬೀಳ್ಕೊಡಲು ಹೋದ 12 ಜನರಿಗೆ ಸಹಾಯ ದುಬಾರಿಯಾಗಿ ಪರಿಣಮಿಸಿತು.