ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news) ಭಟ್ಕಳ(Bhatkal) : ಜಾನುವಾರುಗಳಿಗೆ ಸಮರ್ಪಕವಾದ ಆಹಾರ ನೀಡದೇ ಸೂಕ್ತ ಆರೈಕೆಯೂ ಮಾಡದೇ, ಕುಡಿಯುವ ನೀರು ಒದಗಿಸದೆ ದಿಗ್ಬಂಧನ ಹಾಕಿದ ಉತ್ತರಕನ್ನಡ ಜಿಲ್ಲೆಯ ಭಟ್ಕಳದಲ್ಲಿ(Bhatkal) ನಡೆದಿದೆ.
ಈ ಬಗ್ಗೆ ಭಟ್ಕಳ(Bhatkal) ಶಹರ ಪೊಲೀಸರು ದಾಳಿ ನಡೆಸಿ ಏಳು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಇದೇ ವೇಳೆ ಒಂದು ಎತ್ತು ಮೃತಪಟ್ಟಿರುವುದು ಗೊತ್ತಾಗಿದೆ.
ಭಟ್ಕಳ ಪಟ್ಟಣದ ಮೈನುದ್ದೀನ್ ಸ್ಟ್ರೀಟ್ 2ನೇ ಕ್ರಾಸ್ನ ಬ್ಲಾಕ್ ಬಿ ಪ್ರದೇಶದಲ್ಲಿರುವ ಖಾಲಿ ಜಾಗದಲ್ಲಿ ಜಾನುವಾರುಗಳನ್ನು ಅಮಾನವೀಯವಾಗಿ ಕಟ್ಟಿಹಾಕಲಾಗಿದೆ ಎಂಬ ದೂರು ಪೊಲೀಸರಿಗೆ ಬಂದಿದೆ. ಹೀಗಾಗಿ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ತೌಶಿಫ್ ಮಹಮ್ಮದ್ ಖಾಸಿಂ ಸಾಹೇಬ್ ಎಂಬಾತನ ಮನೆಯ ಸಮೀಪದ ಖಾಲಿ ಜಾಗದಲ್ಲಿ ಒಟ್ಟು ಎಂಟು ಜಾನುವಾರುಗಳನ್ನು ತೆಂಗಿನ ಮರಗಳಿಗೆ(Coconut Trees) ಕಟ್ಟಿಹಾಕಿರುವುದು ಕಂಡುಬಂದಿದೆ. ಅವುಗಳಿಗೆ ಆಹಾರ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಿರಲಿಲ್ಲ ಎನ್ನಲಾಗಿದೆ.
ಪೊಲೀಸರ ಪರಿಶೀಲನೆ ಸಂದರ್ಭದಲ್ಲಿ ಒಂದು ಎತ್ತು ಮೃತಪಟ್ಟಿರುವುದು ಪತ್ತೆಯಾಗಿದ್ದು, ಉಳಿದ ಏಳು ಜಾನುವಾರುಗಳನ್ನು ವಶಕ್ಕೆ ಪಡೆದು ರಕ್ಷಿಸಲಾಗಿದೆ. ವಶಪಡಿಸಿಕೊಂಡ ಜಾನುವಾರುಗಳ ಒಟ್ಟು ಅಂದಾಜು ಮೌಲ್ಯ ₹89 ಸಾವಿರ ಎಂದು ತಿಳಿದುಬಂದಿದೆ.
ಭಟ್ಕಳ ಶಹರ ಪೊಲೀಸ್ ಠಾಣೆಯ(Bhatkal town Station) ತನಿಖಾ ವಿಭಾಗದ ಪಿಎಸ್ಐ ತಿಮ್ಮಪ್ಪ ಅವರು ಸರ್ಕಾರದ ಪರವಾಗಿ ದೂರು ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.