ಕುಮಟಾ(KUMTA) : ತಾಲೂಕಿನ ಗೋಕರ್ಣದಲ್ಲಿ(GOKARN) ಸಂಭವಿಸಿದ ಪ್ರತ್ಯೇಕ ಘಟನೆಯಲ್ಲಿ ಮೂವರನ್ನ ಜೀವ ರಕ್ಷಕ ಸಿಬ್ಬಂದಿಗಳು(Life Guard) ರಕ್ಷಿಸಿದ್ದಾರೆ.
ಇಲ್ಲಿಯ ಓಂ ಬೀಚ್ನಲ್ಲಿ (Om Beach) ಮಧ್ಯಾಹ್ನ 3:45ರ ಸುಮಾರಿಗೆ ಸಮುದ್ರದ ಸುಳಿಗೆ ಸಿಲುಕಿ ಮುಳುಗುತ್ತಿದ್ದ ಇಬ್ಬರನ್ನು ರಕ್ಷಣೆ (Rescue) ಮಾಡಲಾಗಿದೆ. ಚರಣ್ (23), ಶ್ರೀಕಾಂತ್ (26) ರಕ್ಷಣೆಗೊಳಗಾದ ಪ್ರವಾಸಿಗರು.
ಆಂಧ್ರ ಮೂಲದ ಕಡಪ ಜಿಲ್ಲೆಯ(Andra native kadapa district ) ನಾಲ್ವರು ಪ್ರವಾಸಿಗರು ಗೋಕರ್ಣ ಪ್ರವಾಸಕ್ಕೆ ಬಂದಿದ್ದರು. ಸಮುದ್ರದಲ್ಲಿ ಈಜಾಡುತ್ತಿರುವಾಗ ಸುಳಿಗೆ ಸಿಲುಕಿ ಇಬ್ಬರೂ ಪ್ರವಾಸಿಗರು ಮುಳುಗುತ್ತಿದ್ದು ಗಮನಿಸಿ ಅವರನ್ನು ರಕ್ಷಣೆ ಮಾಡಲಾಗಿದೆ.
ಕರ್ತವ್ಯ ನಿರತ ಲೈಫ್ ಗಾರ್ಡ್(Lifeguard) ಸಿಬ್ಬಂದಿಗಳಾದ ಹರೀಶ್ ಮೂಡಂಗಿ, ಮಂಜೇಶ್ ಹರಿಕಂತ್ರ, ಪ್ರಭಾಕರ ಅಂಬಿಗ ಇವರು ತಮ್ಮ ಜೀವದ ಹಂಗನ್ನು ತೊರೆದು ಪ್ರವಾಸಿಗರ ಜೀವ ರಕ್ಷಣೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಇನ್ನೊಂದು ಘಟನೆ ಕುಡ್ಲೇ ಬೀಚಿನಲ್ಲಿ (Kudle Beach) ಓರ್ವ ವಿದೇಶಿ ಪ್ರವಾಸಿಗ ಸೇರಿ ಒಟ್ಟು ನಾಲ್ವರನ್ನ ರಕ್ಷಿಸಲಾಗಿದೆ. ರಷ್ಯಾ ಮೂಲದ ವಿದೇಶಿ(Russia native Foreigners) ಮಹಿಳೆ ಹೆಸರು ಜೈನ್ (41) ಹಾಗೂ ಬೆಂಗಳೂರಿನ ನಿವಾಸಿಗಳಾದ ಎಬಿನ್ ಡೇವಿಶ್ (35), ಮಧುರ ಅಗ್ರವಾಲ್ (35) ರಮ್ಯಾ ವೆಂಕಟರಮಣ (34) ರಕ್ಷಣೆಯಾದ ಪ್ರವಾಸಿಗರು.
ಬೆಂಗಳೂರಿನಿಂದ(BANGLORE) ಗೆಳೆಯ ಗೆಳತಿಯರೊಡನೆ ಗೋಕರ್ಣ ಪ್ರವಾಸಕ್ಕೆಂದು ಬಂದಿದ್ದು ಕುಡ್ಲೆ ಬೀಚಿನಲ್ಲಿ ಈಜಲು ತೆರಳಿದ್ದಾಗ ಸುಮಾರು 4:40ಕ್ಕೆ ಸಮುದ್ರದ ಸುಳಿಗೆ ಸಿಕ್ಕಿ ಸಹಾಯಕ್ಕಾಗಿ ಅಂಗಲಾಚುತಿದ್ದರು. ಜೀವ ರಕ್ಷಕ ಸಿಬ್ಬಂದಿಗಳಾದ ನಾಗೇಂದ್ರ ಎಸ್ ಕುರ್ಲೆ, ಮಂಜುನಾಥ್ ಹರಿಕಂತ್ರ, ಪ್ರವಾಸಿ ಮಿತ್ರ ಶೇಖರ್ ಹರಿಕಂತ್ರ ಮತ್ತು ಮೈ ಸ್ಟಿಕ್ ಗೋಕರ್ಣ ಅಡ್ವೆಂಚರ್ಸ್ (Adventures) ತಕ್ಷಣ ರಕ್ಷಣೆಗೆ ಧಾವಿಸಿದ್ದರು.
ಇದನ್ನು ಓದಿ : ಬಾಲಮಂದಿರದ ಮಕ್ಕಳಿಗೆ ದೀಪಾವಳಿ ಉಡುಗೋರೆ ನೀಡಿದ ಸಚಿವ ಮಂಕಾಳ್ ವೈದ್ಯ
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಉತ್ಸವ ಮೂರ್ತಿ