ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಕರಾವಳಿ ಉತ್ಸವ ಸಪ್ತಾಹದ(Karavali Utsav Saptaha) ಎರಡನೇ ದಿನವಾದ ಇಂದು ಮಯೂರವರ್ಮ ವೇದಿಕೆಯಲ್ಲಿ(Mayuravarma Vedike) ನಡೆಯುವ ವಿಶೇಷ ಕಾರ್ಯಕ್ರಮಗಳ ವಿವರ.
ಕಾರವಾರದ ಬ್ರಹ್ಮದೇವ್ ಗುಮಟಾ ಪಾಂಗ್ ಕಲಾ ತಂಡದವರಿಂದ ಗುಮಟಾ ಪಾಂಗ್(Gumatepang) ವಾದ್ಯ ಪ್ರದರ್ಶನ, ಕೈಗಾದ ಸುನೀಲ್ ಬಾರ್ಕೂರ್ ತಂಡದಿಂದ ಸಂಗೀತ ಕಾರ್ಯಕ್ರಮ(Music Programme), ಜೋಯಿಡಾದ ಸುಮಂಗಲಾ ದೇಸಾಯಿ ಮತ್ತು ಸಂಗಡಿಗರಿಂದ ಸುಗಮ ಸಂಗೀತ(Sugam Sangeeta) ಹಾಗೂ ಜಾನಪದ ಗೀತೆ, ಶಿರಸಿಯ ಕಲಾ ಭಾರತಿ ಕಲಾ ವೈವಿಧ್ಯ ತಂಡದ ಮನೋಜ ಅ ಪಾಲೇಕರ ಅವರಿಂದ ರೂಪಕ ಗೊಂಬೆಯಾಟ ಮಿಮಿಕ್ರಿ(Gombeyata Mimicry), ಕಾರವಾರದ ಸುಜಾತ ಕೆಹರಿಕಂತ್ರ ಅವರಿಂದ ಯೋಗ ನೃತ್ಯ(Yoga Dance) ಸ್ವರ ಸಂಗೀತ, ಸಂಗೀತ ರಸಮಂಜರಿ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 9-30ರ ನಂತರ ಖ್ಯಾತ ಗಾಯಕ ಗುರುಕಿರಣ(Famous Singer Gurukiran) ಅವರಿಂದ ಮನರಂಜನಾ ಕಾರ್ಯಕ್ರಮ ನಡೆಯಲಿದೆ.
ಇದನ್ನು ಓದಿ : ಉತ್ತರಕನ್ನಡದಲ್ಲಿ ಲೋಕಾಯುಕ್ತ ದಾಳಿ: ಭ್ರಷ್ಟಾಚಾರದ ಆರೋಪದಡಿ ಅಧಿಕಾರಿ ಮನೆ–ಕಚೇರಿ ಶೋಧ
ಕಾರವಾರದಲ್ಲಿ ಕರಾವಳಿ ಉತ್ಸವಕ್ಕೆ ವರ್ಣರಂಜಿತ ಚಾಲನೆ. ಮೊದಲ ದಿನವೇ ಜನಸಾಗರ.
