ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ(Bhatkal) : ಹುಸಿ ಕರೆ ಮಾಡಿದ ವ್ಯಕ್ತಿಯೋರ್ವ ಪೊಲೀಸರು ಮತ್ತು ಅಧಿಕಾರಿಗಳನ್ನ ಬೇಸ್ತು ಬೀಳಿಸಿದ ಘಟನೆ ಭಟ್ಕಳದಲ್ಲಿ ನಡೆದಿದೆ.
ವ್ಯಕ್ತಿಯನ್ನು ಕೊಲೆ ಮಾಡಿ ಮೃತದೇಹವನ್ನು ವೆಂಕಟಾಪುರ ನದಿಯಲ್ಲಿ ಎಸೆದು ಹೋಗಿದ್ದಾರೆ ಎಂದು ಭಟ್ಕಳ ತಹಶೀಲ್ದಾರ ಕಚೇರಿ ಕಂಟ್ರೋಲ್ ರೂಮ್ ಗೆ ಕಾಲ್ ಮಾಡಿ ತಿಳಿಸಿ ಆತಂಕ ಸೃಷ್ಟಿಸಿದ್ದ. ಕರೆ ಮಾಡಿದ ಸಂದರ್ಭದಲ್ಲಿಯೇ ಪುನಃ ಮಾಹಿತಿ ಕೇಳುವುದರೊಳಗಾಗಿ ಕರೆಯನ್ನು ಕಡಿತಗೊಳಿಸಿದ್ದ.
ಕರೆ ಆಧರಿಸಿ ಸ್ಥಳಕ್ಕೆ ಹೋದ ತಹಸೀಲ್ದಾರ, ಗ್ರಾಮೀಣ ಠಾಣೆ ಪೊಲೀಸರು, 112 ವಾಹನ ಹಾಗೂ ಕಂದಾಯ ಇಲಾಖೆ ಸಿಬ್ಬಂದಿಗಳು ಸುತ್ತಮುತ್ತ ಎಷ್ಟೇ ಹುಡುಕಾಡಿದರೂ ಯಾವುದೇ ಮೃತ ದೇಹ ಪತ್ತೆಯಾಗಿಲ್ಲ. ಹೀಗಾಗಿ ಇದೊಂದು ಹುಸಿ ಕರೆ ಎಂದು ವಾಪಸ್ ಮರಳಿದ್ದಾರೆ.
ಮಳೆಗಾಲದ ಮುನ್ನಚ್ಚರಿಕೆಯಾಗಿ ಏನಾದ್ರು ಅವಘಡ ಸಂಭವಿಸಿದರೆ ಸಾರ್ವಜನಿಕರಿಗೆ ಅನುಕೂಲಕ್ಕಾಗಿ ತಾಲೂಕಾಡಳಿತ ಕಂಟ್ರೋಲ್ ರೂಮ್ ತೆರೆದಿತ್ತು. ಆದರೆ ಕೊಲೆಯಾಗಿದೆ ಎಂದು ಹೇಳಿ ಒಂದೇ ಸಮನೆ ಅಧಿಕಾರಿಗಳ, ಪೊಲೀಸರ ದಿಕ್ಕು ತಪ್ಪಿಸಿದ ಅಸಾಮಿ ಯಾರೆಂಬುದು ಗೊತ್ತಾಗಿಲ್ಲ. . ಕರೆ ಮಾಡಿದ ವ್ಯಕ್ತಿ ಯಾರು ಎಂಬುದನ್ನು ನಾವು ಪತ್ತೆ ಹಚ್ಚುತ್ತೇವೆ ಎಂದು ತಹಸೀಲ್ದಾರ ನಾಗೇಂದ್ರ ಕೋಳಶೆಟ್ಟಿ ಹೇಳಿದ್ದಾರೆ.
ಇದನ್ನು ಓದಿ : ಮನೆ ಸಮೀಪದ ಕಾಲುವೆಗೆ ಬಿದ್ದು ಮಗು ದುರ್ಮರಣ.
ದಾಂಡೇಲಿಯಲ್ಲಿ ಅತ್ಯಾರ ಆರೋಪಿಗೆ ಪೈರಿಂಗ್. ಓರ್ವ ಪಿಎಸ್ಐ ಸೇರಿ ಇಬ್ಬರು ಪೊಲೀಸರಿಗೆ ಗಾಯ.
ಮನೆಯೊಳಗೆ ಅವಿತುಕೊಂಡ ಚಿರತೆ. ನೋಡಿ ಕೂಗಿದ ಮಹಿಳೆ. ಶಬ್ದಕ್ಕೆ ಹೊರ ಬಂದು ಯುವಕನ ಮೇಲೆ ದಾಳಿ.