ಹೊನ್ನಾವರ : ಸಿದ್ದಾಪುರ (SIDDAPURA) ನಿರಂತರ ಮಳೆ (RAIN)ಬೀಳ್ತಾ ಇದ್ದಿದರಿಂದ ಹೊನ್ನಾವರದ ತಾಲೂಕಿನ ಗುಂಡಬಾಳ ನದಿಯಲ್ಲೂ ನೀರಿನ ಪ್ರಮಾಣ ಹೆಚ್ಚಳವಾಗಿದೆ.
ಗುಂಡಬಾಳ ನದಿಯಲ್ಲಿ ನೆರೆ (FLUD) ಪ್ರವಾಹದಿಂದಾಗಿ ಚಿಕ್ಕನಕೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಜನಕೇರಿ, ಹಿತ್ತಲಕೇರಿ ಭಾಗದಲ್ಲಿ ಮನೆಗಳಿಗೆ ನೀರು ನುಗ್ಗಿದೆ. ಮುನ್ನೆಚ್ಚರಿಕೆಯಾಗಿ ನಿವಾಸಿಗಳನ್ನ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದೆ.
ಜಿಲ್ಲಾಧಿಕಾರಿ ಸೂಚನೆಯಂತೆ ನದಿ ಪಾತ್ರದ ಕೆಲ ಶಾಲೆಗಳಿಗೆ ರಜೆ (HOLIDAY ))ಘೋಷಿಸಲಾಗಿದೆ. ಅನಿಲಗೋಡ್ ಜನತಾ ವಿದ್ಯಾಲಯ, ಹಿರಿಯ ಪ್ರಾಥಮಿಕ ಶಾಲೆ, ಗುಂಡಬಾಳ ಶಾಲೆ ನಂ-2, ಗುಂಡಿಬೈಲ್ ಶಾಲೆ ನಂ-2, ವಲ್ಕಿಯ ಹುಡ್ಗೋಡ ಇಟ್ಟಿಹಾದ ಪಬ್ಲಿಕ್ ಸ್ಕೂಲ್, ಗಂಜಿಗೆರೆ ಕಿರಿಯ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಮಳೆಯ ಅಬ್ಬರಕ್ಕೆ ವರ್ನಕೇರಿ ಗ್ರಾಮದ ಬಳಿಯ ರಾಷ್ಟ್ರೀಯ ಹೆದ್ದಾರಿ (NATIONAL HIGHWAY) ಯಲ್ಲಿ ಗುಡ್ಡ ಕುಸಿದಿದೆ. ಇದರಿಂದ ಹೊನ್ನಾವರ -ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಆಗಿದೆ. ವಾಹನ ಸಂಚಾರ ಅಸ್ತವ್ಯಸ್ತವಾಗಿದೆ.