ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕುಮಟಾ(Kumta) : ಹೆದ್ದಾರಿಯಲ್ಲಿ ಅಪಘಾತಗೊಂಡ ಅಪರಿಚಿತ ವ್ಯಕ್ತಿಗಳಿಗೆ ಮೊದಲ 7 ದಿನಗಳವರೆಗೆ ₹2.5 ಲಕ್ಷದವರೆಗೆ ಉಚಿತ ಚಿಕಿತ್ಸೆ(Free Treatment) ನೀಡುವ ಹೊಸ “ಆ್ಯಕ್ಸಿಡೆಂಟ್ ಇನ್ಸುರೆನ್ಸ್ ಸ್ಕೀಮ್”(Accident Insurance Scheme) ಜಾರಿಗೊಳಿಸುವುದಾಗಿ ಆರೋಗ್ಯ ಇಲಾಖೆ ಸಚಿವ ಯು.ಟಿ. ಖಾದರ್ ಘೋಷಿಸಿದರು(Health Minister U T Kader Declared).
ಉತ್ತರಕನ್ನಡ(Uttarkannada) ಜಿಲ್ಲೆಯ ಕುಮಟಾದ(Kumta) ನೂತನ ಟ್ರಾಮಾ ಕೇರ್ ಸೆಂಟರ್ (Trama Care Center) ಲೋಕಾರ್ಪಣೆಗೊಳಿಸಿ ಮಾತನಾಡಿದ ಅವರು, ಅಪಘಾತಕ್ಕೊಳಗಾದ ಯಾವುದೇ ವ್ಯಕ್ತಿಯ ಜೀವ ಉಳಿಸುವುದು ಸರ್ಕಾರದ ಪ್ರಮುಖ ಆದ್ಯತೆಯಾಗಿದ್ದು, ಈ ಯೋಜನೆಯ ಕುರಿತು ಮುಖ್ಯಮಂತ್ರಿಗಳೊಂದಿಗೆ(Chief Minister) ಚರ್ಚಿಸಿ ಶೀಘ್ರದಲ್ಲೇ ಅನುಮೋದನೆ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದರು.
ಸಚಿವರು ತಿಳಿಸಿದಂತೆ, ಯೋಜನೆಯಡಿ ಅಪಘಾತದ ನಂತರದ ಮೊದಲ ಏಳು ದಿನಗಳ ಚಿಕಿತ್ಸೆಗೆ ₹2.5 ಲಕ್ಷದವರೆಗೆ ಉಚಿತ ವೈದ್ಯಕೀಯ(Free Medical) ನೆರವು ನೀಡಲಾಗುತ್ತದೆ. ಈ ಸೌಲಭ್ಯ ರಾಜ್ಯದವರಷ್ಟೇ ಅಲ್ಲದೆ, ದೇಶದ ಹಾಗೂ ವಿದೇಶದ ನಾಗರಿಕರಿಗೂ ಅನ್ವಯವಾಗುವಂತೆ ರೂಪಿಸಲಾಗುತ್ತಿದೆ ಎಂದರು.
ಈ ಹಿಂದೆ ಜಾರಿಗೊಂಡಿದ್ದ ಹರೀಶ್ ಸಾಂತ್ವನ ಯೋಜನೆಯನ್ನು ಉಲ್ಲೇಖಿಸಿದ ಅವರು, ನಂತರ ಕೇಂದ್ರ ಸರ್ಕಾರವೂ ಅದೇ ಮಾದರಿಯ ಯೋಜನೆ ಆರಂಭಿಸಿತು. ಆದರೆ ಹೊಸ ಯೋಜನೆಯಲ್ಲಿ(New Scheme) ಚಿಕಿತ್ಸಾ ಮಿತಿಯನ್ನು ₹2.5 ಲಕ್ಷಕ್ಕೆ ಹೆಚ್ಚಿಸಲಾಗುತ್ತಿದೆ ಎಂದು ಹೇಳಿದರು.
ಸರ್ಕಾರಿ ಹಾಗೂ ಖಾಸಗಿ ಟ್ರಾಮಾ ಕೇರ್ ಆಸ್ಪತ್ರೆಗಳಿಗೂ ಯೋಜನೆ ಅನ್ವಯವಾಗಲಿದ್ದು, ಚಿಕಿತ್ಸೆ ನೀಡಿದ ಆಸ್ಪತ್ರೆಗಳಿಗೆ ಸರ್ಕಾರವೇ ವೆಚ್ಚವನ್ನು ಭರಿಸಲಿದೆ. ಇದರಿಂದ ಆಸ್ಪತ್ರೆಗಳ ನಿರ್ವಹಣೆಯೂ ಸುಗಮವಾಗಲಿದೆ ಎಂದು ಸಚಿವರು ತಿಳಿಸಿದರು.
ಅಪಘಾತಕ್ಕೊಳಗಾದ ವ್ಯಕ್ತಿ ಎಲ್ಲಿಯವರೇ ಆಗಿರಲಿ, ಅವರ ಜೀವ ಉಳಿಸುವ ಕೆಲಸವೇ ಸರ್ಕಾರದ ಮೊದಲ ಆದ್ಯತೆ ಎಂದು ಸಚಿವ ಯು.ಟಿ. ಖಾದರ್(Minister U T Khader) ಹೇಳಿದರು.
