ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar): ಕುಮಟಾ ತಾಲೂಕಿನ(Kumta Taluku) ಕುಂಭೇಶ್ವರ ದೇವಸ್ಥಾನದ(Kumbheshwar Temple) ಅರ್ಚಕ ವಿಶ್ವೇಶ್ವರ ಭಟ್ ಕೊಲೆ ಮಾಡಿದ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ(Life imprisonment) ನೀಡಿ ಜಿಲ್ಲಾ ನ್ಯಾಯಾಲಯ(District Court) ಗುರುವಾರ ತೀರ್ಪು ನೀಡಿದೆ.
ಕೂಜಳ್ಳಿ ಮೆಣಸಿನಕೆರೆಯ ಮಂಜುನಾಥ ಈಶ್ವರ ಹೆಗಡೆ, ಶಿರಸಿ(Sirsi) ತಾಲೂಕಿನ ಸೋಮನಹಳ್ಳಿಯ ಹರೀಶ ಸುಬ್ರಾಯ ಹೆಗಡೆ ಹಾಗೂ ಸೊರಬ(Soraba) ತಾಲೂಕಿನ ಚಂದ್ರಗುತ್ತಿ ಧನಂಜಯ ಚಂದ್ರಶೇಖರ್ ನಾಯ್ಕ ಶಿಕ್ಷೆಗೊಳಗಾದವರು.
2018 ರ ಅಕ್ಟೋಬರ್ 16ರಂದು ಜಮೀನಿನ ಪೂಜೆಯೊಂದಕ್ಕೆ ಕರೆಸಿ ಕೊಲೆ ಮಾಡಲಾಗಿತ್ತು. ಸಿಸಿ ಕ್ಯಾಮರಾ ದೃಶ್ಯಾವಳಿಗಳು, ಹಲವು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಗಣಿಸಿ ಜಿಲ್ಲಾ ನ್ಯಾಯಾಧೀಶ ಪರಮೇಶ್ವರ ಪ್ರಸನ್ನ ಬಿ.ಅವರಯ ಮಹತ್ವದ ತೀರ್ಪು ನೀಡಿದ್ದಾರೆ.
ಜಮೀನಿನ ಪೂಜೆ ಮಾಡಬೇಕು ಎಂದು ವಿಶ್ವೇಶ್ವರ ಭಟ್ ಅವರನ್ನು ಕರೆದೊಯ್ದು, ಕಬ್ಬಿಣದ ಸಲಾಕೆಯಿಂದ ಅವರ ತಲೆಗೆ ಹೊಡೆದು ಕೊಲೆ ಮಾಡಿದ್ದರು. ನಂತರ ಶವವನ್ನ ಆರೋಪಿಯೋರ್ವನ ಮನೆ ಮುಂದಿನ ಜಮೀನಿನಲ್ಲಿ ಹೂತು ಹಾಕಿದ್ದರು.
ತಮ್ಮ ಪತಿ ಮನೆಗೆ ಬಾರದೇ ಇರೋದ್ರಿಂದ ಪತ್ನಿ ಸರಸ್ವತಿ ಭಟ್ ಅವರು ಸಂಬಂಧಿಕರಲ್ಲಿ ವಿಚಾರಿಸಿದ್ದರು. ಎರಡು ದಿನದವರೆಗೆ ಪತ್ತೆಯಾಗದಿದ್ದಾಗ ಕುಮಟಾ(Kumta) ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ವಿಶ್ವೇಶ್ವರ ಭಟ್ ಅವರು ಹೋಗುವ ಸಂದರ್ಭದಲ್ಲಿನ ಕೆಲ ದೃಶ್ಯಗಳು ಪ್ರಕರಣಕ್ಕೆ ಸಾಕ್ಷ್ಯ ಒದಗಿಸಿತ್ತು. ಹೀಗಾಗಿ ತನಿಖೆ ನಡೆಸಿದ ಅಂದಿನ ಕುಮಟಾ ಸಿಪಿಐ ಸಂತೋಷ್ ಶೆಟ್ಟಿ ಹಾಗೂ ಪಿಎಸ್ಐ ಸಂಪತ್ ಕುಮಾರ ನೇತೃತ್ವದ ತಂಡ ಆರೋಪಿಗಳಿಗೆ ಹೆಡೆ ಮುರಿ ಕಟ್ಟುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ಆರೋಪಿಗಳ ವಿಚಾರಣೆಯಿಂದ ಕೊಲೆ ಯಾಗಿರೋದು ಗೊತ್ತಾಗಿತ್ತು.
ಘಟನೆ ನಡೆದ ಎರಡು ದಿನಗಳ ನಂತರ ಶವವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆ ನಡೆಸಲಾಗಿತ್ತು. ಪ್ರಕರಣ ಸಂಬಂಧ ಕುಮಟಾ ಠಾಣೆಯ ಇನ್ಸ್ ಪೆಕ್ಟರ್ ತನಿಖೆ ನಡೆಸಿ, ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು.
ಸರ್ಕಾರಿ ಅಭಿಯೋಜಕಿ ತನುಜಾ ಹೊಸಪಟ್ಟಣ ಅವರು ಸರ್ಕಾರದ ಪರವಾಗಿ ವಾದ ಮಂಡಿಸಿದ್ದರು.
ಕುಂಭೇಶ್ವರ ದೇವಸ್ಥಾನ ಅರ್ಚಕ ವಿಶ್ವೇಶ್ವರ ಭಟ್ ಅವರ ಚಿಕ್ಕಪ್ಪ ನಾಗೇಶ ಭಟ್ ಅವರು ಆಸ್ತಿ ವಿಚಾರವಾಗಿ ಗಲಾಟೆ ನಡೆಸಿದ್ದರು. ನ್ಯಾಯಾಲಯದಲ್ಲಿ ಪ್ರಕರಣ ನಡೆಯುತಿತ್ತು. ಆಸ್ತಿ ಕೈ ತಪ್ಪಿ ಹೋಗುತ್ತದೆ ಎಂಬ ಕಾರಣಕ್ಕಾಗಿ ವಿಶ್ವೇಶ್ವರ ಭಟ್ ಅವರನ್ನ ಕೊಲೆ ಮಾಡಿರೋದು ಪ್ರಕರಣದಲ್ಲಿ ಗೊತ್ತಾಗಿದೆ. ಹೀಗಾಗಿ ಮೂವರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ(Life imprisonment) ವಿಧಿಸಿ ನ್ಯಾಯಾಲಯ ಆದೇಶಿಸಿದೆ. ಪ್ರಕರಣದಲ್ಲಿ ಮೃತರ ಪತ್ನಿಗೆ 5 ಲಕ್ಷ ಪರಿಹಾರ ನೀಡಬೇಕೆಂದು ಆದೇಶದಲ್ಲಿ ತಿಳಿಸಲಾಗಿದೆ.
