ಹಳಿಯಾಳ : ತಿಂಗಳಿಂದ ನೀರು ಬಿಡದ ಕಾರಣಕ್ಕೆ ಆಕ್ರೋಶಗೊಂಡ ನಾಗರಿಕರು ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿ ಪಂಚಾಯತ್ ಗೆ ಬೀಗ ಜಡಿದ ಘಟನೆ ಹಳಿಯಾಳ ತಾಲೂಕಿನ ಅರ್ಲವಾಡದಲ್ಲಿ ಗ್ರಾಮದಲ್ಲಿ ನಡೆದಿದೆ.

ಈ ವೇಳೆ ಮಹಿಳೆಯರು ಖಾಲಿ ಕೊಡ ಹಿಡಿದು ಪ್ರತಿಭಟಿಸಿದ್ದಾರೆ.  ಸ್ಥಳಕ್ಕೆ ಬಂದ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಪರಶುರಾಮ ಗಸ್ತೆ  ಭೇಟಿ ನೀಡಿದರೂ ಕೂಡ ಕ್ಯಾರೇ ಮಾಡಿಲ್ಲ. ನೀರಿನ ತೊಂದರೆಯಿಂದ ಜನರು ತೊಂದರೆ ಅನುಭವಿಸುತ್ತಿದ್ದರೂ ನಮ್ಮಕಷ್ಟ ಅಧಿಕಾರಿಗಳಿಗೆ ತಿಳಿಯುತ್ತಿಲ್ಲ. ಆದ್ದರಿಂದ ತಕ್ಷಣ ನಮಗೆ ನೀರು ಪೂರೈಸಿ ಎಂದು ನಾಗರಿಕರು ಪಟ್ಟು ಹಿಡಿದಿದ್ದಾರೆ.

ಸ್ಥಳಕ್ಕೆ ದೌಡಾಯಿಸಿದ ಪಿಎಸ್ಐ ಮಹಾಂತೇಶ ಕುಂಬಾರ ಗ್ರಾಮಸ್ಥರ ಮನವೊಲಿಸಲು ಪ್ರಯತ್ನ ಮಾಡಿದರೂ ಪ್ರಯೋಜನವಾಗಿರಲಿಲ್ಲ.