ಕಾರವಾರ : ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಕಾರವಾರದ ಸುರಂಗ ಮಾರ್ಗದ ಸಮೀಪ ಕುಸಿತ ಉಂಟಾಗಿದೆ.

ಬಿಣಗಾದಿಂದ (BINAGA) ಕಾರವಾರಕ್ಕೆ ತೆರಳುವ ಮೊದಲ ಸುರಂಗ ಪಕ್ಕದಲ್ಲಿ  ಕಲ್ಲು ಮಣ್ಣುಗಳು ಮೇಲಿಂದ ಜಾರಿ ಬಿದ್ದಿದೆ. ಬೆಳಿಗ್ಗೆ ವಾಹನವೊಂದರಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಅದೃಷ್ಟವಶಾತ್ ಪಾರಾಗಿದ್ದಾರೆ.

ಸ್ಥಳಕ್ಕೆ ಬಂದ ಕಾರವಾರ ಟ್ರಾಫಿಕ್ (TRAFFIC) ಪಿ ಎಸ್ ಐ ದೇವೇಂದ್ರ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಐಆರ್ಬಿ ಕಾರ್ಮಿಕರು ಸ್ಥಳಕ್ಕೆ ದೌಡಾಯಿಸಿ ಹೆದ್ದಾರಿಯಲ್ಲಿ ಬಿದ್ದ ಕಲ್ಲು ಮಣ್ಣು ತೆರವುಗೊಳಿಸಿದ್ದಾರೆ. ಸದ್ಯ  ಮುನ್ನೆಚ್ಚರಿಕೆ ಕ್ರಮವಾಗಿ ಬಿಣಗಾ ಕಾರವಾರ ಮಾರ್ಗವನ್ನ ಬಂದ್ ಮಾಡಲಾಗಿದ್ದು ಬಿಣಗಾದಿಂದ ಕಾರವಾರಕ್ಕೆ ಬರುವ ವಾಹನಗಳು ಬೈತಕೋಲ್ ಮಾರ್ಗದಲ್ಲಿ ಸಂಚಾರಿಸಬೇಕಾಗಿದೆ.

ನಿರಂತರವಾಗಿ ಮಳೆ ಸುರಿಯುತ್ತಿರುವುದರಿಂದ ಸುರಂಗ ಮಾರ್ಗದ ಮೇಲ್ಗಡೆಯಿದಿಂದ ನೀರು ಜಲಪಾತದಂತೆ ಬೀಳುತ್ತಿದ್ದೂ  ಅಪಾಯ ಸೂಚಿಸುತ್ತಿದೆ. ಹೀಗಾಗಿ ಹೆದ್ದಾರಿಯಲ್ಲಿ ಸಂಚರಿಸುವವರು ಜಾಗೃತೆ ವಹಿಸಬೇಕಾಗಿದೆ.