ಕುಮಟಾ(KUMTA) : ಟ್ರ್ಯಾಕ್ ಮ್ಯಾನ್ ಓರ್ವರ ಸಮಯ ಪ್ರಜ್ಞೆಯಿಂದಾಗಿ ಕೊಂಕಣ ರೈಲ್ವೆ (KONKAN RAILWAY) ಮಾರ್ಗದಲ್ಲಿ ಸಂಭವಿಸಬಹುದಾದ ದುರಂತವೊಂದು ತಪ್ಪಿದೆ.
ಕುಮಟಾ ಮತ್ತು ಹೊನ್ನಾವರ(HONNAVAR) ರೈಲ್ವೆ ಮಾರ್ಗದ ಹಳಿಯಲ್ಲಿ ವೆಲ್ಡಿಂಗ್ ಬಿಟ್ಟು ಸಂಚರಿಸುವ ರೈಲು ಹಳಿ ತಪ್ಪುವ ಸಾಧ್ಯತೆಯಿತ್ತು. ಇದನ್ನ ಗಮನಿಸಿ ರೈಲ್ವೆ ಟ್ರಾಕ್ ಮ್ಯಾನ್ ಮಹಾದೇವ ನಾಯ್ಕ ಎಂಬುವವರು ಮಹಾದುರಂತವೊಂದನ್ನ ತಪ್ಪಿಸಿದ್ದಾರೆ.
ಮಹಾದೇವ ನಾಯ್ಕ ಸರಿಸುಮಾರು 500ಮೀಟರ ದೂರ ಓಡಿ ಹೋಗಿ ರೈಲು ನಿಲ್ಲಿಸಿದ್ದಾರೆ. ಬೆಳಗ್ಗಿನ ಜಾವ ಸುಮಾರು 5ಗಂಟೆ ಸುಮಾರಿಗೆ ರಾಜಧಾನಿ ಎಕ್ಸಪ್ರೆಸ್ ರೈಲು ತಿರುವನಂತಪುರದಿಂದ ನವದೆಹಲಿ ಕಡೆ ಹೋಗುತ್ತಿತ್ತು. ಈ ರೈಲನ್ನು ಹೊನ್ನಾವರದಲ್ಲೆ ನಿಲ್ಲಿಸುವಂತೆ ಸ್ಟೇಶನ್ ಮಾಸ್ಟರಿಗೆ ಪೋನ್ ಮಾಡಿದ್ದ. ಆದರೆ ಆಗಲೆ ಈ ರೈಲು ಹೊನ್ನಾವರ ಸ್ಟೇಶನ್‌ನಿಂದ ಬಿಡಲಾಗಿತ್ತು. ಇನ್ನೇನು ಕೆಲ ನಿಮಿಷಗಳು ಆದರೆ ರೈಲು ದುರಂತ ಉಂಟಾಗುವ ಎಲ್ಲಾ ಸಾಧ್ಯತೆಗಳಿತ್ತು.
ಮಹಾದೇವ ತಕ್ಷಣ ಹಳಿ ವೆಲ್ಡಿಂಗ್ ಬಿಟ್ಟ ಸ್ಥಳದಿಂದ 500ಮೀಟರ್ ದೂರು ಓಡಿ ಹೋಗಿ ಎದುರಿಗೆ ಬರುತ್ತಿದ್ದ ರೈಲಿಗೆ ಕೆಂಪು ಬಾವುಟ ತೋರಿಸಿ ಅಲ್ಲಿ ರೈಲು ನಿಲ್ಲಗಡೆ ಮಾಡಲು ಸೂಚಿಸಿದ್ದ. ಈ ಮೂಲಕ ಸಾವಿರಾರು ಪ್ರಯಾಣಿಕರ ಪ್ರಾಣವನ್ನ ಉಳಿಸಿದ್ದಾನೆ. ಈತನ ಸಮಯ ಪ್ರಜ್ಞೆಗೆ ರೈಲ್ವೆ ಇಲಾಖೆಯಿಂದ ಸನ್ಮಾನಿಸಲಾಗಿದ್ದು, ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನು ಓದಿ : ಧನಲಕ್ಷ್ಮೀ ವಿವಿಗೆ ನಾಲ್ಕನೇ RANK.