ಬೈಂದೂರು(BYANDURU): ತಾಲ್ಲೂಕಿನ ಗುಜ್ಜಾಡಿ (GUJJADI) ಗ್ರಾಮ ಪಂಚಾಯಿತಿನ ಮಾವಿನಕಟ್ಟೆ ನಾಯಕವಾಡಿ ಜನತಾ ಕಾಲೋನಿ ಮುಳ್ಳಿಕಟ್ಟೆ ಸಂಪರ್ಕಿಸುವ ರಸ್ತೆ ಅವ್ಯವಸ್ಥೆಯಿಂದ ಮಹಿಳೆಯೊಬ್ಬರ ಮನೆ ಬೀಳುವ ಸ್ಥಿತಿಗೆ ತಲುಪಿದೆ.
ಗಂಗಾ ಪೂಜಾರ್ತಿ ಅವರ ಮನೆ ರಸ್ತೆಯ ಚರಂಡಿ ಅವ್ಯವಸ್ಥೆಯಿಂದ ನೀರು ಸಂಪೂರ್ಣ ಬ್ಲಾಕ್ ಆಗಿ ರಸ್ತೆಯ ನೀರು ಮನೆ ಒಳಗೆ ಹರಿದು ಬರುತ್ತಿದೆ. ದಿನನಿತ್ಯ ಶಾಲೆಗೆ ಹೋಗುವ ನೂರಾರು ಮಕ್ಕಳು ಹಾಗೂ ಮೀನುಗಾರಿಕೆ ಕೆಲಸಕ್ಕೆ ಹೋಗುವರು ಮತ್ತು ಜನತಾ ಕಾಲೋನಿಯ ಗಂಡಸರು ಮಹಿಳೆಯರು ಕೆಲಸಕ್ಕೆ ಹೋಗುವವರು ಇದೆ ಮುಖ್ಯರಸ್ತೆ ಅವಲಂಭಿಸಿಕೊಂಡಿದ್ದಾರೆ.
ಗುಜ್ಜಾಡಿ ಗ್ರಾಮ ಪಂಚಾಯತ್ (GRAMA PANCHAYAT) ಸಂಬಂಧಿಸಿದ ಈ ರಸ್ತೆ ಭಾಗದಲ್ಲಿ ದೊಡ್ಡ ದೊಡ್ಡ ಮರಗಳಿಂದ ಕೂಡಿದ್ದು ಹಾಡಿಗಳಿವೆ. ಈ ಹಿಂದೆ ಮಳೆಗಾಲದಲ್ಲಿ ಜನತಾ ಕಾಲೋನಿಯಿಂದ ಹರಿದು ಬಂದ ನೀರು ಹಾಡಿಯ ಮೂಲಕ ಹೋಗಿ ಕೊಡಪಾಡಿ ತೋಡು ಸೇರಿ ನಂತರ ಸಮುದ್ರಕ್ಕೆ ಸೇರುತ್ತಿತ್ತು. ಆದರೆ ಕಳೆದ ಮೂರ್ನಾಲ್ಕು ವರ್ಷಗಳಿಂದ ಮಾವಿನಕಟ್ಟೆ ರಸ್ತೆ ಸಮೀಪ ಇರುವ ಗಂಗಾ ಪೂಜಾರ್ತಿ ಯವರ ಮನೆ ರಸ್ತೆಯ ಚರಂಡಿ ಅವ್ಯವಸ್ಥೆಯಿಂದ ನೀರು ಸಂಪೂರ್ಣ ಬ್ಲಾಕ್ ಆಗಿ ರಸ್ತೆಯ ನೀರು ಮನೆ ಒಳಗೆ ಹರಿದು ಬಂದು ಮನೆ ಸಂಪೂರ್ಣ ಜಲಾವೃತಗೊಂಡಿದೆ. ಮನೆ ಬೀಳುವ ಪರಿಸ್ಥಿತಿ ಎದುರಾಗಿದೆ. ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬರಬೇಕೆಂದು ದಲಿತ ಮುಖಂಡ ಮಂಜುನಾಥ್ ಮಾವಿನಕಟ್ಟೆ ಗುಜ್ಜಾಡಿ ಗ್ರಾಮ ಪಂಚಾಯತ್ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ರಸ್ತೆಯಾ ನೀರು ಚರಂಡಿ ಇಲ್ಲದೆ ನಮ್ಮ ಮನೆ ಕಡೆಗೆ ಹರಿಯುತ್ತಿದ್ದು ಮನೆ ಬೀಳುವ ಪರಿಸ್ಥಿತಿ ಎದುರಾಗಿದೆ ದಿನನಿತ್ಯ ಸಾವು ಬದುಕಿನ ಮಧ್ಯೆ ದಿನ ಕಳೆಯುತ್ತಿದ್ದೇವೆ ನಮ್ಮ ಗೋಳು ಕೇಳುವವರೇ ಇಲ್ಲದಂತಾಗಿದೆ ಎಂದು ಮನೆಯಲ್ಲಿ ಗಂಗಾ ಪೂಜಾರ್ತಿ ಅಳಲು ತೋಡಿಕೊಂಡಿದ್ದಾರೆ.
ಕೂಡಲೇ ಶಾಸಕರು (MLA) ಹಾಗೂ ಸಂಬಂಧಪಟ್ಟ ಪಂಚಾಯತ್ ಅಧಿಕಾರಿಗಳು ಗಮನ ಹರಿಸಿ ತಾತ್ಕಾಲಿಕ ನೆಲೆಯಲ್ಲಿ ರಸ್ತೆಗೆ ಸೂಕ್ತ ಚರಂಡಿ ವ್ಯವಸ್ಥೆ ಕಲ್ಪಿಸಬೇಕಾಗಿದೆ.