ಕಾರವಾರ : ಗೋವಾದಿಂದ ಕಾರವಾರ (GOA to KARWAR) ಸಂಪರ್ಕಿಸುವ ಕಾಳಿ ಸೇತುವೆ ಕುಸಿದಿದ್ದರಿಂದ ಕಾರವಾರ ಸುತ್ತಮುತ್ತಲಿನ ಜನರು ಗಾಬರಿಯಾಗಿದ್ದಾರೆ.

ಕಾರವಾರಿಗರ ವ್ಯವಹಾರ(BUSINESS) ಗೋವಾದಲ್ಲಿದೆ. ಗೋವೆಯನ್ನರ ಸಂಬಂಧಿಕರು(RELATION) ಕಾರವಾರದಲ್ಲಿದ್ದಾರೆ. ಒಂದು ವೇಳೆ ಹೆದ್ದಾರಿ(HIGHWAY) ಸಂಪರ್ಕವೇ ಕಡಿತವಾದರೆ ಏನು ಗತಿ ಎಂಬ ಚಿಂತೆ ಕಾಡಿದೆ. ಹೌದು. ಮಂಗಳವಾರ ತಡರಾತ್ರಿ ಸಂಭವಿಸಿದ ದುರಂತ ಕಾರವಾರ ಮತ್ತು ಗೋವಾದವರನ್ನ ಹೆಚ್ಚಾಗಿ ಕಾಡಿಸಿದೆ. ಘಟನೆ ನಡೆದಾಕ್ಷಣವೇ ಕಾಳ್ಗಿಚ್ಚಿನಂತೆ ಹರಡಿ ಜನರ ನಿದ್ದೆಯೇ ಹೊರಟು ಹೋಗಿದೆ.

ಶಿರೂರು ಗುಡ್ಡ ಕುಸಿತ(SHIRURU LANDSLIDE)ದ ಘಟನೆ ನೋಡಲಾಗದವರು ಹೊಸದಾಗಿ ಮಾಡಿರುವ ಕಾಳಿ ಸೇತುವೆ ಮೇಲೆ ಬಂದು ಸ್ಥಿತಿ ನೋಡಿ ಹೌಹಾರಿದ್ದಾರೆ. ರಾತ್ರಿ(NIGHT) ವೇಳೆಯಲ್ಲಿ ಆಯಿತು. ಹಗಲಿನ ಸಂದರ್ಭದಲ್ಲಿ ಸೇತುವೆ ಕುಸಿದಿದ್ದರೆ ಯಾವ ರೀತಿಯಲ್ಲಿ ತೊಂದರೆಯಾಗುತಿತ್ತು ಎಂದು ಮಾತಾಡಿಕೊಳ್ಳುತ್ತಿದ್ದಾರೆ.

ಕಾಳಿ ಸೇತುವೆಯ ಹಿನ್ನಲೆ ತಿಳಿಯುವುದಾದರೆ 29-11-1955 ರಂದು ಕಾಳಿ ನದಿಗೆ ಅಡ್ಡಲಾಗಿ 665 ಮೀಟರ್ ಉದ್ದ ಸೇತುವೆ ನಿರ್ಮಿಸಲಾಗಿತ್ತು. ಸೇತುವೆ ನಿರ್ಮಾಣಕ್ಕಾಗಿ ಮೂರು ಕಂಪನಿಗಳು ಮುಂದೆ ಬಂದು ಹಿಂದಕ್ಕೆ ಸರಿದಿವೆ. ಆದರೆ ಗ್ಯಾಮನ್ ಇಂಡಿಯಾ ಕಂಪನಿ (GYAMAN INDIA) ಈ ಸೇತುವೆಯನ್ನ ನಿರ್ಮಿಸಿತ್ತು.

ಕಾಶ್ಮೀರದಿಂದ ಕನ್ಯಾಕುಮಾರಿ(KASHMIR to KANYAKUMARI) ವರೆಗಿನ ಸಂಪರ್ಕ ಈ ಸೇತುವೆಯ ಮೂಲಕವೇ ನಡೆದಿರುವುದು ಇತಿಹಾಸ(HISTORY). ಸೇತುವೆ ಆಗುವ ಮೊದಲು ಕಾರವಾರ ಜನತೆ ಪಕ್ಕದ ಸದಾಶಿವಗಡ ಹೋಗಬೇಕಂದರೆ ಬಾರ್ಜ್ (BARGE)ಮೂಲಕ ತೆರಳುತ್ತಿದ್ದರು. ಸರಕು ವಾಹನಗಳು(GOODS VEHICLE) ಕೂಡ ಬಾರ್ಜ್ ಮೂಲಕವೇ ಹೋಗತಿತ್ತು. ಆದರೆ ಎಚ್ ಡಿ ದೇವೇಗೌಡರು(H D DEVEGOUDA) ಲೋಕೋಪಯೋಗಿ ಇಲಾಖೆ(PWD) ಸಚಿವರಾಗಿದ್ದಾಗ, ಪ್ರಭಾಕರ್ ರಾಣೆ (PRABHAKAR RANE) ಅವರು ಕಾರವಾರ-ಜೋಯಿಡ ಶಾಸಕರಾದ ಸಂದರ್ಭದಲ್ಲಿ 05-03-1984ರಲ್ಲಿ ಕಾಳಿ ಸೇತುವೆ ಸೇತುವೆ ಉದ್ಘಾಟಿಸಲಾಗಿತ್ತು.

ಇದೀಗ 07-08-2024 ರಂದು ಬೆಳಿಗ್ಗೆ 1 ಗಂಟೆ ಸುಮಾರಿಗೆ 40 ವರ್ಷದ ಸೇತುವೆ ಕುಸಿದು ಆತಂಕ ಮೂಡಿಸಿದೆ. ಈ ಹಿಂದೆ ಹಲವು ಬಾರೀ ಸಹ ಈ ಸೇತುವೆಯ ದುಃಸ್ಥಿತಿ ಬಗ್ಗೆ ಸಾರ್ವಜನಿಕರು ಅಧಿಕಾರಿಗಳ ಗಮನಕ್ಕೆ ತಂದಾಗಲು ನಿರ್ಲಕ್ಷಿಸಲಾಗಿದೆ. ನಿರ್ಲಕ್ಷದ (NEGLIGENCE) ಪರಿಣಾಮವೇ ಈಗ ನದಿಗೆ ಸೇತುವೆ ಇಳಿದುಬಿಟ್ಟಿದೆ. ರಾತ್ರಿ ವೇಳೆ ಆಗಿದ್ದರಿಂದ ಬಾರೀ ದುರಂತ ತಪ್ಪಿದಂತಾಗಿದೆ. ಲಾರಿ ಚಾಲಕನನ್ನ ರಕ್ಷಿಸಿದ ಸ್ಥಳೀಯ ಮೀನುಗಾರರ (FISHERMAN) ಸಾಹಸ ಮೆಚ್ಚಲೇಬೇಕು.

ಏನೇ ಇರಲಿ ನಾಲ್ಕು ದಶಕಗಳ ಹಿಂದಿನ ಸೇತುವೆ ಈಗ ನೆನಪು ಮಾತ್ರ. ಅದೆಷ್ಟೋ ಸಿನೆಮಾಗಳ ಚಿತ್ರೀಕರಣಕ್ಕೆ, ಪ್ರವಾಸಿಗರ ಫೋಟೋಶೂಟ್ ಗೆ ಕಾರಣವಾಗಿದ್ದ ಸೇತುವೆ ಇನ್ನೂ ಮುಂದೆ ಸಿಗಲ್ಲ.