ಕಾರವಾರ (KARWAR): ನಗರದ ಸೆಕ್ಯೂರಿಟಿ ಗಾರ್ಡ್(SECURITY GUARD) ಸಮಯ ಪ್ರಜ್ಞೆಯಿಂದಾಗಿ ಎಟಿಎಂ ಒಂದರಲ್ಲಿ ಬಾರೀ ಕಳ್ಳತನ ತಪ್ಪಿದೆ.
ಇಂದು ಬೆಳಗಿನ ಜಾವ ನಾಲ್ಕುವರೆ ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದೆ. ನಗರದ ಅಂಬೇಡ್ಕರ್ ಸರ್ಕಲ್(AMBEDKAR CIRCLE) ಸಮೀಪ ಬಿಎಸ್ಎನ್ಎಲ್(BSNL) ಕಟ್ಟಡದಲ್ಲಿರುವ ಇಂಡಿಯನ್ ಬ್ಯಾಂಕ್ ಎಟಿಎಂ(INDIAN BANK ATM) ಗೆ ಕಳ್ಳನೋರ್ವ ನುಗ್ಗಿದ್ದ. ಯಂತ್ರದ ಗಾಜು ಒಡೆಯುವ ಸಂದರ್ಭದಲ್ಲಿ ಶಬ್ದವಾಗಿದೆ. ಅಲ್ಲಿಯೇ ಮುಂಬದಿಯಲ್ಲಿ ಇರುವ ಎಸ್ಬಿಐ(SBI) ಎಟಿಎಂ ನಲ್ಲಿ ಕರ್ತವ್ಯ ನಿರ್ವಹಿಸುವ ಸೆಕ್ಯೂರಿಟಿ ಗಾರ್ಡ್ ಸುನೀಲ್ ಎಂಬುವವರು ಗಮನಿಸಿದ್ದಾರೆ.
ಕೂಡಲೇ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದಾಗ ಸ್ಥಳಕ್ಕೆ ನಗರ ಠಾಣೆ ಪೊಲೀಸರು ಧಾವಿಸಿ ಕಳ್ಳನನ್ನ ಹಿಡಿದಿದ್ದಾರೆ. ಸಿಕ್ಕಿ ಬಿದ್ದ ಕಳ್ಳ ಹಾಸನ ಮೂಲದವನೆಂದು ಹೇಳಲಾಗುತ್ತಿದ್ದು, ಪೊಲೀಸರಿಗೆ ತನ್ನ ಹೆಸರೇನು ಎಂಬುದನ್ನ ಬಾಯಿ ಬಿಟ್ಟಿಲ್ಲ. ಹೀಗಾಗಿ ಪೊಲೀಸರು ಆತನ ವಿಚಾರಣೆ ಮುಂದುವರಿಸಿದ್ದಾರೆ. ಪೊಲೀಸ್ ಠಾಣೆಯ 150ಮೀಟರ್ ಅಂತರದಲ್ಲಿಯೇ ಕಳ್ಳತನಕ್ಕೆ ಯತ್ನಿಸಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ.
ಸೆಕ್ಯೂರಿಟಿ ಗಾರ್ಡ್ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಪ್ರಶಂಸೆ ವ್ಯಕ್ತವಾಗಿದೆ.
ಇದನ್ನು ಓದಿ : ಕಾರವಾರದಲ್ಲಿ ದೇವಾಲಯದ ಸರಣಿ ಕಳ್ಳತನ
ವಾಹನ ಸವಾರರೇ HSRP ಮಾಡಿಸದಿದ್ದಲ್ಲಿ ಬರೆ ಬೀಳೋದು ಗ್ಯಾರಂಟಿ
ರೈಲಿನಲ್ಲಿ ಬಂದರು. ಬಸ್ ನಲ್ಲಿ ಹೋದರು.