ದಾವಣಗೆರೆ : ಈ ಜೋಡಿಯೊಂದು ಪರಸ್ಪರ ಆಸರೆಯಾಗಲು  ಸಪ್ತಪದಿ  ತುಳಿದ ಘಟನೆ ಹೊನ್ನಾಳಿ ತಾಲ್ಲೂಕಿನ ಕುಂಬಳೂರು ಗ್ರಾಮದಲ್ಲಿ ನಡೆಡಿದೆ.

63 ವರ್ಷದ ನಿವೃತ್ತ ಶಿಕ್ಷಕ ನಾಗರಾಜ್ 56 ವರ್ಷದ ರುಕ್ಮಿಣಿ
ಮದುವೆಯಾದ ವಧುವರರು.   ಶಾಲಾ‌ ಶಿಕ್ಷಕರಾಗಿ ನಿವೃತ್ತಿ ‌ಹೊಂದಿದ್ದ ನಾಗರಾಜ್ ಮೂರು ಹಿಂದೆ ನಿವೃತ್ತರಾಗಿದ್ದಾರೆ. ಪತ್ನಿಯನ್ನು ಕಳೆದುಕೊಂಡು ಏಕಾಂಗಿ ಜೀವನ ನಡೆಸುತ್ತಿದ್ದರು. ಇವರ ಕೈ ಹಿಡಿದ ರುಕ್ಮಿಣಿ ಕೂಡ ಮದುವೆಯಾಗದೇ ತವರುಮನೆಯಲ್ಲೇ ಆಶ್ರಯ ಪಡೆದಿದ್ದಳು.

ಕೊನೆಗಳಿಗೆಯಲ್ಲಿ ಒಬ್ಬರಿಗೊಬ್ಬರು ಇಬ್ಬರು ಪರಸ್ಪರ ಆಸರೆಯಾಗಿರಲಿ ಎಂದು ಕುಟುಂಬದವರು ಮದುವೆ ಮಾಡಿದ್ದಾರೆ. ಕುಂಬಳೂರು ಗ್ರಾಮದ ದೇವಸ್ಥಾನದಲ್ಲಿ ವಿವಾಹ ಸಾಂಗವಾಗಿ ಜರುಗಿದೆ. ಎರಡು ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದ ಮದುವೆ ಆದರ್ಶ ಮದುವೆಯೆಂದು ಹೇಳಲಾಗುತ್ತಿದೆ. ಅಪ್ಪನ ಮದುವೆಗೆ ವಿದೇಶದಿಂದಲೇ ಮಕ್ಕಳು  ಶುಭಾಶಯ ಕೋರಿದ್ದಾರೆ.