ದಾಂಡೇಲಿ(DANDELI) : ದಾಂಡೇಲಿ ನಗರವು ಪ್ರವಾಸಿ ಕೇಂದ್ರವಾಗಿ ಬೆಳೆಯುತ್ತಿದ್ದು ರಾಜ್ಯದ ವಿವಿಧ ಕಡೆಯಿಂದ ಪ್ರವಾಸಿಗರು ದಾಂಡೇಲಿಗೆ ಆಗಮಿಸುತ್ತಿದ್ದಾರೆ. ಹೀಗಾಗಿ ರಾಜಧಾನಿ ಬೆಂಗಳೂರಿನಿಂದ ದಾಂಡೇಲಿಗೆ ಪ್ಯಾಸೆಂಜರ್ ರೈಲು(PASSENGER TRAIN) ಪ್ರಾರಂಭಿಸಬೇಕೆಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (MP VISHWESHAR HEGADE KAGERI) ಅವರನ್ನು ಒತ್ತಾಯಿಸಿದೆ.
ಇತ್ತೀಚಿಗೆ ದಾಂಡೇಲಿ ನಗರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಕಾರ್ಯಕ್ರಮಕ್ಕೆ ಆಗಮಿಸಿದ ಸಂದರ್ಭದಲ್ಲಿ ದಾಂಡೇಲಿ ತಾಲೂಕಿನ ವಿಷಯಗಳ ಬಗ್ಗೆ ಮನವಿ ಸಲ್ಲಿಸಲಾಯಿತು.
ಈ ಹಿಂದೆ ದಾಂಡೇಲಿಯಿಂದ ಪ್ರಯಾಣಿಕ ರೈಲು ಸಂಚರಿಸುತ್ತಿದ್ದು ಕೋವಿಡ್(COVID) ಕಾರಣದಿಂದಾಗಿ ಎಲ್ಲಾ ಪ್ಯಾಸೆಂಜರ್ ರೈಲು ಸಂಚಾರ ಬಂದಾಗಿತ್ತು. ಈಗಾಗಲೇ ಮತ್ತೆ ಎಲ್ಲಾ ರೈಲುಗಳು ಪ್ರಾರಂಭವಾಗಿದ್ದು ದಾಂಡೇಲಿಯ ಪ್ಯಾಸೆಂಜರ್ ರೈಲು ಸಂಚಾರ ಆರಂಭಿಸಿಲ್ಲ. ಈ ಬಗ್ಗೆ ನಗರದ ವಿವಿಧ ಸಂಘಟನೆಗಳು ಹಲವು ಬಾರಿ ಮನವಿ ಸಲ್ಲಿಸಿ ಪ್ರತಿಭ ಟನೆ ನಡೆಸಿದರೂ ರೈಲ್ವೆ ಇಲಾಖೆ(RAILWAY DEPARTMENT) ಯಾವುದೇ ಕ್ರಮ ವಹಿಸಲಿಲ್ಲ ಎಂದು ಕಾಗೇರಿ ಅವರ ಗಮನಕ್ಕೆ ತಂದರು.
ಮನವಿ ಸ್ವೀಕರಿಸಿ ಪ್ರಯಾಣಿಕ ರೈಲನ್ನು ಪ್ರಾರಂಭಿಸಲು ಈಗಾಗಲೇ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಶೀಘ್ರದಲ್ಲಿ ರೈಲು ಸಂಚಾರ ಆರಂಭವಾಗಲಿದೆ ಎಂದು ಸಂಸದರು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಹೋರಾಟ ಸಮಿತಿಯ ಆಕ್ರಂ ಖಾನ, ಅಶೋಕ ಪಾಟೀಲ್, ರಾಘವೆoದ್ರ ಗಡಪ್ಪನವರ, ಮೊಹಮದ ಗೌಸ ಬೆಟಗೆರಿ, ಮೂಜಿಬಾ ಚಬ್ಬಿ, ಶಜಾದಿ, ವಿಜಯಲಕ್ಷ್ಮೀ ಅಕ್ಕಿ, ದತಾತ್ರೆಯ ಹೆಗಡೆ, ಸ್ಯಾಮ ಬೆoಗಳೂರು. ಮೊಹಮದ್ ಗೌಸ ಪಟೇಲ್ ಇದ್ದರು.
ಇದನ್ನು ಓದಿ : ಐಸಿಎಸ್ಇ ಪಠ್ಯ ಪುಸ್ತಕದಲ್ಲಿ ಕವಿ ಶ್ರೀಧರ್ ಶೇಟ್ ಕವನ