ಕಾರವಾರ(KARWAR) : ತಾಲೂಕಿನ ಜನರನ್ನ ಬೆಚ್ಚಿಬೀಳಿಸಿದ ಹಣಕೋಣದ ಬರ್ಬರ ಹತ್ಯೆ(MURDER) ಪ್ರಕರಣ ಬೇಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಯಕ್ತಿಕ ದ್ವೇಷದ ಕಾರಣಕ್ಕೆ ಕೊಲೆ ನಡೆದಿರುವುದನ್ನ ಪೊಲೀಸರು ತನಿಖೆಯಲ್ಲಿ ಪತ್ತೆಗೊಳಿಸಿದ್ದಾರೆ. ಸೆಪ್ಟೆಂಬರ್ 22ರಂದು ಮುಂಜಾನೆ ಉದ್ಯಮಿ(Businessmen ) ವಿನಾಯಕ್ ನಾಯ್ಕ ಅವರನ್ನ ದುಷ್ಕರ್ಮಿಗಳು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣ ದಾಖಲಿಸಿಕೊಂಡ ಚಿತ್ತಾಕುಲ ಠಾಣೆ ಪೊಲೀಸರು(CHITTAKUL POLICE STATION) ತನಿಖೆಗೆ ಇಳಿದಿದ್ದರು.
ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಎಂ ನಾರಾಯಣ ಅವರ ಮಾರ್ಗದರ್ಶನದಲ್ಲಿ ಡಿವೈಎಸ್ಪಿ ಗಿರೀಶ್ ನೇತೃತ್ವದಲ್ಲಿ ತಂಡ ಮಾಡಲಾಗಿತ್ತು. ದೆಹಲಿ ಕಡೆ ಪರಾರಿಯಾಗುತ್ತಿದ್ದ ಬಿಹಾರ ಮೂಲದ ಅಜ್ಮಲ್ ಜಾಬಿರ್ (24), ಮಾಸೂಮ್ ಮಂಜೂರ್ (23) ಹಾಗೂ ಅಸ್ಸಾಂ ಮೂಲದ ಲಕ್ಷ ಜ್ಯೋತಿನಾಥ್ (31) ಆರೋಪಿಗಳನ್ನ ಪೊಲೀಸರು ಹೆಡೆಮುರಿ ಕಟ್ಟಿ ತಂದಿದ್ದಾರೆ.
ಪ್ರಕರಣದಲ್ಲಿ ಪ್ರಮುಖ ಆರೋಪಿ ಗುರುಪ್ರಸಾದ್ ರಾಣೆ ಉದ್ಯಮಿ ವಿನಾಯಕ್ ನಾಯ್ಕ ಅವರನ್ನ ಕೊಲ್ಲಲು ಸುಪಾರಿ ನೀಡಿದ್ದ. ಹೀಗಾಗಿ ತನ್ನ ಕಂಪನಿಯ ಮ್ಯಾನೇಜರ್ ಕೆಲಸ ಮಾಡುತ್ತಿದ್ದ ಲಕ್ಷ ಜ್ಯೋತಿನಾಥ್ ನಿಗೆ ತಿಳಿಸಿದ್ದರಿಂದ ಐದು ತಿಂಗಳಿಂದ ಕೆಲಸ ಮಾಡುತ್ತಿದ್ದ ಅಜ್ಮಲ್ ಮತ್ತು ಮಾಸೂಮ್ ಇವರನ್ನು ಬಿಟ್ಟು ಕೃತ್ಯ ಎಸಗಿದ್ದರು.
ಆದರೆ ಪೊಲೀಸರು ಘಟನೆ ನಡೆದ ಬೆಳಿಗ್ಗೆ ಕೆಲ ಪ್ರದೇಶಗಳ ಸಿಸಿಟಿವಿ ಪರಿಶೀಲಿಸಿ ಕಾರೊಂದರ ಬೆನ್ನತ್ತಿ ಹೋಗಿದ್ದರು. ಇದೀಗ ಕಾರಿನ ಸುಳಿವಿನಿಂದ ಆರಂಭದಲ್ಲಿ ತನಿಖೆಗೆ ಎಳೆಯೊಂದು ಸಿಕ್ಕಿದಂತಾಯಿತು. ಸದ್ಯ ಗೋವಾ ಉದ್ಯಮಿಯಾಗಿರುವ ಗುರುಪ್ರಸಾದ್ ರಾಣೆ ತನ್ನ ಪರಿಚಯಸ್ಥರಿಂದ ಕಾರು ಪಡೆದುಕೊಂಡಿರೋದು ಗೊತ್ತಾಯಿತು. ಅದೇ ಕಾರನ್ನು ಬಳಸಿಕೊಂಡು ಹಣಕೋಣದಲ್ಲಿರುವ ವಿನಾಯಕ ಕಾಶೀನಾಥ್ ನಾಯ್ಕ ಅವರನ್ನ ಮುಗಿಸಲು ಸ್ಕೆಚ್ ಮಾಡಲಾಗಿತ್ತು.
ಕೊಲೆ ಮಾಡಿದ ಆರೋಪಿಗಳು ಅಂದು ಕಾರಿನ ಮೂಲಕ ಗೋವಾ ಪ್ರವೇಶಿಸಿ ಅಲ್ಲಿಂದ ಓಡಿಹೋಗಲು ಮುಂದಾಗಿದ್ದರು. ಆರಂಭದಲ್ಲಿ ಪೊಲೀಸರು ಲಕ್ಷ ಜ್ಯೋತಿನಾಥ್ ಅವರನ್ನ ಬಂಧಿಸಿ ಬಳಿಕ ರೈಲಿನ ಮೂಲಕ ಪರಾರಿಯಾಗುತ್ತಿದ್ದಾಗ ದೆಹಲಿಯಲ್ಲಿ ಇನ್ನಿಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.
ಈ ನಡುವೆ ವಿನಾಯಕನ ಕೊಲೆಗೆ ಪ್ಲ್ಯಾನ್ ನೀಡಿದ್ದ ಗುರುಪ್ರಸಾದ ಗೋವಾದ ಮಾಂಡೋವಿ ನದಿಗೆ (MANDOVI RIVER) ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಪೊಲೀಸರು ಆತ್ಮಹತ್ಯೆಯನ್ನ ದೃಡೀಕರಿಸಿ ತನಿಖೆ ಕೈಗೊಂಡಿದ್ದಾರೆ. ಸ್ನೇಹಿತ ಉದ್ಯಮಿಯನ್ನ ಕೊಲೆ ಮಾಡಿಸಿದ ಆರೋಪಿಯ ಸಾವಿನಿಂದ ಕಾರವಾರದ ಇಬ್ಬರು ಉದ್ಯಮಿಗಳ ದುರಂತ ಅಂತ್ಯವಾಗಿದೆ. ವಯಕ್ತಿಕ ಸೇಡಿಗಾಗಿ ಕಾರಣಕ್ಕಾಗಿ ಪತ್ನಿ ಮತ್ತು ಮಕ್ಕಳನ್ನ ಬಿಟ್ಟು ಹೊರಟಿರೋದು ಮಾತ್ರ ವಿಪರ್ಯಾಸವಾಗಿದೆ.
ಇದನ್ನು ಓದಿ :
ಮಾಜಿ ಎಂಎಲ್ಸಿ ಶುಭಲತಾ ಅಸ್ನೋಟಿಕರ್ ನಿಧನ