ಕಾರವಾರ(Karwar) : ಮೀನುಗಾರಿಕೆಗೆ(Fishing) ತೆರಳಿ ನಾಪತ್ತೆಯಾಗಿದ್ದ ವ್ಯಕ್ತಿಯೋರ್ವ ಶವವಾಗಿ ಪತ್ತೆಯಾದ ಘಟನೆ ಕಾರವಾರದಲ್ಲಿ ನಡೆದಿದೆ.
ಗಜಾನನ ಕೆ ಗೌಡ (25) ಮೃತ ದುರ್ದೈವಿ. ಬೈತಕೋಲ್ ನ ಗೌಡವಾಡ(Baitkol goudawada) ನಿವಾಸಿಯಾಗಿರುವ ಈತ ನಿನ್ನೆ ಮೀನು ಹಿಡಿಯಲು ಹೋದಾಗ ಕಾಲು ಜಾರಿ ಬಿದ್ದು ನಾಪತ್ತೆಯಾಗಿದ್ದ ಎನ್ನಲಾಗಿದೆ. ಇಂದು ಲೇಡಿ ಬೀಚ್(Lady Beach) ಸಮೀಪ ಮೃತದೇಹ ಪತ್ತೆಯಾಗಿದೆ. ಕರಾವಳಿ ಕಾವಲು ಪಡೆ (Coastal service Police) ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬೋಟ್ ಮೂಲಕ ಮೃತದೇಹವನ್ನ ತಂದಿದ್ದಾರೆ.
ಕಾರವಾರ ನಗರ ಠಾಣೆಯಲ್ಲಿ(Karwar Town Station) ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ.
ಇದನ್ನು ಓದಿ : ಎಣ್ಣೆಯಲ್ಲಿ ಜಾರಿ ಬಿದ್ದ ಮೊಬೈಲ್ ಸ್ಫೋಟ. ವ್ಯಕ್ತಿ ಸಾವು