ಹುಬ್ಬಳ್ಳಿ : ಮಳೆಗಾಲ ಸಮೀಪಿಸುತ್ತಿದೆ. ಸರ್ಕಾರಿ ಬಸ್ಗಳಲ್ಲಿ  ಸಂಚಾರಿಸುವ ಪ್ರಯಾಣಿಕರು ಛತ್ರಿಯನ್ನ  ಹಿಡಿದೇ ಸೀಟಿನಲ್ಲಿ ಕೂರಬೇಕಾದ ಪರಿಸ್ಥಿತಿ ಬರಬಹುದೇನೋ. ಯಾಕಂದ್ರೆ ಬಸ್ ಚಾಲಕನೋರ್ವ ಬಸ್ ಡ್ರೈವಿಂಗ್ ಮಾಡುವಾಗ ಛತ್ರಿ ಹಿಡಿದಿರುವ ವಿಡಿಯೋ ವೈರಲ್ ಆಗಿದೆ.

ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ಇದಾಗಿದ್ದು ಸರ್ಕಾರಿ ಬಸ್ ಗಳ ಅವ್ಯವಸ್ಥೆಯ ಬಗ್ಗೆ ಈ ದೃಶ್ಯ ತೋರಿಸುವಂತಿದೆ. ಇದು ಸರ್ಕಾರಕ್ಕೆ ಎಚ್ಚರಿಕೆ ಕೂಡ ಆಗಿದೆ. ಈಗಾಗಲೇ ಶಕ್ತಿ ಯೋಜನೆಯಡಿ ಸಾಕಷ್ಟು ಸಂಖ್ಯೆಯ ಮಹಿಳಾ ಪ್ರಯಾಣಿಕರು ಉಚಿತವಾಗಿ ಬಸ್ನಲ್ಲಿ ಪ್ರಯಾಣಿಸಿದ್ದಾರೆ. ಬಸ್ಗಳು ಕೂಡ ಸೂಕ್ತ ನಿರ್ವಹಣೆ ಇಲ್ಲದೆ ಅಥವಾ ಹಳೆ ಬಸ್ ಆದ ಕಾರಣಕ್ಕೆ ಸೋರುತ್ತಿರಬಹುದು. ಹೀಗಾಗಿ ಸಾರಿಗೆ ಇಲಾಖೆ ಮಳೆಗಾಲದಲ್ಲಿ ಆಗಬಹುದಾದ ಅನಾಹುತ ತಪ್ಪಿಸಬೇಕಾಗಿದೆ.

ದೃಶ್ಯದಲ್ಲಿ ಕಾಣಿಸುವಂತೆ ಚಾಲಕ ಒಂದು ಕೈಯಲ್ಲಿ ಸ್ಟೇರಿಂಗ್ ಹಿಡಿದು ಇನ್ನೊಂದು ಕೈಯಲ್ಲಿದೆ ಛತ್ರಿ ಹಿಡಿದಿದ್ದಾನೆ. ಪ್ರಯಾಣಿಕರು ತಮ್ಮ ಮೊಬೈಲ್ ಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ. ಏನಾದ್ರು ಅವಘಡ ಆದ್ರೆ ಪ್ರಯಾಣಿಕರ ಸುರಕ್ಷತೆಯನ್ನ ಯಾರು ನೋಡ್ತಾರೆ.

ಸಂಭಂದಪಟ್ಟ ಸರ್ಕಾರ ಸೋರುವ ಬಸ್ ಪರಿಶೀಲಿಸಿ ಬದಲಾಯಿಸಿ ಪ್ರಯಾಣಿಕರು ಛತ್ರಿ ಹಿಡಿದು ಕೂರದಂತೆ ನೋಡಿಕೊಳ್ಳಬೇಕಾಗಿದೆ. ಇಲ್ಲದಿದ್ದಲ್ಲಿ ಬರುವ ಮಳೆಗಾಲದಲ್ಲಿ ಇಂತಹ ನೂರಾರು ವಿಡಿಯೋ ವೈರಲ್ ಆಗಬಹುದು.