ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news ಉತ್ತರಪ್ರದೇಶ (Uttarapradesh) : ಕಳೆದೊಂದು ತಿಂಗಳಿಂದ ಪ್ರಯಾಗರಾಜ್ ನಲ್ಲಿ(Prayagraj) ಮಹಾಕುಂಭಮೇಳ (ಮಹಾಕುಂಭ mela) ಅದ್ಧೂರಿಯಾಗಿ ನಡೆಯುತ್ತಿದೆ. ಆಸಂಖ್ಯಾತ ಭಕ್ತರು ಭಾಗವಹಿಸಿದ್ದಾರೆ. ಈ ನಡುವೆ ಸಿಎಂ ಯೋಗಿ ಆದಿತ್ಯನಾಥ್(CM Yogi Adityanath) ಸರ್ಕಾರ (Government) ಮತ್ತೊಂದು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಉತ್ತರ ಪ್ರದೇಶ (Uttarapradesh) ರಾಜ್ಯದ ಎಲ್ಲಾ ಜೈಲುಗಳಲ್ಲಿರುವ ಕೈದಿಗಳಿಗೂ ಮಹಾಕುಂಭಮೇಳದ (Mahakumbhamela) ಗಂಗಾಜಲದಲ್ಲಿ(Gangajala) ತೀರ್ಥಸ್ನಾನ ಮಾಡುವ ವ್ಯವಸ್ಥೆ ಮಾಡಿದೆ. ನಾಳೆ ಬೆಳಿಗ್ಗೆ ಗಂಗಾಜಲದಿಂದ ಸ್ನಾನ ಮಾಡುವ ವ್ಯವಸ್ಥೆ ಮಾಡಲಾಗುತ್ತಿದೆ.
ಆದರೆ ಖೈದಿಗಳಿಗೆಲ್ಲ(Prisoners) ಗಂಗಾಸ್ನಾನ (Gangasnana) ಮಾಡಲು ಅವರನ್ನು ಪ್ರಯಾಗರಾಜ್‌ಗೆ (Prayagraj) ಕರೆದುಕೊಂಡು ಹೋಗುತ್ತಿಲ್ಲ. ಪ್ರಯಾಗರಾಜ್‌ನಿಂದ ಗಂಗಾಜಲವನ್ನು ತಂದು ಜೈಲಿನಲ್ಲಿಯೇ ತೀರ್ಥಸ್ನಾನ ಮಾಡಲು ಅವಕಾಶ ಮಾಡಲಾಗುತ್ತಿದೆ.
ಯೋಗಿ ಸಿಎಂ ಇರುವ ಉತ್ತರಪ್ರದೇಶದಲ್ಲಿ ಒಟ್ಟು 68 ಜಿಲ್ಲಾ ಜೈಲುಗಳಿವೆ, 7 ಸೆಂಟ್ರಲ್ ಜೈಲುಗಳಿವೆ(Central Jail). 90ಸಾವಿರಕ್ಕೂ ಹೆಚ್ಚು ಖೈದಿಗಳಿದ್ದಾರೆ. ಇವತ್ತು ಸಂಜೆಯೊಳಗೆ ಪ್ರಯಾಗರಾಜ್‌ನಿಂದ ಗಂಗಾಜಲವನ್ನು ಜೈಲುಗಳಿಗೆ ಸಾಗಿಸಲು ಸೂಚನೆ ನೀಡಲಾಗಿದೆ. ನಾಳೆ ಜೈಲುಗಳಲ್ಲಿ ಸ್ನಾನದ ನೀರಿನ ಜೊತೆಗೆ ಗಂಗಾಜಲ ಮಿಶ್ರಣ ಮಾಡಿ ತೀರ್ಥಸ್ನಾನ ಮಾಡಲು ಅವಕಾಶ ಮಾಡಲಾಗುತ್ತಿದೆ.
ಉತ್ತರ ಪ್ರದೇಶದ ಜೈಲು ಮಂತ್ರಿ(Jail Minister) ದಾರಾಸಿಂಗ್ ಚೌಹಾಣ್ ಸೂಚನೆ ಮೇರೆಗೆ ಖೈದಿಗಳಿಗೆ ಗಂಗಾಜಲದ ಸ್ನಾನಕ್ಕೆ ವ್ಯವಸ್ಥೆ ಮಾಡಲಾಗಿದೆ. ನಾಳೆ ಲಕ್ಷ್ಮೀ ಸೆಂಟ್ರಲ್ ಜೈಲ್ ನಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಸಚಿವ ದಾರಾಸಿಂಗ್ ಚೌಹಾಣ್ ಕೂಡ ಭಾಗವಹಿಸುತ್ತಿದ್ದಾರೆ.
ಕಳೆದ ವರ್ಷ ಅಯೋಧ್ಯೆ ರಾಮಮಂದಿರ(Ayodhya Ramamandira) ಉದ್ಘಾಟನೆಯ ಸಂದರ್ಭದಲ್ಲಿ ಉತ್ತರಪ್ರದೇಶದ ಎಲ್ಲಾ ಜೈಲುಗಳಲ್ಲಿ ಕಾರ್ಯಕ್ರಮ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿತ್ತು. ಇದೀಗ ಪವಿತ್ರ ಗಂಗಾಜಲದಿಂದ ಖೈದಿಗಳಿಗೂ ತೀರ್ಥಸ್ನಾನ ಮಾಡುವ ಮೂಲಕ ಪಾವನರಾಗುವಂತೆ ಮಾಡುತ್ತಿರುವುದು ಪ್ರಶಂಸೆ ವ್ಯಕ್ತವಾಗಿದೆ. ಫೆಬ್ರವರಿ 26ರಂದು ಮಹಾ ಶಿವರಾತ್ರಿಯಂದು(Maha Shivaratri) ಮಹಾಕುಂಭಮೇಳ ಸಂಪನ್ನಗೊಳ್ಳಲಿದೆ.
ಇದನ್ನು ಓದಿ : ವಯೋವೃದ್ಧೆ ತಾಯಿ ದಿಗ್ಬಂಧಿಸಿ ಕುಟುಂಬದೊಂದಿಗೆ ಕುಂಭಮೇಳಕ್ಕೆ ಹೋದ ಪುತ್ರ.
ಗೋಕರ್ಣದಲ್ಲಿ ಬೆಂಗಳೂರು ಪ್ರವಾಸಿಗರಿಂದ ರಾಮನಗುಳಿ ಯುವಕರ ಮೇಲೆ ಹಲ್ಲೆ
ಮುರ್ಡೇಶ್ವರದಲ್ಲಿ ಫೆಬ್ರವರಿ 26 ರಂದು ಶಿವನ ಆರಾಧನೆಗೆ ನಡೆದಿದೆ ತಯಾರಿ.