ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar): ಭಾರತ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ, ಸ್ಥಳೀಯ ಸಂಸ್ಥೆ ಕಾರವಾರ, ನಗರ ಸಭೆ ಕಾರವಾರ ಹಾಗೂ ಸಂಚಾರ ಪೋಲಿಸ್ ಠಾಣೆ ಕಾರವಾರ ಇವರ ಆಶ್ರಯದಲ್ಲಿ ವಿಶ್ವ ಸ್ಕೌಟ್ಸ್ ಡೇ ಮತ್ತು ರಸ್ತೆ ಸುರಕ್ಷತಾ ಸಪ್ತಾಹ ಕಾರ್ಯಕ್ರಮವನ್ನು ಕಾರವಾರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಂಗವಾಗಿ ಹಮ್ಮಿಕೊಂಡ ವಿದ್ಯಾರ್ಥಿಗಳ ಜಾಥಾವನ್ನು ನಗರ ಸಭೆಯ ಆಯುಕ್ತ ಜಗದೀಶ ಹುಲಗೆಜ್ಜಿಯವರು ಉದ್ಘಾಟಿಸಿ ಮಾತನಾಡಿ, ಸ್ಕೌಟ್ಸ್ ಜಗತ್ತಿನ ದೊಡ್ಡ ಚಳವಳಿ ಇದರಿಂದ ವಿದ್ಯಾರ್ಥಿಗಳಲ್ಲಿ ಶಿಸ್ತು ಮತ್ತು ಆತ್ಮವಿಶ್ವಾಸ ಮೂಡಿಬರುತ್ತದೆ ಎಂದರು.
ಜಿಲ್ಲಾ ಪಂಚಾಯತ ಆವರಣದಿಂದ ಆರಂಭಗೊಂಡ ಜಾತಾ ಕಾರವಾರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಿಲ್ಲಾ ರಂಗಮಂದಿರದಲ್ಲಿ ಸಮಾರೋಪಗೊಂಡ ಸಂದರ್ಭದಲ್ಲಿ ಕಾರವಾರ ಗ್ರಾಮೀಣ ಪೋಲಿಸ್ ವೃತ್ತ ನೀರಿಕ್ಷಕ ಬಿ ಎಚ್ ಸಾತೇನಹಳ್ಳಿಯವರು ವಿಶ್ವ ಸ್ಕೌಟ್ಸ್ ಡೇ ಹಾಗೂ ರಸ್ತೆ ಸುರಕ್ಷತಾ ಸಪ್ತಾಹದಲ್ಲಿ ಪಾಲ್ಗೊಂಡಿರುವದು ಹೆಮ್ಮೆ ತಂದಿದೆ. ಮಕ್ಕಳು ಬದುಕಿನಲ್ಲಿ ಶ್ರದ್ಧೆ ಮತ್ತು ಶಿಸ್ತನ್ನು ರೂಢಿಸಕೊಳ್ಳಬೇಕೆಂದು ಮಾರ್ಮಿಕವಾಗಿ ಮಾತನಾಡಿದರು. ಸ್ಥಳೀಯ ಸಂಸ್ಥೆ ಉಪಾಧ್ಯಕ್ಷ ನಾಗೇಂದ್ರ ವೇರ್ಣೇಕರ, ಡಾ.ತಬಸಮ್ ಮುಖಾದಮ್, ಅಂಜಲಿ ಮಾನೆ, ಮಹಾದೇವ ರಾಣೆ ಶುಭಾಶಯ ಕೋರಿದರು.
ಗ್ರಾಮೀಣ ಠಾಣೆಯ ಪೋಲಿಸ್ ಉಪ ನೀರಿಕ್ಷಕ ಮಂಜುನಾಥ ಪಾಟೇಲ ಅಪರಾಧಗಳ ಕುರಿತು ಮಾಹಿತಿ ಒದಗಿಸಿದರು, ಸಂಚಾರಿ ಠಾಣೆಯ ಪೋಲಿಸ್ ಉಪ ನೀರಿಕ್ಷಕ ದೇವೇಂದ್ರಪ್ಪನವರು ರಸ್ತೆ ಸುರಕ್ಷತೆಯ ಬಗ್ಗೆ ಮಾಹಿತಿ ನೀಡಿದರು. ಸ್ಥಳೀಯ ಸಂಸ್ಥೆಯ ಅಧ್ಯಕ್ಷರಾದ ಛಾಯಾ ಜಾವಕರ ಸ್ಕೌಟ್ಸ್ ಮತ್ತು ಗೈಡ್ಸ್ ದಿನದ ಮಹತ್ವ ತಿಳಿಸಿದರು. ವೇದಿಕೆ ಮೇಲೆ ಎ ಎಲ್ ಟಿ ಮನ್ಸೂರ್ ಮುಲ್ಲಾ, ಸಹಕಾರ್ಯದರ್ಶಿ ರಾಜು ಗೌಡ, ಜಿಲ್ಲಾ ಪ್ರತಿನಿಧಿ ಪ್ರಶಾಂತ ನಾಯ್ಕ, ನಿಕಟಪೂರ್ವ ಜಿಲ್ಲಾ ಕಾರ್ಯದರ್ಶಿ ಬಿ. ಡಿ. ಫರ್ನಾಂಡೀಸ್, ನಗರಸಭೆಯ ಆರೋಗ್ಯ ವಿಭಾಗದ ಎ ಎಮ್ ಯಾಕೋಬ್, ಶಾಲಾ ಶಿಕ್ಷಣ ಇಲಾಖೆಯ ಪ್ರಶಾಂತ ಸಾವಂತ ಉಪಸ್ಥಿತರಿದ್ದರು.
ಸ್ಕೌಟ್ಸ್ ಗೀತೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್ ಕಾರ್ಯದರ್ಶಿ ಡಾ.ಗಣೇಶ ಬಿಷ್ಟಣ್ಣನವರ ಸ್ವಾಗತಿಸಿದರು, ಎ ಎಸ್ ಓ ಸಿ ಭಾರತಿ ಡಯಾಸ್ ನಿರೂಪಿಸಿದರು.
ಇದನ್ನು ಓದಿ : ಮೀನುಗಾರರ ಶಕ್ತಿ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಬೇಡಿ. ಬಂದರು ಯೋಜನೆ ವಿರುದ್ಧ ಗಣಪತಿ ಉಳ್ವೆಕರ್ ಗುಡುಗು.