ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) :  ಕಾರ್ಮಿಕನ ಕಾಲಿಗೆ ಕರಿ ಕೋತಿಯೊಂದು ಕಚ್ಚಿದ(Monkey attack) ಪರಿಣಾಮ ಗಂಭೀರ ಗಾಯವಾದ ಘಟನೆ  ನಗರದ ಇಎಸ್ಐ ಆಸ್ಪತ್ರೆಯ ಆವರಣದಲ್ಲಿ  ನಡೆದಿದೆ.

ಅಂಬೇವಾಡಿಯ (Ambewadi) ನವಗ್ರಾಮದ ನಿವಾಸಿ ಪ್ರವೀಣ್ ವೆಂಕಟೇಶ ವಾಸಂದರ ಗಂಭೀರ ಗಾಯಗೊಂಡವರಾಗಿದ್ದಾರೆ. ಇಎಸ್ಐ ಆಸ್ಪತ್ರೆಯ(ESI Hospital) ಆವರಣದಲ್ಲಿ ಕಾಂಕ್ರೀಟ್ ಕೆಲಸ ನಿರ್ವಹಿಸಿ, ಸಂಜೆ ಕೆಲಸ ಮುಗಿಸಿ ಮನೆಗೆ ಹೊರಡುತ್ತಿದ್ದಾಗ  ಕರಿ ಕೋತಿಯೊಂದು ಕಾಲಿಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ. ಗಂಭೀರ ಗಾಯಗೊಂಡ ಪ್ರವೀಣ್ ಅವರನ್ನು ತಕ್ಷಣವೇ ಇಎಸ್ಐ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ.  ಗಾಯಗೊಂಡ ಪ್ರವೀಣ್ ಅವರ ಕಾಲಿಗೆ 12 ಹೊಲಿಗೆಯನ್ನು ಹಾಕಿ, ಚಿಕಿತ್ಸೆಯನ್ನು ಮುಂದುವರಿಸಲಾಗಿದೆ.

ಪ್ರವೀಣ್ ಅವರಿಗೆ ಇನ್ನು ಎರಡ್ಮೂರು ತಿಂಗಳು ವಿಶ್ರಾಂತಿ ಬೇಕಾದ ಅನಿವಾರ್ಯತೆ ಇರುವುದರಿಂದ, ಅವರ ಕುಟುಂಬ ನಿರ್ವಹಣೆಗಾಗಿ ಅರಣ್ಯ ಇಲಾಖೆಯವರು ಸಾಧ್ಯವಾದಷ್ಟು ಮಟ್ಟಿಗೆ ಪರಿಹಾರ ಧನವನ್ನು ನೀಡುವ ನಿಟ್ಟಿನಲ್ಲಿ ಹಾಗೂ ಸೂಕ್ತ ಚಿಕಿತ್ಸೆಯ ನಿಟ್ಟಿನಲ್ಲಿ ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ಮತ್ತು ಕರಿ ಕೋತಿಯನ್ನು ಕೂಡಲೇ ಹಿಡಿದು ಕಾಡಿಗೆ ಬಿಡಲು ಅಗತ್ಯ ಕ್ರಮವನ್ನು ಕೈಗೊಳ್ಳಬೇಕೆಂದು ನಗರಸಭೆಯ ಮಾಜಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡರಾದ ತಸ್ಚರ ಸೌದಾಗರ ಅವರು   ಮನವಿ ಮಾಡಿದ್ದಾರೆ.

ಇದನ್ನು ಓದಿ : ತರಬೇತಿ ಪಡೆದ ಪೊಲೀಸರ ನೆಚ್ಚಿನ ಬಾಬು ಅವರಿಗೆ ಮುಖ್ಯಮಂತ್ರಿ ಪದಕ.

ಭಟ್ಕಳ ರಂಜಾನ್ ಮಾರುಕಟ್ಟೆಗೆ ಎಸ್ಪಿ ಎಂ ನಾರಾಯಣ್ ಭೇಟಿ.