ಶಿರಸಿ(SIRSI): ತಾಲೂಕಿನ ವದ್ದಲಾ ಗ್ರಾಮದಲ್ಲಿ ಅನಧಿಕೃತವಾಗಿ ಸಾಗವಾನಿ ಜಾತಿಯ ಮರಗಳನ್ನು ಕಡಿದು ಸಾಗಾಟ ಮಾಡುತ್ತಿದ್ದಾಗ ಅರಣ್ಯ ಸಿಬ್ಬಂದಿಗಳು ಇಬ್ಬರನ್ನು ಬಂಧಿಸಿದ್ದಾರೆ.
ದಾಸನಕೊಪ್ಪ (DASANKOPPA) ಮೂಲದ ರಾಜಾಸಾಬ ಅಲ್ಲಾಭಕ್ಷ (53), ಹೊಸಕೊಪ್ಪದ ಕಾಂತಪ್ಪ ಮಾಸ್ತ್ಯಪ್ಪ ಚೆನ್ನಯ್ಯ (43) ಬಂಧಿತ ಆರೋಪಿತರಾಗಿದ್ದಾರೆ.
ಶಿರಸಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ|| ಅಜ್ಜಯ್ಯ ಜಿ ಆರ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಸ್ ಎಸ್ ನಿಂಗಾಣಿ ಅವರ ಮಾರ್ಗದರ್ಶನದಲ್ಲಿ ಶ್ರೀಮತಿ ಭವ್ಯಾ ನಾಯ್ಕ, ವಲಯ ಅರಣ್ಯಾಧಿಕಾರಿ, ಬನವಾಸಿ ವಲಯ ಅವರು ಮಹೀಂದ್ರ ಪಿಕ್ ಅಪ್ ವಾಹನ ಪರಿಶೀಲಿಸಿದಾಗ ಅಕ್ರಮ ಗೊತ್ತಾಗಿದೆ.
ವಾಹನದಲ್ಲಿ ಸಾಗವಾನಿ ಜಾತಿಯ 10 ನಾಟು ಹಾಗೂ ಎರಡು ಬಿಲೆಟ್ಸ್ ಗಳನ್ನು ಸಾಗಾಟ ಮಾಡಲಾಗುತಿತ್ತು. ಕಾರ್ಯಾಚರಣೆಯಲ್ಲಿ ಉಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ನಾರ್ವೆಕರ್ ದಾಸನಕೊಪ್ಪ, ಅರಣ್ಯ ಪಾಲಕ ಅಂಡಗಿ ರಮೇಶ್, ನನ್ನೇಸಾಬ್ ಹುಸೇನ್ ಸಾಬ, ಅಲ್ಲಾಭಕ್ಷ ರಾಜೇಸಾಬ ಶೇಕ್ ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಬನವಾಸಿ ವಲಯದಲ್ಲಿ(BANAVASI RANGE) ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಇದನ್ನು ಓದಿ : ದಾಂಡೇಲಿಯಲ್ಲಿ ಸರಣಿ ಕಳ್ಳತನ