ಹಳಿಯಾಳ(Haliyal) : ವಿದ್ಯುತ್ ಶಾಕ್ ತಗುಲಿ ವಿದ್ಯಾರ್ಥಿನಿಯೋರ್ವಳು ಮೃತಪಟ್ಟ ಘಟನೆ ಮುಂಡವಾಡದ(Mundawada) ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ (Government Higher Primary School) ಸಂಭವಿಸಿದೆ.

ಶಾಲೆಯ ಎರಡನೇ ತರಗತಿ ವಿದ್ಯಾರ್ಥಿನಿ ಸಾನ್ವಿ ಗೌಳಿ (7)  ಸಾವನ್ನಪ್ಪಿದ ದುರ್ದೈವಿ. ಇಂದು ಬೆಳಿಗ್ಗೆ  ಶಾಲೆಯ ಪಕ್ಕದ ಶೌಚಾಲಯಕ್ಕೆ ಮೂತ್ರವಿಸರ್ಜನೆಗೆ ತೆರಳಿದ್ದಳು. ಕೆಳಕ್ಕೆ ಲೈನ್ ಹರಿದು ಬಿದ್ದಿದರಿಂದ ಗೊತ್ತಾಗದೆ ತುಳಿದಿದ್ದರಿಂದ ಸ್ಥಳದಲ್ಲಿ ಸಾವನ್ನಪ್ಪಿದ್ದಾಳೆ.

ಶಾಲೆಯ ಬೋರ್ವೆಲ್ ಗೆ(Borwell) ಅನಧಿಕೃತವಾಗಿ ಲೈನ್ ತೆಗೆದುಕೊಂಡಿದ್ದಾರೆಂಬ ಮಾಹಿತಿ ಲಭ್ಯವಾಗಿದ್ದು, ಲೈನ್ ಹರಿದು ಬಿದ್ದಾಗ ಮತ್ತೆ ಟೇಪ್ ಸುತ್ತಿ ಬಿಡಲಾಗಿತ್ತು. ಮತ್ತೊಮ್ಮೆ ಲೈನ್ ತುಂಡಾಗಿ ಬಿದ್ದಿದರಿಂದ ಈ ಅವಘಡ ಸಂಭವಿಸಿದೆ. ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರ ಬೇಜವಾಬ್ದಾರಿಯಿಂದ ಘಟನೆ ನಡೆದಿದೆ.

ಮೃತಳ ತಾಯಿ ಹಾನಗಲ್ ಗೆ ಕೆಲಸಕ್ಕೆಂದು ತೆರಳಿದ್ದು ಈ ಹಿಂದೆಯೇ ತಂದೆಯನ್ನ ಅಗಲಿದ್ದಳು ಎನ್ನಲಾಗಿದೆ. ಸಾನ್ವಿಗೆ ಇನ್ನೋರ್ವ ತಂಗಿಯಿದ್ದಾಳೆ. ಘಟನೆಯಿಂದಾಗಿ ಶಿಕ್ಷಕರ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಇದನ್ನು ಓದಿ : ಜೈಲು ಅಧಿಕಾರಿಯ ಕಾರು ಸ್ಪೋಟಿಸುವ ಬೆದರಿಕೆ

ನಾನ್ ವೆಜ್ ತಿನ್ಬೇಡ ಎಂದು ಬಾಯ್ ಫ್ರೆಂಡ್ ಕಿರುಕುಳ. ಪೈಲಟ್ ಸಾವು