ಇ ಸಮಾಚಾರ ಡಿಜಿಟಲ್ ನ್ಯೂಸ್(esamachara digital news)ಹೊನ್ನಾವರ(Honnavar) : ಕಾಶ್ಮೀರದ ಪೆಹಲ್ಗಾಮನಲ್ಲಿ (Kashmir Pehalgam) ಭಯೋತ್ಪಾದಕರು 26 ಅಮಾಯಕ ಪ್ರವಾಸಿಗರ ಹತ್ಯೆ ಮಾಡಿದ್ದಕ್ಕೆ ಭಾರತ ಪ್ರತಿಕಾರ ತೀರಿಸಿಕೊಳ್ಳುತ್ತಲೆ ಇದೆ. ದೇಶದ ಜನ ಸಹ ಇನ್ನೊಂದೆಡೆ ಕೇಂದ್ರ ಸರ್ಕಾರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಹೊನ್ನಾವರದ ರೈತರು(Honnavar Farmers) ಪಾಕಿಸ್ತಾನಕ್ಕೆ ರಫ್ತಾಗುತಿದ್ದ (Export) ವೀಳ್ಯದೆಲೆಗೆ ನಿರ್ಬಂಧ ಹೇರುವ ಮೂಲಕ ವ್ಯವಹಾರ ಕಡಿತಗೊಳಿಸಿದ್ದಾರೆ.
ಸರ್ಕಾರ ಪಾಕಿಸ್ತಾನದ ಜೊತೆಗಿನ ರಾಜತಾಂತ್ರಿಕ ವ್ಯವಹಾರಗಳಿಗೆ ಬ್ರೇಕ್ ಹಾಕಿದ್ದರಿಂದ ಹೊನ್ನಾವರ ಭಾಗದ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಶರಾವತಿ ನದಿ(Sharavati River) ಪಾತ್ರ ಭಾಗದ ರೈತರು ವೀಳ್ಯದೆಲೆಯನ್ನು ದೆಹಲಿ (Dehali)ವರ್ತಕರ ಮೂಲಕ ಪಾಕಿಸ್ತಾನಕ್ಕೆ ರಫ್ತು ಮಾಡುತಿದ್ದರು. ಇದೀಗ ಪಾಕಿಸ್ತಾನದಲ್ಲಿ ಬಹು ಬೇಡಿಕೆ ಇರುವ ಹೊನ್ನಾವರ ವೀಳ್ಯೆದೆಲೆಗೆ(Pan leaf) ಬರ ಬಂದಿದೆಯಂತೆ.
ಪ್ರತಿ ನಿತ್ಯ ಹೊನ್ನಾವರದಿಂದ(Honnavar) ಸುಮಾರು ಹತ್ತು ಟನ್ ಗೂ ಅಧಿಕ ವೀಳ್ಯದೆಲೆ ದೆಹಲಿ(Dehali) ತಲುಪಿ ಅಲ್ಲಿಂದ ಪಾಕಿಸ್ತಾನ(Pakistan) ತಲುಪುತ್ತಿತ್ತು. ಯಾವಾಗ ಕೇಂದ್ರ ಸರ್ಕಾರ ಪಾಕಿಸ್ತಾನ ಜೊತೆ ಸಮರ ಸಾರಿತೋ, ವ್ಯವಹಾರಗಳನ್ನ ಕಡಿತಗೊಳಿಸಿತೋ ಆಗ ಹೊನ್ನಾವರ ರೈತರು(Honnavar Farmers) ಅಲರ್ಟ್ ಆಗಿದ್ದಾರೆ. ದೆಹಲಿಯ ವರ್ತಕರಿಗೆ ವೀಳ್ಯದೆಲೆ ಕಳುಹಿಸದಿರಲು ತೀರ್ಮಾನ ಮಾಡಿದ್ದಾರೆ.
ಹೀಗಾಗಿ ತಾವು ಬೆಳೆದ ರಾಣಿ ಎಲೆಯನ್ನ(Queen Leaf) ದೇಶಿಯ ಮಾರುಕಟ್ಟೆಯಲ್ಲಿ ವ್ಯಾಪಾರ ಮಾಡಲು ಮುಂದಾಗಿದ್ದಾರೆ. ತಮಗೆ ನಷ್ಟ ಆದರೂ ಪರವಾಗಿಲ್ಲ ನಾವು ಪಾಕಿಸ್ತಾನಕ್ಕೆ ನಮ್ಮ ವೀಳ್ಯದೆಲೆ ಕಳಿಸುವುದಿಲ್ಲ ಎಂದು ಇಲ್ಲಿನ ರೈತರು ಹೇಳಿದ್ದಾರೆ.
ಹೊನ್ನಾವರ(Honnavar) ತಾಲೂಕಿನ ಶರಾವತಿ ನದಿ(Sharavati River) ತೀರ ಪ್ರದೇಶಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ವೀಳ್ಯದೆಲೆ ಬೆಳೆಯಲಾಗುತ್ತದೆ. ದೇಶ ವಿದೇಶಗಳಲ್ಲಿ ವೀಳ್ಯದೆಲೆಗೆ ಬಹು ಬೇಡಿಕೆ ಇದೆ. ಬಾಳಿಕೆ, ವಿಶೇಷ ಕಾರ ಮತ್ತು ಸ್ವಾದ ಹೊಂದಿದೆ. ಈ ವೀಳ್ಯೆದೆಲೆಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆಯಾಗಿತ್ತು. ಹಲವು ವರ್ಷಗಳ ಮೊದಲು ಮುಂಬೈ ಮೂಲಕ ಪಾಕಿಸ್ತಾನಕ್ಕೆ ಈ ವೀಳ್ಯದೆಲೆ ರಫ್ತಾಗುತಿತ್ತು. ನಂತರ ದೆಹಲಿ ಮಾರುಕಟ್ಟೆ ಮೂಲಕ ಪಾಕಿಸ್ತಾನಕ್ಕೆ ರಫ್ತಾಗುತಿತ್ತು.
ರೈತರ ಈ ನಿರ್ಧಾರದಿಂದ ಒಂದು ಎಲೆ ಮೂರು ರುಪಾಯಿಯಿಂದ ಮೂವತ್ತು ಪೈಸೆಗೆ ಇಳಿಮುಖವಾಗಿದೆ. ಇದೀಗ ಕಲ್ಕತ್ತ(Kalkatta), ಉತ್ತರಪ್ರದೇಶಕ್ಕೆ (Uttarapradesh)ಮಾತ್ರ ಈ ಎಲೆ ಸೀಮಿತವಾಗಿ ಮಾರಾಟವಾಗುತ್ತಿದೆ. ನಮಗೆ ನಷ್ಟವಾದರೂ ತೊಂದರೆ ಇಲ್ಲ, ಲಾಭಕೊಸ್ಕರ ವೀಳ್ಯದೆಲೆ ಕೊಟ್ಟು ಪಾಕಿಸ್ತಾನ ಜೊತೆ ಸಂಬಂಧ ಇಟ್ಟುಕೊಳ್ಳಲ್ಲ ಎಂದು ಹೊನ್ನಾವರದ ರೈತರು(Honavar Farmers) ಖಡಾಖಂಡಿತ ನಿರ್ಧಾರ ಮಾಡಿದ್ದಾರೆ.
ಇದನ್ನು ಓದಿ:
ಅಪ್ರಾಪ್ತ ಬಾಲಕನಿಂದ ಗರ್ಭಿಣಿಯಾದ ಶಿಕ್ಷಕಿ. ಗರ್ಭಪಾತಕ್ಕೆ ಕೋರ್ಟ್ ಅನುಮತಿ.
ಪ್ರಧಾನಿ ಅವರ ಅವಮಾನಕಾರಿ ದೃಶ್ಯದ ಫೇಸ್ ಬುಕ್ ಲಿಂಕ್ ಶೇರ್ ಮಾಡಿದ್ದ ವ್ಯಕ್ತಿಯ ಬಂಧನ.