ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ(Karwar) : ಕರಾವಳಿ ತಾಲೂಕುಗಳಲ್ಲಿ ಬಾರೀ ಮಳೆಯಾಗುತ್ತಿದೆ(Heavy Rain). ಪರಿಣಾಮವಾಗಿ ಗುಡ್ಡ ಪ್ರದೇಶಗಳಿಂದ ವ್ಯಾಪಕ ಪ್ರಮಾಣದ ನೀರು ಹರಿದು ಬರುತ್ತಿದೆ. ಘಟ್ಟ ಪ್ರದೇಶಗಳಲ್ಲಿ(Ghat Area) ಅಲ್ಲಲ್ಲಿ ಧರೆ ಕುಸಿಯುತ್ತಿದ್ದು, ಕುಮಟಾದಿಂದ ಶಿರಸಿಗೆ (Kumta to Sirsi) ತೆರಳುವ ಮಾರ್ಗದಲ್ಲಿ ರಸ್ತೆ ಪಕ್ಕದಲ್ಲಿ ಕುಸಿದಿರುವುದರಿಂದ ಸಂಚಾರ ಅಸ್ತವ್ಯಸ್ತವಾಗಿದೆ.

ಕುಮಟಾ ತಾಲೂಕಿನ ಖೈರೆ ಕ್ರಾಸ್ ನಿಂದ(Khaire Cross) ಶಿರಸಿಗೆ ತೆರಳುವ ಮಾರ್ಗ ಬರಗದ್ದೆ ಬಳಿ  ರಸ್ತೆ ಕುಸಿತವಾಗಿದ್ದರಿಂದ ಮಾರ್ಗದಲ್ಲಿ ಸಂಚಾರ ಸ್ಥಗಿತಗೊಳಿಸಲಾಗಿದೆ. ರಾ ಹೆದ್ದಾರಿ 66ರಿಂದ ಕತಗಾಲವರೆಗೆ ಮಾರ್ಗ ಬಂದ್ ಮಾಡಲಾಗಿದೆ. ಮಳೆ ಮುಂದುವರಿದಲ್ಲಿ ಇನ್ನಷ್ಟು ಪ್ರಮಾಣದಲ್ಲಿ ಕುಸಿಯುವ ಸಾಧ್ಯತೆ ಇದೆ ಎನ್ನಲಾಗಿದೆ.

ದೇವಿಮನೆ ಘಟ್ಟದಲ್ಲೂ(Devimane Ghat) ಸಹ ರಸ್ತೆ ಪಕ್ಕದಲ್ಲಿ ಕಲ್ಲುಮಣ್ಣುಗಳು ಜರಿದು ಬಂದಿದೆ. ಕೆಲಕಾಲ ಸಂಚಾರ ಸ್ಥಗಿತಗೊಂಡಿದ್ದವು. ಶಿರಸಿ ಕುಮಟಾ(Sirsi-Kumta) ಮಾರ್ಗದಲ್ಲಿ  ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು ಸಂಚಾರದಲ್ಲಿ ಕಿರಿಕಿರಿ ಅನುಭವಿಸುವಂತಾಗಿದೆ. ಅವಧಿಗೂ ಮುನ್ನವೇ ನಿರಂತರವಾಗಿ ಸುರಿಯುತ್ತಿರುವ ಮಳೆ ಆತಂಕ ಸೃಷ್ಟಿಸಿದೆ.

ಇದನ್ನು ಓದಿ : ಗಾಳಿ ಮಳೆ ಸಾಧ್ಯತೆ. ಮೀನುಗಾರಿಕೆಗೆ ತೆರಳದಂತೆ ಎಚ್ಚರಿಕೆ.

ಬಾರೀ ದುರಂತದಲ್ಲಿ ಬಚಾವಾಗಿದ್ದ ವ್ಯಕ್ತಿ ಸಿಡಿಲು ಬಡಿದು ಸಾವು.