ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಶಿರಸಿ (Sirsi) : ಉತ್ತರಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆಯಿಂದಾಗಿ ಅಲ್ಲಲ್ಲಿ ತೊಂದರೆಯಾಗುತ್ತಿದೆ.  ಕುಮಟಾ ಮತ್ತು ಶಿರಸಿ (Kumta to Sirsi) ಸಂಪರ್ಕಿಸುವ ದೇವಿಮನೆ ಘಟ್ಟದಲ್ಲಿ(Devimane Ghat) ಗುಡ್ಡ ಕುಸಿತ(Landslide) ಉಂಟಾಗಿರುವುದರಿಂದ, ಸಾಯಂಕಾಲ 6:00 ರಿಂದ ಬೆಳಿಗ್ಗೆ 6:00 ಗಂಟೆವರೆಗೆ ರಸ್ತೆ ಸಂಪೂರ್ಣ ಸ್ಥಗಿತ ಮಾಡಲಾಗಿದೆ.

ಶಿರಸಿ ಮತ್ತು ಕುಮಟಾ ರಸ್ತೆಯಲ್ಲಿ ಎಲ್ಲಾ ರೀತಿಯ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತ ಮಾಡಲಾಗಿದೆ. ಹಾಗೂ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

ಕಳೆದ ಎರಡು ಮೂರು ದಿನಗಳಿಂದ ದೇವಿಮನೆ ಘಟ್ಟದಲ್ಲಿ(Devimane Ghat) ಗುಡ್ಡ ಕುಸಿತವಾಗುತ್ತಿದೆ. ನಿರಂತರವಾಗಿ ಕುಸಿತವಾಗುತ್ತಿರುವುದರಿಂದ ವಾಹನ ಸವಾರರು ಆತಂಕಗೊಂಡಿದ್ದಾರೆ. ಅಲ್ಲದೇ ಮಳೆಯು ಹೆಚ್ಚಾಗಿರುವುದರಿಂದ ಮತ್ತೆ ಕುಸಿತದ ಅಪಾಯವೂ ಇದೆ. ಇಂದು ಜಿಎಸ್ಐ ನ ಹಿರಿಯ ಭೂ ವಿಜ್ಞಾನಿಗಳು(Geologist) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು. ಅಲ್ಲದೇ ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರುವಂತೆ ಸಲಹೆ ನೀಡಿದ್ದಾರೆ.

ಇದನ್ನು ಓದಿ : ಬೈಕ್ ಗಳ‌ ನಡುವೆ ಮುಖಾಮುಖಿ ಡಿಕ್ಕಿ: ಓರ್ವ ಸಾವು

ಭಟ್ಕಳದಲ್ಲಿ ಅಧಿಕಾರಿಗಳನ್ನ ಬೇಸ್ತು ಬೀಳಿಸಿದ ಹುಸಿ ಕರೆ.

ಮನೆ ಸಮೀಪದ ಕಾಲುವೆಗೆ ಬಿದ್ದು ಮಗು ದುರ್ಮರಣ.

ದಾಂಡೇಲಿಯಲ್ಲಿ ಅತ್ಯಾರ ಆರೋಪಿಗೆ ಪೈರಿಂಗ್. ಓರ್ವ ಪಿಎಸ್ಐ ಸೇರಿ ಇಬ್ಬರು ಪೊಲೀಸರಿಗೆ ಗಾಯ.