ಯಲ್ಲಾಪುರ (Yallapura): ಕ್ರಿಯಾಶೀಲ ಪತ್ರಕರ್ತ ಜಗದೀಶ ನಾಯ್ಕ ಅವರು ಅನಾರೋಗ್ಯದಿಂದ ನಿಧಾನರಾಗಿದ್ದಾರೆ.

ಅವರಿಗೆ 54 ವರ್ಷ ವಯಸ್ಸಾಗಿತ್ತು. ಕಳೆದ ಐದಾರು ದಿನಗಳಿಂದ ಅನಾರೋಗ್ಯ ನಿಮಿತ್ತ ಹುಬ್ಬಳ್ಳಿಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ.

ಯಲ್ಲಾಪುರ ನ್ಯೂಸ್ ದಿಂದ (Yallapur news) ಜನಪ್ರಿಯರಾಗಿದ್ದ ಜಗದೀಶ್ ನಾಯ್ಕ ತ್ವರಿತವಾಗಿ ಸುದ್ದಿಯನ್ನು ಜನರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದ್ದರು. ಪ್ರಜಾವಾಣಿ,  ಕರಾವಳಿ ಮುಂಜಾವು(Karavali Munjavu), ನುಡಿ ಜೇನು(Nudijenu), ಕಡಲವಾಣಿ(Kadalawani) ಪತ್ರಿಕೆಗಳಿಗೆ ಹಿಂದೆ ವರದಿಗಾರರಾಗಿ ಮತ್ತು ಸಂಯುಕ್ತ ಕರ್ನಾಟಕದ(Samyukta karnataka) ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡಿದ್ದರು.

ಜಗದೀಶ್ ಅವರು ಮೂವರು ಸಹೋದರಿಯರು, ಓರ್ವ ಸಹೋದರ, ಪತ್ನಿ, ಓರ್ವ ಪುತ್ರ ಹಾಗೂ ತಂದೆ ತಾಯಿ  ಬಿಟ್ಟು ಅಗಲಿದ್ದಾರೆ.

ಅವರ ನಿಧನಕ್ಕೆ ಶಾಸಕರಾದ ಶಿವರಾಮ ಹೆಬ್ಬಾರ, ನಾಗರಾಜ ನಾಯಕ ಕಾಳಮ್ಮನಗರ, ಗಜು ನಾಯ್ಕ, ಪ್ರಕಾಶ ಕಟ್ಟಿಮನಿ, ವೇಣುಗೋಪಾಲ ಮದ್ಗುಣಿ, ಜಯರಾಂ ಗುನಗಾ, ಪ್ರಮೋದ ಹೆಗಡೆ, ರಾಮು ನಾಯ್ಕ, ಬೀರಣ್ಣಾ ನಾಯಕ, ಎಂ ಆರ್ ಹೆಗಡೆ, ಟಿ ಶಂಕರ್ ಭಟ್  ಮುಂತಾದವರು ಶೋಕ ವ್ಯಕ್ತಪಡಿಸಿ ಕುಟುಂಬಕ್ಕೆ ದುಃಖವನ್ನು ಸಹಿಸುವ ಶಕ್ತಿಯನ್ನು ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ. ರವಿವಾರ ಬೆಳಿಗ್ಗೆ 9.00ಗಂಟೆಗೆ ಹುಬ್ಬಳ್ಳಿ ರಸ್ತೆಯಲ್ಲಿರುವ ಹಿಂದೂ ರುದ್ರ ಭೂಮಿಯಲ್ಲಿ ಅವರು ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಆಪ್ತ ವಲಯ ತಿಳಿಸಿದೆ.

ಇದನ್ನು ಓದಿ : ಶಾಸಕ ಸತೀಶ್ ಸೈಲ್ ಗೆ ಶಿಕ್ಷೆ

ಮುಂಡಗೋಡು ಮೀಟರ್ ಬಡ್ಡಿ ಕುಳಗಳ ಮನೆ ಮೇಲೆ ದಾಳಿ