ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕುಂದಾಪುರ(Kundapur): ಸಾಕಿದ ಶ್ವಾನವನ್ನು ಭೂಪನೋರ್ವ ಸರಪಳಿಯಿಂದ ಬೈಕಿಗೆ ಕಟ್ಟಿ ಅಮಾನುಷವಾಗಿ ಎಳೆದೊಯ್ದ ಘಟನೆ ಬೈಂದೂರಿನಲ್ಲಿ(Byndooru) ನಡೆದಿದೆ.
ಬೈಂದೂರು ತಾಲೂಕಿನ ಬಸ್ ನಿಲ್ದಾಣದ ಸಮೀಪದಿಂದ ರಾಷ್ಟ್ರೀಯ ಹೆದ್ದಾರಿ 66ರ(NH 66) ಮೇಲೆ ಈತ ಬೈಕ್ ಓಡಿಸುತ್ತಿದ್ದ. ಬೈಕಿನ ಹಿಂಬದಿಯಲ್ಲಿ ಸರಪಳಿಯಿಂದ ಬಿಗಿಯಲ್ಪಟ್ಟಿದ್ದ ನಾಯಿಯೊಂದು ಓಡೋಡಿ(Dog Run) ಬರುತ್ತಿತ್ತು. ಆದರೆ, ಬೈಕಿನ ವೇಗ ಹೆಚ್ಚಾಗುತ್ತಿದ್ದಂತೆ ಮುಗ್ಗರಿಸಿ ಬಿದ್ದ ನಾಯಿಯನ್ನು ಅದೇ ಸ್ಥಿತಿಯಲ್ಲಿ ಸರಿಸುಮಾರು ಎರಡು ಕಿ.ಮೀ. ದೂರದ ತನಕ ಎಳೆದೊಯುತ್ತಿದ್ದ. ಬೈಕ್ ಸವಾರನನ್ನು ಹಿಂಬಾಲಿಸಿದ ಕೆಲವು ಸ್ಥಳೀಯರು ಆತನನ್ನು ಅಡ್ಡ ಹಾಕಿ ತರಾಟೆಗೆ ತೆಗೆದುಕೊಂಡಿದ್ದಾರೆ.
ಆರಂಭದಲ್ಲಿ ಅದು ನಾನು ಸಾಕಿದ ನಾಯಿ ಏನು ಬೇಕಾದರೂ ಮಾಡುತ್ತೇನೆ ಎಂದು ಉಡಾಫೆಯಿಂದ ವರ್ತಿಸಿದ ಈತ ಜನರ ಗುಂಪು ಜಾಸ್ತಿಯಾಗಿ ಪೆಟ್ಟು ಬೀಳುವ ಸಂಭವ ಗೊತ್ತಾದಾಗ ಕ್ಷಮೆ ಕೇಳಿ ನಾಯಿಯನ್ನ ಮುದ್ದಿಸಿದ್ದಾನೆ. ಬೈಂದೂರು ಪಡುವರಿ(Bynduru Paduvari) ಬಳಿಯ ನಿವಾಸಿ ಎನ್ನಲಾಗಿದ್ದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ. ಈತನ ವರ್ತನೆ ಬಗ್ಗೆ ಬಾರೀ ಆಕ್ರೋಶ ವ್ಯಕ್ತವಾಗಿದ್ದು ಪೊಲೀಸರು ಸೋಮೊಟೊ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನು ಓದಿ : ಬೈಕ್ ಗಳ ನಡುವೆ ಮುಖಾಮುಖಿ ಡಿಕ್ಕಿ. ನಾಲ್ವರಿಗೆ ಗಾಯ