ಬೆಳಗಾವಿ (BELAGAVI): ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಯುವಕರ ಮೇಲೆ ದಾಳಿ ನಡೆಸಿದ ಘಟನೆ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ(CHENNAMMA CIRCLE) ನಡೆದಿದೆ.
ಅಪರಿಚಿತ ವ್ಯಕ್ತಿಗಳು ಯುವಕರಿಗೆ ಚಾಕುವಿನಿಂದ ಇರಿದರೆಂದು ಹೇಳಲಾಗುತ್ತಿದೆ. ಘಟನೆಯಲ್ಲಿ ದರ್ಶನ್ ಪಾಟೀಲ, ಸತೀಶ ಪೂಜಾರಿ, ಪ್ರವೀಣ್ ಗುಂಡ್ಯಾಗೋಳಗೆ ಗಂಭೀರ ಗಾಯಗೊಂಡಿದ್ದಾರೆ.
ಮೂವರು ಯುವಕರ ಹೊಟ್ಟೆ ಭಾಗಕ್ಕೆ ಚೂರಿ ಇರಿದು ಆರೋಪಿಗಳು ಪರಾರಿಯಾಗಿದ್ದಾರೆ. ತೀವ್ರ ಅಸ್ವಸ್ಥರಾಗಿದ್ದ ಮೂವರು ಯುವಕರನ್ನು ಬೆಳಗಾವಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಜರುಗಿದ ಗಣಪತಿ ವಿಸರ್ಜನಾ ಮೆರವಣಿಯಲ್ಲಿ ಸಾವಿರಾರು ಸಂಖ್ಯೆಯ ಯುವಕರು ಪಾಲ್ಗೊಂಡಿದ್ದರು. ಡಿಜೆಗೆ ಕುಣಿದು ಕುಪ್ಪಳಿಸುವ ವೇಳೆ ಕಾಲು ತಾಗಿದೆಯೆಂದು ಕ್ಯಾತೆ ತೆಗೆದು ಮೂವರು ಯುವಕರ ಮೇಲೆ ಏಕಾಏಕಿ ದಾಳಿ ನಡೆಸಲಾಗಿದೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆ(APMC POLICE STATION) ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಬೆಳಗಾವಿ ಕಮಿಷನರ್ ಯಡಾ ಮಾರ್ಟಿನ್ ಪ್ರತಿಕ್ರಿಯೆ ನೀಡಿದ್ದು, ಮೆರವಣಿಗೆಯಲ್ಲಿ ಚಾಕು ಇರಿತ ಆಗಿಲ್ಲ, ಮೆರವಣಿಗೆಯಲ್ಲಿ ಜಗಳ ಆಗಿತ್ತು ನಮ್ಮ ಪೊಲೀಸರು ಜಗಳ ಬಿಡಿಸಿ ಕಳುಹಿಸಿದ್ರು ಮಾಹಿತಿ ಪ್ರಕಾರ ಎರಡು ಟೀಂನವರಿಗೆ ಮುಂಚೆ ಹಳೇ ದ್ವೇಷ ಇತ್ತು. ಎಲ್ಲರೂ ಡ್ಯಾನ್ಸ್ ಮಾಡುವಾಗ ಒಬ್ಬರಿಗೊಬ್ಬರಿಗೆ ಕೈತಾಗಿ ಜಗಳ ಆಗಿದೆ. ಮೂವರಿಗೂ ಸಣ್ಣ ಪುಟ್ಟ ಗಾಯಗಳಾಗಿವೆ. ಚಾಕು ಇರಿದವರ ಮಾಹಿತಿ ಸಿಕ್ಕಿದೆ ಆರೋಪಿಗಳನ್ನ ಅರೆಸ್ಟ್ ಮಾಡುತ್ತೇವೆಂದು ಕಮಿಷನರ್ ಯಡಾ ಮಾರ್ಟಿನ್ ಹೇಳಿದ್ದಾರೆ.
ಇದನ್ನು ಓದಿ : ಗಣೇಶೋತ್ಸವದಲ್ಲಿ ಜನವೋ ಜನ.