ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಸಿದ್ದಾಪುರ (Siddapur): ಬೆಂಗಳೂರಿನ ಚಿನ್ನಸ್ವಾಮಿ ಸ್ಟೆಡಿಯಂ ಬಳಿ ಉಂಟಾದ ಕಾಲ್ತುಳಿತದಲ್ಲಿ ಉತ್ತರಕನ್ನಡ ಜಿಲ್ಲೆಯ ಸಿದ್ದಾಪುರ ಮಹಿಳೆ ಸಾವನ್ನಪ್ಪಿದ್ದಾಳೆ.
26 ವರ್ಷದ ಅಕ್ಷತಾ ಸಾವು ಕಂಡ ಮಹಿಳೆ. ಒಂದು ವರ್ಷದ ಹಿಂದೆ ಮದುವೆಯಾಗಿದ್ದ ಅಕ್ಷತಾ ಗಂಡನೊಂದಿಗೆ ಸ್ಟೇಡಿಯಂಗೆ ಹೋಗಿದ್ದರು. ಅ ವೇಳೆ ಕಾಲ್ತುಳಿತವಾಗಿ ಗಂಡನ ಎದುರೆ ಪತ್ನಿ ಸಾವನ್ಮಪ್ಪಿದ್ದಾಳೆ.
ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತೊರ ಪರೀಕ್ಷೆ ನಡೆಸಿ ಅಕ್ಷತಾ ಕುಟುಂಬಸ್ಥರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.
ಸಿದ್ದಾಪುರಕ್ಕೆ ಮೃತದೇಹ ರವಾನೆಯಾಗಿದೆ. ಕಳೆದ ಒಂದು ವರ್ಷದ ಹಿಂದೆ ವಿವಾಹವಾಗಿದ್ದ ಅಕ್ಷತಾ, ಖಾಸಗಿ ಸಂಸ್ಥೆಯಲ್ಲಿ ಸಿಎ ಆಗಿ ಕೆಲಸ ಮಾಡುತ್ತಿದ್ದರು. ಪತಿ ಆಶಯ್ ಸಾಫ್ಟ್ ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದಾರೆ. ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ದಂಪತಿ ವಾಸವಾಗಿದ್ದರು.
ಇದನ್ನು ಓದಿ: ರೀಲ್ಸ್ ಮಾಡಲು ಹೋಗಿ ನದಿಯಲ್ಲಿ ಮುಳುಗಿ ಆರು ಬಾಲಕಿಯರು ಸಾವು.