ಕಾರವಾರ (KARWAR) : ಮಳೆಯ ಅವಾಂತರದಿಂದಾಗಿ ಕರಾವಳಿ (KARAVALI) ಭಾಗದಲ್ಲಿ ರೈಲು ಪ್ರಯಾಣಿಕರಿಗೆ ಇನ್ನಷ್ಟು ತೊಂದರೆಯಾಗಲಿದೆ.

ಗುಡ್ಡಕುಸಿತದಿಂದ ಸ್ಥಗಿತವಾಗಿದ್ದ ಬೆಂಗಳೂರು ಕರಾವಳಿ (BANGLORE-KARAVALI) ಜಿಲ್ಲೆಗಳ ನಡುವೆ ಓಡಾಡುತ್ತಿದ್ದ 10 ರೈಲುಗಳ ಸಂಚಾರ ಇನ್ನಷ್ಟು ದಿನಗಳ ಕಾಲ ತಡವಾಗಲಿದೆ ಎಂದು ರೈಲ್ವೆ ಇಲಾಖೆ (RAILWAY DEPARTMENT) ಮಾಹಿತಿ ನೀಡಿದೆ.

ಹಾಸನ(HASAN) ಜಿಲ್ಲೆಯ ಸಕಲೇಶಪುರ (SAKALESHAPURA) ಹತ್ತಿರದಲ್ಲಿ ಕಳೆದ ವಾರ ಭೂ ಕುಸಿತ ಉಂಟಾಗಿ ಬೆಂಗಳೂರು ಮಂಗಳೂರು (MANGLORE) ಸೇರಿದಂತೆ ರಾಜ್ಯದ ಸಂಚರಿಸುವ 12 ರೈಲುಗಳು ರದ್ದಾಗಿದ್ದವು. ಸದ್ಯ ಸುರಕ್ಷತಾ ಕಾಮಗಾರಿ ನಡೆಸಲಾಗುತ್ತಿದ್ದು, ಭೂ ಭಾಗವನ್ನು ಭದ್ರ ಮಾಡಿ ರೈಲ್ವೆ ಟ್ರಾಕ್ ಪುನಃ ಸ್ಥಾಪಿಸಲಾಗುತ್ತಿದೆ. ಈ ಕಾಮಗಾರಿ ಇನ್ನೂ ಎರಡರಿಂದ ಮೂರು ದಿನ ಮುಂದುವರೆಯಲಿದೆ. ಈ ಹಿನ್ನೆಲೆಯಲ್ಲಿ ರೈಲು ಸಂಚಾರದಲ್ಲಿ ವ್ಯತ್ಯಯವಾಗಲಿದೆ.

ಬೆಂಗಳೂರು – ಕರಾವಳಿ ಮಾರ್ಗದಲ್ಲಿ ಆಗಸ್ಟ್ 9 ರಿಂದ ಬಹುತೇಕ ಎಲ್ಲಾ ರೈಲುಗಳ ಸಂಚಾರವು ಆರಂಭವಾಗುವ ಸಾಧ್ಯತೆ ಇದೆ ಎಂದು ರೈಲ್ವೆ ಇಲಾಖೆ ಮಾಹಿತಿ ತಿಳಿಸಿದೆ..