ಹಾಸನ(HASAN) : ಈ ಬಾರಿಯ ಮಳೆ ಇನ್ನು ಮುಂದುವರಿಯಲಿದ್ದು, ಆಕಾಶದಿಂದ ಒಂದು ದೊಡ್ಡ ವಿಪತ್ತು ಎದುರಾಗಲಿದೆ ಎಂದು ಕೋಡಿಮಠದ(KODIMATH)  ಶಿವಾನಂದ ಶಿವಯೋಗಿ ರಾಜೇಂದ್ರ ಮಹಾಸ್ವಾಮೀಜಿ ಸ್ಪೋಟಕ ಭವಿಷ್ಯ ನುಡಿದಿದ್ದಾರೆ.

ಮಳೆಯಿಂದ ಹೆಚ್ಚಿನ ತೊಂದರೆ ಇದೆ. ಪ್ರಾಕೃತಿಕ ದೋಷವಿದ್ದು ಭೂಮಿ, ಜಲ, ಅಗ್ನಿ, ವಾಯು, ಆಕಾಶ ಸೇರಿ ಎಲ್ಲಾ ಕಡೆ ತೊಂದರೆ ಇದೆ. ಮುಂದೆ ಆಕಾಶದಿಂದ ಆಪತ್ತು ಬರುತ್ತದೆ.  ಜನ ಇದ್ದಂಗೆ ಸಾಯ್ತಾರೆ. ಭೂಮಿ ಬಿರುಕು ಬಿಡುತ್ತೆ, ಗುಡ್ಡ ಕುಸಿತ ಆಗಬಹುದು.  ಪ್ರವಾಹದಲ್ಲಿ ಅನಾಹುತವಿದೆ ಎಂದು ತಾವು ಹೇಳಿದ್ದು ಎಲ್ಲವೂ ನಿಜವಾಗಿದೆ ಎಂದು ಸ್ವಾಮೀಜಿ ಹೇಳಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಸರ್ಕಾರದ (STATE and CENTRAL GOVERNMENT)ಬದಲಾವಣೆ ಸದ್ಯಕ್ಕಿಲ್ಲ. ಸರ್ಕಾರಕ್ಕೆ ಏನು ತೊಂದರೆ ಆಗಲ್ಲ ಅಂತ ಹೇಳಿದ್ದೆ. ಅದೇ ಪರಿಸ್ಥಿತಿ ಮುಂದುವರೆಯುತ್ತದೆ ಎಂದು ಸ್ವಾಮೀಜಿ ಹೇಳಿದ್ದಾರೆ.

ಅಭಿಮನ್ಯುವಿನ ಬಿಲ್ಲನ್ನು ಮೋಸದಿಂದ ಕರ್ಣನ ಕೈಯಲ್ಲಿ ದಾರ ಕಟ್ ಮಾಡಿಸಿದ. ಮಹಾಭಾರತದಲ್ಲಿ ಕೃಷ್ಣ ಇದ್ದ, ಗದಾಯುದ್ಧದಲ್ಲಿ ಭೀಮಾ ಗೆದ್ದ. ಇದೀಗ ಕೃಷ್ಣ ಇಲ್ಲದೆ ದುರ್ಯೋಧನ ಗೆಲ್ತಾನೆ ಎಂದು ಮಾರ್ಮಿಕವಾಗಿ ಮಾತನಾಡಿದರು.

ಮಳೆಯಿಂದ ಅನಾವೃಷ್ಠಿಯಾಗುತ್ತದೆ ಎಂದು ಕೋಡಿ ಮಠದ ಸ್ವಾಮೀಜಿ ವರ್ಷದ ಆರಂಭದಲ್ಲಿಯೇ ಭವಿಷ್ಯ(ASTROLOGER) ನುಡಿದಿದ್ದರು. ಅಂತೆಯೇ ಈ ಬಾರಿ ಉತ್ತಮ ಮಳೆಯಾಗಿದೆ. ಇನ್ನು 2024ನೇ ವರ್ಷ ಭಯಾನಕ ಅನುಭವವನ್ನು ನೀಡಲಿದ್ದು, ಈ ವರ್ಷದಲ್ಲಿ ಜಗತ್ತಿನಲ್ಲಿ ಒಬ್ಬ ಸಂತ ಹಾಗೂ ಒಂದೆರಡು ಪ್ರಧಾನಿಗಳು ಸಾವಿಗೀಡಾಗಲಿದ್ದಾರೆ ಎಂದು ಸ್ವಾಮೀಜಿ ಹೇಳಿದ್ದ ಮಾತು ನಿಜವಾಗಿತ್ತು.

ಹಿಂದೂಗಳು ಒಂದಾದ್ರೆ ಒಳ್ಳೆಯದು. ಭಾರತೀಯರು ಒಗ್ಗಟ್ಟಾದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ. ಈ ಹಿಂದೆ ಅಯೋಧ್ಯೆ ರಾಮಂದಿರ ವಿಷಯದಲ್ಲಿ ಕೋಡಿಮಠ ಶ್ರೀಗಳು(KODIMATH SHRI) ಪ್ರತಿಕ್ರಿಯೆ ನೀಡಿದ್ದರು.

ಇದನ್ನು ಓದಿ : ಹಾಲು ಕದ್ದ ಪೊಲೀಸ್

ಗಣೇಶ ವಿಸರ್ಜನೆಗೆ ಹೋಗಿದ್ದ ಬಾಲಕನ ರಕ್ಷಣೆ

ಜಮೀನು ವಿಚಾರಕ್ಕೆ ಮಹಿಳೆಗೆ ಜೀವ ಬೆದರಿಕೆ