ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಯಲ್ಲಾಪುರ (Yallapura) : ತಾಲೂಕಿನ ರಾ. ಹೆದ್ದಾರಿ 63 ಯಲ್ಲಾಪುರ ಅರಬೈಲು ಘಟ್ಟದಲ್ಲಿ (Arebail Ghat) ಖಾಸಗಿ ಬಸ್ ಪಲ್ಟಿಯಾದ ಘಟನೆ ನಡೆದಿದೆ.

ಬೆಂಗಳೂರಿನಿಂದ ಗೋವಾ(Bangalore to Goa) ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ ಈ ಅಪಘಾತ ಸಂಭವಿಸಿದೆ. ಬಸ್ಸಿನಲ್ಲಿ 25 ಪ್ರಯಾಣಿಕರು ಸಂಚರಿಸುತ್ತಿದ್ದರು. ಆದರೆ ಅಪಘಾತದ ಸಂದರ್ಭದಲ್ಲಿ ಬಸ್ ಪ್ರಪಾತಕ್ಕೆ‌ ಬೀಳುವ ಸಂಭವ ಇತ್ತು.  ಸ್ವಲ್ಪ ಮುಂದೆ ಸಾಗಿದರೆ ಪ್ರಪಾತಕ್ಕೆ ಬಸ್  ಬೀಳುತಿತ್ತು. ಅದೃಷ್ಟವಶಾತ್  ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ.

ಯಲ್ಲಾಪುರ ಪೊಲೀಸರು(Yallapur Police) ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಕೆಲ ದಿನಗಳ ಹಿಂದೆ ಇದೇ ಸ್ಥಳದಲ್ಲಿ ವಾಹನವೊಂದು ಬಿದ್ದಿತ್ತು. ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : ಭಟ್ಕಳದಲ್ಲಿ ಮನೆ ದೋಚಿದ ಕಳ್ಳರು. ಅಪಾರ ಪ್ರಮಾಣದ ಆಭರಣಗಳ ಕಳ್ಳತನ

ಜೂನ್ 25ರಂದು ತಾಲೂಕುಗಳ ಶಾಲೆಗಳಿಗೆ ರಜೆ ಘೋಷಣೆ.

ಶಾಲಾ ವಿದ್ಯಾರ್ಥಿ ಅಪಘಾತದಲ್ಲಿ ದುರ್ಮರಣ. ಬಿಕ್ಕಿಬಿಕ್ಕಿ ಅತ್ತ ಶಿಕ್ಷಕರು.