ಹಳಿಯಾಳ:  ದಾಂಡೇಲಿ ತಾಲೂಕಿನ ಕರ್ಕಾ ಆಲೂರು ನಡುವೆ ಕಾರು ಮತ್ತು ಬೈಕ್ ಅಪಘಾತ ಸಂಭವಿಸಿದ ಘಟನೆ  ನಡೆದಿದೆ. ಘಟನೆಯಲ್ಲಿ ಸವಾರ ಮೃತಪಟ್ಟಿದ್ದಾನೆ.

ಹಳಿಯಾಳದಿಂದ ದಾಂಡೇಲಿ ಕಡೆ ತೆರಳುತ್ತಿದ್ದ ಬೈಕ್ ಮತ್ತು ದಾಂಡೇಲಿಯಿಂದ ಹಳಿಯಾಳಕ್ಕೆ ಹೋಗುತ್ತಿದ್ದ ಕಾರು ಮಧ್ಯೆ ಅಪಘಾತ ಸಂಭವಿಸಿದೆ. ಹಳಿಯಾಳ ತಾಲೂಕಿನ  ದುಸಗಿ ಗ್ರಾಮದ  ಸುನೀಲ್ ಬೋಕ್ನೆಕರ್ (28) ಎಂಬಾತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಅಪಘಾತದ ವೇಳೆ ಬೆಂಕಿ ಉಂಟಾಗಿದ್ದು ಸಂಪೂರ್ಣ ಸುಟ್ಟು ಭಸ್ಮವಾಗಿದೆ.