ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ದಾಂಡೇಲಿ(Dandeli) : ನಗರದ ಲಿಂಕ್ ರಸ್ತೆಯಲ್ಲಿ(Link Road) ಮತ್ತೆ ಅಂಗಡಿಗಳ ಕಳ್ಳತನ (Theft) ನಡೆದಿದೆ.  ನಿನ್ನೆ ತಡರಾತ್ರಿ ಇಲ್ಲವೇ ಗುರುವಾರ ನಸುಕಿನ ವೇಳೆಯಲ್ಲಿ ಈ ಕೃತ್ಯ ನಡೆದಿರುವ ಸಾಧ್ಯತೆಯಿದೆ.

ಲಿಂಕ್ ರಸ್ತೆಯಲ್ಲಿರುವ ಸೋನಾ ಮೆಡಿಕಲ್ ಅಂಗಡಿಗೆ ಮತ್ತು ಶಬ್ಬೀರ್ ಎಲೆಕ್ಟ್ರಾನಿಕ್ ಮತ್ತು ಮೊಬೈಲ್(Electronic and Mobile)  ಅಂಗಡಿಯ ಮೇಲ್ಚಾವಣಿ ಸೀಟು ಒಡೆದು ಒಳ ನುಗ್ಗಿದ ಕಳ್ಳರು ಕೃತ್ಯ ಏಸಗಿದ್ದಾರೆ. ಸೋನಾ ಮೆಡಿಕಲ್ ಶಾಪಿನಲ್ಲಿ ಡ್ರಾವರಿನಲ್ಲಿಟ್ಟಿದ್ದ ಅಂದಾಜು ನಾಲ್ಕರಿಂದ ಐದು ಸಾವಿರ ರೂಪಾಯಿ ಚಿಲ್ಲರೆ ಹಣ ಕಳವು ಮಾಡಿದ್ದಾರೆ ಎಂದು ಮಾಲಿಕ ಸತೀಶ್ ಬಿದಾದ ಹೇಳಿದ್ದಾರೆ.  ಶಬ್ಬೀರ್ ಎಲೆಕ್ಟ್ರಾನಿಕ್ ಮತ್ತು ಮೊಬೈಲ್ ಅಂಗಡಿಯಿಂದ ಅಂದಾಜು 1,500/- ರೂ ನಗದು ಮತ್ತು ಮೂರ್ನಾಲ್ಕು ಮೊಬೈಲ್ ಕಳವಾಗಿರುವುದರ ಬಗ್ಗೆ ಮಾಲಿಕ ಶಬ್ಬೀರ್ ಹುಸೇನ್ ಸಾಬ್ ಪಾನವಾಲೆ ಅವರು  ಮಾಹಿತಿ ನೀಡಿದ್ದಾರೆ.

ಘಟನಾ ಸ್ಥಳಕ್ಕೆ ದಾಂಡೇಲಿ ನಗರ ಠಾಣೆಯ(Dandeli Town Station) ಪೊಲೀಸರು  ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆಯೂ ಇದೇ ಲಿಂಕ್ ರಸ್ತೆಯಲ್ಲಿ  ಮೂರು ಅಂಗಡಿಗಳ ಕಳ್ಳತನ  ನಡೆದಿತ್ತು. ಆದರೆ ಈಗೀನ ಕಳ್ಳತನವನ್ನ ಅದೇ ಕಳ್ಳರೇ ಮಾಡಿದ್ದಾರಾ ಇಲ್ಲವೇ ಬೇರೆಯವರ ಕೃತ್ಯನಾ ಎಂಬುದು ಪೊಲೀಸ್ ತನಿಖೆಯಿಂದ ಗೊತ್ತಾಗಬೇಕಿದೆ.


ಇದನ್ನು ಓದಿ : ಗೊಬ್ಬರ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು

ಮುರ್ಡೇಶ್ವರ ಲಾಡ್ಜ್ ನಲ್ಲಿ‌ ವೇಶ್ಯಾವಾಟಿಕೆ. ಮೂವರ ಬಂಧನ. ಮಹಿಳೆ ರಕ್ಷಣೆ

ಬಸ್ ಪಲ್ಟಿ. ಪ್ರಪಾತದ ದುರಂತದಿಂದ ಸ್ವಲ್ಪದರಲ್ಲಿ ಪಾರಾದ ಪ್ರಯಾಣಿಕರು.

ಭಟ್ಕಳದಲ್ಲಿ ಮನೆ ದೋಚಿದ ಕಳ್ಳರು. ಅಪಾರ ಪ್ರಮಾಣದ ಆಭರಣಗಳ ಕಳ್ಳತನ