ಭಟ್ಕಳ: ಜನ ಓಡಾಡುವ ಸ್ಥಳದಲ್ಲಿ ಮದ್ಯ ಸೇವಿಸುತ್ತಿದ್ದ ವ್ಯಕ್ತಿಯೋರ್ವನಿಗೆ ಪೊಲೀಸರು ವಶಕ್ಕೆ ತೆಗೆದುಕೊಂಡು ನಶೆ ಇಳಿಸಿದ ಘಟನೆ ಶಿರಾಲಿಯಲ್ಲಿ ವರದಿಯಾಗಿದೆ.
ಗುಡಿಹಿತ್ಲು ನಿವಾಸಿ ಜೀವನ ನಾಯ್ಕ(36) ಎಂಬತಾನೆ ನಶೆ ಇಳಿಸಿಕೊಂಡವನು. ಈತ ಶಿರಾಲಿಯ ಶ್ರೀಕೃಷ್ಣಪ್ರಸಾದ ಹೋಟೆಲ್ ಎದುರಿನ ಸಾರ್ವಜನಿಕ ಸ್ಥಳದಲ್ಲಿ ಮದ್ಯ (LIQUOR) ಸೇವಿಸುತ್ತಿದ್ದಾಗ ಗ್ರಾಮೀಣ ಠಾಣೆ (RURAL POLICE) ಪೊಲೀಸರು ಗಮನಿಸಿ ವಿಚಾರಿಸಿದ್ದಾರೆ. ಭಾನುವಾರ ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಮರಳಿರಲಿಲ್ಲ. ರಾತ್ರಿ ಹೋಟೆಲ್ ಎದುರು ಮದ್ಯ ಸೇವಿಸುತ್ತಿದ್ದಾಗ ಪೊಲೀಸರು ದಾಳಿ ನಡೆಸಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ ಅಡಿಯಲ್ಲಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.