ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar):  ಉತ್ತರಕನ್ನಡ ಜಿಲ್ಲೆಯ ಶ್ರೀ ಜೈ ಅಂಬೆ ದುರ್ಗಾಮಾತಾ  ಸೊಸೈಟಿಯಿಂದ  ಗ್ರಾಹಕರಿಗೆ ಬಾರೀ ಮೊತ್ತದ ವಂಚನೆಯಾಗಿದೆ(Cheating). ಈಗಾಗಲೇ ಸೊಸೈಟಿಯ ಎಂಡಿ ತಲೆಮರೆಸಿಕೊಂಡಿದ್ದ  ಗ್ರಾಹಕರು ಕಂಗಾಲಾಗಿದ್ದಾರೆ.

ಕಾರವಾರ(Karwar) ತಾಲೂಕಿನ ಸದಾಶಿವಗಢದ ತಾರೀವಾಡದಲ್ಲಿ (Sadashivagada Tariwada) ದುರ್ಗಾಮಾತಾ ಕೋ ಆಪರೇಟಿವ್ ಸೊಸೈಟಿಯ (Durgamata co operative Society) ಮುಖ್ಯ ಕಚೇರಿಯಿದೆ.  ಚಿತ್ತಾಕುಲ, ದೇವಭಾಗ, ಹಣಕೋಣ, ಮಲ್ಲಾಪುರ, ಹೊನ್ನಾವರ(Honnavar), ಮಂಕಿ(Manki) ಹೀಗೆ ಒಟ್ಟು 12 ಶಾಖೆಗಳನ್ನ ಸೊಸೈಟಿ ಹೊಂದಿದೆ. ಆದ್ರೆ ಕಳೆದ ಕೆಲ ತಿಂಗಳಿಂದ ಗ್ರಾಹಕರ ಹಣ ವಾಪಾಸ್ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದೆ. ಹೀಗಾಗಿ ಗ್ರಾಹಕರು ಆತಂಕದಲ್ಲಿದ್ದಾರೆ.

  ದುರ್ಗಾಮಾತಾ ಸೊಸೈಟಿಯಲ್ಲಿ ಸುಮಾರು 56 ಕೋಟಿ ಹಣ ಗ್ರಾಹಕರಿಗೆ ವಾಪಾಸ ನೀಡಬೇಕಾಗಿದೆ ಎಂದು ಹೇಳಲಾಗುತ್ತಿದೆ. ಸೊಸೈಟಿಯಲ್ಲಿ ಎಂಡಿಯಾಗಿರುವ ಲಿಂಗರಾಜ ಕಲ್ಗುಟ್ಕರ್ ಕಳೆದ ಕೆಲ ದಿನಗಳಿಂದ ನಾಪತ್ತೆಯಾಗಿದ್ದಾನೆ. ಲಿಂಗರಾಜ ಕಲ್ಗುಟ್ಕರ್ ತಮ್ಮ ಕುಟುಂಬದವರು ಹಾಗೂ ಸಂಬಂಧಿಕರನ್ನ ಉದ್ಯೋಗಿಯನ್ನಾಗಿ ಮಾಡಿಕೊಂಡಿದ್ದಾನೆ. ಅಲ್ಲದೇ ಸೊಸೈಟಿಯಲ್ಲಿ ಕರ್ತವ್ಯ ನಿರ್ವಹಿಸುವ ಇತರ ಉದ್ಯೋಗಿಗಳ ಮೂಲಕ ಎಫ್ ಡಿ(FD), ಎಸ್ಬಿ ಖಾತೆಗಳನ್ನ(SB Account) ಮಾಡಿಸಿ ಕೋಟ್ಯಾಂತರ ರೂಪಾಯಿ ಹಣ ಸಂಗ್ರಹಿಸಿದ್ದಾರೆ. ಕಳೆದ ಆರು ತಿಂಗಳಿಂದ ಗ್ರಾಹಕರ ಹಣ ಮೆಚ್ಯುರಿಟಿ ಅವಧಿ ಮುಗಿದರೂ ನೀಡಿಲ್ಲ.

ಬಹುತೇಕ  ಶಾಖೆಗಳಲ್ಲಿ ಲಕ್ಷಾಂತರ ರೂ ಹಣ ಎಫ್ಡಿ ಹಣ ಇರಿಸಿಕೊಂಡಿದ್ದು, ಗ್ರಾಹಕರಿಗೆ ಒಂದೇ ಒಂದು ರೂಪಾಯಿ ಸಾಲ ಸೌಲಭ್ಯ  ಸಹ ನೀಡಿಲ್ಲ ಎನ್ನಲಾಗಿದೆ. ತಮಗೆ ಕಷ್ಟಕಾಲದಲ್ಲಿ ಸಹಾಯವಾಗಲಿ ಎಂದು ಉತ್ತರಕನ್ನಡ ಜಿಲ್ಲೆಯ ಮಹಿಳೆಯರು, ನಿವೃತ್ತ ನೌಕರರು, ವಿದೇಶದಲ್ಲಿದ್ದ ಕೆಲಸ ಮಾಡುವ ಯುವಕರ ಕುಟುಂಬದವರು ಲಕ್ಷಾಂತರ ರೂಪಾಯಿ ಹಣ ಇಟ್ಟಿದ್ದರು. ಕಳೆದ ಎಪ್ರಿಲ್ 30ರಂದು ಗ್ರಾಹಕರ ಹಣ ವಾಪಾಸ್ ನೀಡಬೇಕಾಗಿತ್ತು. ಆಗ ವಿಚಾರಿಸಿದಾಗ   ಜೂನ್ 25ಕ್ಕೆ ಹಣ ನೀಡುವುದಾಗಿ ಎಂಡಿ ಲೆಟರ್ ನೀಡಿದ್ದಾರೆ. ಆದರೆ  ಹಣ ವಾಪಸ್ ನೀಡದಿರುವುದರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಇದರಿಂದ ಆಕ್ರೋಶಗೊಂಡ ಗ್ರಾಹಕರು ಚಿತ್ತಾಕುಲ ಪೊಲೀಸ್ ಠಾಣೆ(Chittakul Police Station) ಪೊಲೀಸರಿಗೆ ದೂರು ನೀಡಿದ್ದಾರೆ. ಅಲ್ಲದೇ  ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ನ್ಯಾಯ ದೊರಕಿಸುವಂತೆ ವಿನಂತಿಸಿದ್ದಾರೆ.  ನಿವೃತ್ತ ನೌಕರರು ತಮಗೆ ಬರುವ  ಫೆನ್ಶನ್ ಹಣ, ಮಕ್ಕಳ ವಿದ್ಯಾಭ್ಯಾಸಕ್ಕಾಗಿ, ಮದುವೆಗಾಗಿ, ಆಪತ್ಕಾಲದಲ್ಲಿ ಸಹಾಯವಾಗಲೆಂದು ಸೊಸೈಟಿಯಲ್ಲಿ ಇಟ್ಟ ಹಣವನ್ನ ವಾಪಾಸ್ ಸಿಗದೇ ಇರೋದ್ರಿಂದ ಗ್ರಾಹಕರು ಕಂಗಾಲಾಗಿದ್ದಾರೆ.

ಇದನ್ನು ಓದಿ : ಲಿಂಕ್ ರಸ್ತೆಯಲ್ಲಿ ಮತ್ತೆ ಕಳ್ಳರ ಕರಾಮತ್ತು. ಪೊಲೀಸರಿಂದ ತನಿಖೆ

ಗೊಬ್ಬರ ಗುಂಡಿಗೆ ಬಿದ್ದು ಎರಡು ವರ್ಷದ ಮಗು ಸಾವು.

ಮುರ್ಡೇಶ್ವರ ಲಾಡ್ಜ್ ನಲ್ಲಿ‌ ವೇಶ್ಯಾವಾಟಿಕೆ. ಮೂವರ ಬಂಧನ. ಮಹಿಳೆ ರಕ್ಷಣೆ