ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಕಾರವಾರ (Karwar) : ವಾರದ ಹಿಂದೆ ಜಿಲ್ಲಾಸ್ಪತ್ರೆಯಲ್ಲಿ ಲೋಕಾಯುಕ್ತರಿಂದ ಬಂಧನಕ್ಕೊಳಗಾದ ಜಿಲ್ಲಾ ಸರ್ಜನ್(District Surgeon) ಹಾಗೂ ಹೆರಿಗೆ ವೈದ್ಯ ಡಾ. ಶಿವಾನಂದ ಕುಡ್ತಲಕರ್ ಅವರನ್ನು ಅಮಾನತ್(Suspended) ಮಾಡಲಾಗಿದೆ.
ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯ ಕಮಿಷನರ್ ಕೆ.ಬಿ. ಶಿವಕುಮಾರ್ ಅವರು ಅಮಾನತ್ ಮಾಡಿ ಆದೇಶವನ್ನು ಹೊರಡಿಸಿದ್ದಾರೆ.
ಜುಲೈ 10ರಂದು ಡಾ. ಶಿವಾನಂದ ಕುಡ್ತಲಕರ್ ಅವರು ಲಂಚ ಪಡೆಯುತ್ತಿದ್ದಾಗ ಲೋಕಾಯುಕ್ತದ ಬಲೆಗೆ(Lokayukta Net) ಬಿದ್ದಿದ್ದರು. ಆಸ್ಪತ್ರೆಯ ಹಾಸಿಗೆ ಸರಬರಾಜು ಟೆಂಡರ್(Tender) ಪಡೆದ ಗುತ್ತಿಗೆದಾರನಿಂದ 30ಸಾ. ರೂಪಾಯಿ ಲಂಚ ಪಡೆಯುವಾಗ ಕಚೇರಿಯಲ್ಲಿಯೇ ಲೋಕಾಯುಕ್ತ ಅಧಿಕಾರಿಗಳ ಕೈಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
ಈ ಪ್ರಕರಣದ ನಂತರ ವೈದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಲಂಚ ಪ್ರಕರಣದ ಬಗ್ಗೆ ಆರೋಗ್ಯ ಇಲಾಖೆ ಕಮಿಷನರ್ಗೆ ವರದಿ ತಲುಪಿದ ನಂತರ ತಕ್ಷಣ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಈ ಆಧಾರದ ಮೇಲೆ ಡಾ. ಶಿವಾನಂದ ಕುಡ್ತಲಕರ್ ಅವರನ್ನು ಅಮಾನತ್(Suspended) ಮಾಡಿ ಅಧಿಕೃತ ಆದೇಶ ಹೊರಡಿಸಲಾಗಿದೆ. ಈ ಆದೇಶವನ್ನು ಕಾರವಾರ ಮೆಡಿಕಲ್ ಕಾಲೇಜಿನ(Karwar Medical College) ಆಡಳಿತ ಮಂಡಳಿ ಹಾಗೂ ನಿರ್ದೇಶಕರಿಗೆ ರವಾನಿಸಲಾಗಿದೆ.
ಇದನ್ನು ಓದಿ : ಭಟ್ಕಳದಲ್ಲಿ ಜುಲೈ 18ರಿಂದ 20 ರವರೆಗೆ ಹಲಸು ಮತ್ತು ಹಣ್ಣಿನ ಮೇಳ.
	
						
							
			
			
			
			
