ಕಾರವಾರ : ನಗರದ ಸಮೀಪ ಇರುವ ಸುರಂಗ ಮಾರ್ಗದಲ್ಲಿ ಕಲ್ಲೊಂದು ಬಿದ್ದು ಆತಂಕ ಉಂಟುಮಾಡಿದೆ. ಬಿಣಗಾ ಕಡೆಯಿಂದ ಕಾರವಾರಕ್ಕೆ ತೆರಳುವ ಟನೆಲ್ ಹತ್ತಿರ ಗುಡ್ಡದಿಂದ ಕಲ್ಲು ಕೆಳಕ್ಕೆ ಜಾರಿ ರಸ್ತೆ ನಡುವೆ ಬಿದ್ದಿದೆ.

ಬೆಳಿಗ್ಗೆ ಈ ಮಾರ್ಗದಲ್ಲಿ ಓಡಾಡುವ ವಾಹನ ಸವಾರರು ಆತಂಕ ಪಡುವಂತಾಯಿತು. ಕಳೆದ ವರ್ಷ ಸಹ ಸುರಂಗ ಮಾರ್ಗ ಸೋರುವ ಕಾರಣಕ್ಕಾಗಿ ಕೆಲ ತಿಂಗಳು ಸಂಚಾರ ಬಂದ್ ಮಾಡಲಾಗಿತ್ತು. ನಾಗರಿಕರ ಪ್ರತಿಭಟನೆ, ಐಆರ್ಬಿ ಕಂಪನಿಯ ಸುರಕ್ಷತೆಯ ಭರವಸೆಯಿಂದಾಗಿ ತೆರವುಗೊಳಿಸಲಾಗಿತ್ತು.

ಇದೀಗ ಮೊದಲ ಮಳೆಯಲ್ಲಿ ಟನೆಲ್ ಸಮೀಪ ಗುಡ್ಡದಿಂದ ಕಲ್ಲು ರಸ್ತೆಗೆ ಬಿದ್ದಿದರಿಂದ ವಾಹನ ಸವಾರರು, ಪ್ರಯಾಣಿಕರಲ್ಲಿ ಆತಂಕ ಉಂಟಾಗಿದೆ. ಹೀಗಾಗಿ ಮತ್ತೆ ಸುರಂಗ ಸುದ್ದಿ ಮಾಡಿದೆ.