ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಹೊನ್ನಾವರ/ಕುಮಟಾ (Honnavar/Kumta) : ಉತ್ತರಕನ್ನಡ ಜಿಲ್ಲೆಯ ಕರಾವಳಿ ತಾಲೂಕಿನಲ್ಲಿ(Coastal Taluku) ಬಾರೀ ವರ್ಷಧಾರೆಯಾಗುತ್ತಿದೆ. ವರುಣನ(Rain) ಅಬ್ಬರದಿಂದಾಗಿ ಹೊನ್ನಾವರ, ಕುಮಟಾ, ಕಾರವಾರದ ಕೆಲ ಗ್ರಾಮಗಳ ನಾಗರಿಕರು ತೊಂದರೆಗೆ ಸಿಲುಕಿದ್ದಾರೆ.
ಮಳೆಯ ರುದ್ರ ನರ್ತನದಿಂದಾಗಿ ಹೊನ್ನಾವರ ತಾಲೂಕಿನ ಹೊಸಾಕುಳಿಯ ಬಾಸ್ಕೇರಿ ಹೊಳೆ(Bhaskeri River) ತುಂಬಿ ಹರಿಯುತ್ತಿದೆ. ಪರಿಣಾಮವಾಗಿ ಹಲವು ಮನೆಗೆ ನೀರು ನುಗ್ಗಿದೆ. ಗುಂಡಬಾಳ ಮತ್ತು ಬಡಗಣಿ ಹೊಳೆಭರ್ತಿಯಾಗಿದ್ದರಿಂದ ನೆರೆ ಭೀತಿ ಸುತ್ತಮುತ್ತಲಿನ ತೋಟಗಳು ಜಲಾವ್ರತಗೊಂಡಿದೆ. ಮುಗ್ವಾ ಗ್ರಾ. ಪಂ. ವ್ಯಾಪ್ತಿಯಲ್ಲಿಯೂ ಎರಡು ಕಾಳಜಿ ಕೇಂದ್ರ ಈಗಾಗಲೇ ತೆರೆಲಾಯಲಾಗಿದೆ.
ಬಾಸ್ಕೇರಿ ನದಿಗೆ ತಾಗಿರುವ ದೊಡ್ಡಹಿತ್ಲು, ಬಾಸ್ಕೇರಿ, ಬಾಳೆಗದ್ದೆ, ಹೊಸಾಕುಳಿ, ಬಂಕನಹಿತ್ಲು ಮತ್ತು ಗುಂಡಬಾಳ ನದಿಗೆ ಹೊಂದಿಕೊಂಡಿರುವ ಮುಟ್ಟಾ, ಚಿಕ್ಕನಕೊಡ, ಗುಂಡಿಬೈಲ್, ಹಾಡಗೇರಿ, ಹುಡಗೋಡ, ಕಡಗೇರಿ, ಹಡಿನಬಾಳ, ಖರ್ವಾ, ನಾಥಗೇರಿ, ಕಾವೂರು, ಕೂಡ್ಲ ಜನರು ನೆರೆಗೆ ಸಿಲುಕಿದ್ದಾರೆ. ಹೀಗಾಗಿ ಮುನ್ನೆಚ್ಚರಿಕೆಯಾಗಿ ಕಾಳಜಿ ಕೇಂದ್ರಕ್ಕೆ ರವಾನಿಸಲಾಗಿದೆ.
ಇನ್ನೂ ಕುಮಟಾ ತಾಲೂಕಿನ(Kumta Taluku) ಕೋನಳ್ಳಿ ಮತ್ತು ಊರಕೇರಿ ಗ್ರಾಮದಲ್ಲಿ ನೆರೆಯಿಂದಾಗಿ ಜನ ತೊಂದರೆ ಅನುಭವಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ ಎರಡು ಕಡೆಗಳ ಕಾಳಜಿ ಕೇಂದ್ರ ತೆರೆಯಲಾಗಿದೆ.
ಕಾರವಾರ ತಾಲೂಕಿನ(Karwar Taluku) ಅರಗಾ ಮತ್ತು ಕೆರವಡಿಯಲ್ಲಿ ಎರಡು ಕಡೆಗಳಲ್ಲಿ ಕಾಳಜಿ ಕೇಂದ್ರ ತೆರೆದಿದ್ದು ಅಧಿಕಾರಿಗಳು ಎಚ್ಚರಿಕೆಯಿಂದಿರುವಂತೆ ತಿಳಿಸಲಾಗಿದೆ. ನಾಳೆವರೆಗೆ ರೆಡ್ ಅಲರ್ಟ್ ಇದ್ದು ಮಳೆ ಮತ್ತು ಗಾಳಿ ಹೆಚ್ಚಾಗುವ ಸಾಧ್ಯತೆ ಇದೆ. ಹೀಗಾಗಿ ನದಿ ಮತ್ತು ಸಮುದ್ರ ತೀರದ ನಿವಾಸಿಗಳು ಎಚ್ಚರದಿಂದಿರುವಂತೆ ಸೂಚಿಸಲಾಗಿದೆ.
ಇದನ್ನು ಓದಿ : ನಾಳೆ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ. ಬಾರೀ ಮಳೆಗಾಳಿ.
ಬೇಲಿ ಹಾರಿ ಬಂದ ಹಾವೇರಿ, ದಾವಣಗೆರೆ ಜೂಜುಕೋರರು. ಶಿರಸಿಯಲ್ಲಿ ಲಕ್ಷಾಂತರ ರೂ. ಹಣದೊಂದಿಗೆ ಸಿಕ್ಕಿಬಿದ್ದರು.