ಹೊನ್ನಾವರ(HONNAVAR) : ತಾಲೂಕಿನ ಟೊಂಕಾ ಕಾಸರಕೋಡ ಕಡಲತೀರ ಅಭ್ಯಾಸಕ್ಕೆ ಬೆಂಗಳೂರಿನ ಅಜೀಮಂ ಪ್ರೇಮ ಜೀ (AJEEM PREMJEE) ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು (UNIVERSITY STUDENTS) ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕಡಲಾಮೆ ಮೊಟ್ಟೆ(TURTLE EGG) ಇಡುವ ಪ್ರದೇಶದಲ್ಲಿ ಆಲಿವ್ ರಿಡ್ಲೆ (ALIVE REDLE) ಹಾಗೂ ಗ್ರೀನ್ ಜಾತಿಯ ಎರಡು ಕಡಲಾಮೆ ಕಳೆಬರಹ ಪತ್ತೆಯಾಗಿದೆ. ದೇಶದ ನಾನಾ ರಾಜ್ಯಗಳಿಂದ ವಿದ್ಯಾರ್ಥಿಗಳು, ಕಡಲ ವಿಜ್ಞಾನಿಗಳು ಅಧ್ಯಯನಕ್ಕಾಗಿ ಆಗಮಿಸುತ್ತಾರೆ.
ಕಳೆದ ಹಲವು ವರ್ಷಗಳಿಂದ ಕಾಸರಕೋಡು ಕಡಲತೀರದಲ್ಲಿ ಕಡಲಾಮೆಗಳು ಮೊಟ್ಟೆ ಇಡುತ್ತವೆ. ಬಳಿಕ ಮರಿ ಹೊರಬಂದು ಪುನಃ ಸಮುದ್ರ ಸೇರುವುದು ವಾಡಿಕೆ. ಅದೇ ರೀತಿ ಆಗಾಗ ಆಮೇಗಳು ಸತ್ತು ತೀರಕ್ಕೆ ಬಂದು ಬೀಳುತ್ತವೆ. ಸಮುದ್ರದ ಹವಮಾನ ಸಾವಿಗೆ ಕಾರಣವೆಂದು ಹೇಳಲಾಗುತ್ತಿದೆ.
ಈ ತಿಂಗಳಲ್ಲಿ ಒಟ್ಟು ಐದು ಆಮೆಗಳು ಮೃತಪಟ್ಟಿರುವುದಾಗಿ ಗೊತ್ತಾಗಿದೆ. ಸತ್ತ ಆಮೆಗಳ ಅಂತಿಮ ಸಂಸ್ಕಾರದಲ್ಲಿ ಹೊನ್ನಾವರ ಅರಣ್ಯ ವಲಯದ ಸಿಬ್ಬಂದಿಗಳಾದ ವಿನೋದ ನಾಯ್ಕ, ಶಿವಾನಂದ ನಾಯ್ಕ, ರೀಘ ವಾಕ್ ನ ರಾಮಚಂದ್ರ, ಕಾಸರಕೋಡ ಟೊಂಕಾ ಖಾರ್ವಿ ವಾಡೆಯ ಬುದವಂತರಾದ ರಾಜೇಶ ಗೋವಿಂದ ತಾಂಡೇಲ್, ವಿದ್ಯಾರ್ಥಿಗಳು, ಕಡಲ ವಿಜ್ಞಾನಿ ಪ್ರಕಾಶ ಮೇಸ್ತಾ ಹಾಗೂ ಮೀನುಗಾರರು ಪಾಲ್ಗೊಂಡರು. ಮೀನುಗಾರರ ಮಿತ್ರ ಕಡಲಾಮೆಯ ಸಂರಕ್ಷಣೆಗಾಗಿ ರಾಜೇಶ ತಾಂಡೇಲ ಅರಣ್ಯ ಇಲಾಖೆಗೆ ಮನವಿ ಮಾಡಿದ್ದಾರೆ.