ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಯಲ್ಲಾಪುರ(Yallapur) : ಕಾಮಿಡಿ ಕಿಲಾಡಿಯ ಮೂಲಕ ಅಭಿಮಾನಿಗಳ ಗಮನ ಸೆಳೆದಿದ್ದ ಚಂದ್ರಶೇಖರ್ ಸಿದ್ದಿ ಬದುಕು ಕಳೆದುಕೊಂಡಿದ್ದಾರೆ.
ಯಲ್ಲಾಪುರ ತಾಲೂಕಿನ ಚಿಮನಳ್ಳಿಯ ಚಂದ್ರಶೇಖರ ಸಿದ್ದಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೇಲಂಗಾರ ಸಮೀಪದ ಚಿಮನಳ್ಳಿ ಗ್ರಾಮದ ಚಂದ್ರಶೇಖರ ಸಿದ್ದಿ ನೀನಾಸಂನಲ್ಲಿ ಅಭಿನಯ ಕಲಿತು ಉತ್ತಮ ಕಲಾವಿದರಾಗಿ ಹೊರ ಹೊಮ್ಮಿದ್ದರು.
ಕೆಲ ವರ್ಷಗಳ ಹಿಂದೆ ಝೀ ಕನ್ನಡ ವಾಹಿನಿ ನಡೆಸುವ ಕಾಮಿಡಿ ಕಿಲಾಡಿ ರಿಯಾಲಿಟಿ ಶೋದಲ್ಲಿ ಕಲಾವಿದ ಚಂದ್ರಶೇಖರ್ ಭಾಗವಹಿಸಿದ್ದರು. ತಮ್ಮ ನಟನೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಅಲ್ಲದೇ ಕೆಲವು ಧಾರಾವಾಹಿಗಳಲ್ಲೂ ಸಣ್ಣಪುಟ್ಟ ಪಾತ್ರಗಳನ್ನು ನಿರ್ವಹಿಸಿ ಮೆಚ್ಚುಗೆ ಗಳಿಸಿದ್ದರು.
ತೇಲಂಗಾರಿನ ಮೈತ್ರಿ ಕಲಾ ಬಳಗದ ಕಾರ್ಯಕಾರಿ ಸಮಿತಿಯ ಸದಸ್ಯರೂ ಆಗಿದ್ದ ಚಂದ್ರಶೇಖರ, ಉತ್ತಮ ಯೋಗಪಟುವೂ ಆಗಿದ್ದರು.
ನಟನೆಯಲ್ಲಿ ಒಳ್ಳೆಯ ಭವಿಷ್ಯ ಸಿಗಬಹುದು ಅಂದುಕೊಂಡಿದ್ದ ಚಂದ್ರಶೇಖರ್ ಕೆಲ ತಿಂಗಳುಗಳಿಸಿದ ಮಾನಸಿಕವಾಗಿ ಕುಗ್ಗಿದ್ದರು. ಸಣ್ಣಪುಟ್ಟ ಪಾತ್ರ ಅಭಿನಯನದ ಅವಕಾಶ ಸಿಕ್ಕರೂ ಅದನ್ನು ಒಪ್ಪಿಕೊಂಡಿರಲಿಲ್ಲ. ಶುಕ್ರವಾರ ಮಧ್ಯಾಹ್ನ ಆತ್ಮಹತ್ಯೆಗೆ ಶರಣಾಗಿದ್ದಾರೆ. ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನು ಓದಿ : ಮಾಜಿ ಸಂಸದ ಪ್ರಜ್ವಲ್ ರೇವಣ್ಣಗೆ ಶಾಕ್. ದೋಷಿ ಎಂದು ತೀರ್ಪು.
ಸೌಹಾರ್ಧದ ಹೆಸರಿಟ್ಟು ಹಣಕಾಸು ಸಂಸ್ಥೆಗಳಿಂದ ಸಾಲಗಾರರ ಲೂಟಿ. ಸಾಲಗಾರರ ಸಂಘ ಆಕ್ರೋಶ