ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ನವದೆಹಲಿ (Newdelhi): ಮೇ ಏಳರಂದು ದೇಶಾದ್ಯಂತ ಮಾಕ್ ಡ್ರಿಲ್ (Mack Drill) ನಡೆಸುವಂತೆ ಕೇಂದ್ರ ಸರ್ಕಾರ(Central Government) ಎಲ್ಲ ರಾಜ್ಯಗಳಿಗೂ ಖಡಕ್ ಸೂಚನೆ ನೀಡಿದೆ. ಹೀಗಾಗಿ ಭಾರತ ಪಾಕ್ (Bharat-Pak) ನಡುವೆ ಯುದ್ಧದ (War) ಕಾರ್ಮೋಡ ಕವಿದಂತೆ ಕಾಣುತ್ತಿದೆ.

ನಾಗರಿಕರನ್ನ ಪ್ರತಿಕೂಲ ದಾಳಿಯ ಸಂದರ್ಭದಲ್ಲಿ  ರಕ್ಷಿಸಲು ಯಾವ ರೀತಿಯಲ್ಲಿ ಸಿದ್ಧತೆಗಳು ಇವೆ ಎಂದು ಖಚಿತಪಡಿಸಿಕೊಳ್ಳುವ ಗುರಿಯನ್ನು ಈ ಮಾಕ್ ಡ್ರಿಲ್(Mack Drill) ಹೊಂದಿದ್ದು, ಈ ಮೂಲಕ ‘ಭವಿಷ್ಯ’ ಹೇಗಿದೆ ಎಂಬುದನ್ನು ಕೇಂದ್ರ ಸರ್ಕಾರ ಸೂಚ್ಯವಾಗಿಯೇ ನಾಗರಿಕರಿಗೆ ತಿಳಿಸಿದೆ.

ಕೇಂದ್ರ ಗೃಹ ಸಚಿವಾಲಯ ನೀಡಿರುವ ಈ ಆದೇಶದಲ್ಲಿ ನಾಗರಿಕರ ರಕ್ಷಣೆಯ ಸಂಬಂಧ ಮೇ ಏಳರಂದು ದೇಶಾದ್ಯಂತ ಅಣಕು ಪ್ರದರ್ಶನ ಮಾಡಿಸಬೇಕು. ಎಲ್ಲಾ ರಾಜ್ಯಗಳಲ್ಲಿ ವಾಯುದಾಳಿಯ ಸೈರನ್ ವ್ಯವಸ್ಥೆ ಇರುವಂತೆ ನೋಡಿಕೊಳ್ಳಬೇಕು ಎಂದು ಸೂಚಿಸಲಾಗಿದೆ.  ಅದರಂತೆ ಎಲ್ಲ ರಾಜ್ಯಗಳಲ್ಲೂ ಯುದ್ಧದ ಸಮಯದಲ್ಲಿ ನಡೆಸಲಾಗುವ ರಕ್ಷಣಾ ಕಾರ್ಯದ ಅಣಕು ಕವಾಯತು ನಡೆಸಲು ಸೂಚಿಸಲಾಗಿದೆ.

ಇದಲ್ಲದೆ, ರಾಷ್ಟ್ರವ್ಯಾಪಿ ನಡೆಯುವ ಈ ಮಾಕ್ ಡ್ರಿಲ್ ಪರಿಣಾಮಕಾರಿಗೊಳಿಸಲು ಸ್ಥಳೀಯ ಅಧಿಕಾರಿಗಳು, ಶಿಕ್ಷಣ ಸಂಸ್ಥೆಗಳು, ನಾಗರಿಕ ರಕ್ಷಣಾ ಸಿಬ್ಬಂದಿ ಸಂಘಟಿತರಾಗಿ ಭಾಗವಹಿಸುವಂತೆಯೂ ಸಚಿವಾಲಯ ತಿಳಿಸಿದೆ.

ಗೃಹ ಸಚಿವಾಲಯದ ಆದೇಶದಲ್ಲಿ ಏನಿದೆ?
ವಾಯುದಾಳಿ ಎಚ್ಚರಿಕೆ ಸೈರನ್ ಕಾರ್ಯಾಚರಣೆ. ದಾಳಿಯ ಸಂದರ್ಭ ಸ್ವರಕ್ಷಣೆಗೆ ನಾಗರಿಕರು, ವಿದ್ಯಾರ್ಥಿಗಳಿಗೆ ರಕ್ಷಣಾ ಅಂಶಗಳ ಕುರಿತು ತರಬೇತಿ ನೀಡುವುದು. ಕ್ರಾಶ್ ಬ್ಲ್ಯಾಕ್‌ಔಟ್ ಕ್ರಮ. ಪ್ರಮುಖ ಕಟ್ಟಡ, ಸ್ಥಾವರ ಮರೆಮಾಚುವುದು. ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರ ನಡೆಸುವ ಪೂರ್ವಾಭ್ಯಾಸ. ಇದೇ ರೀತಿಯ ಮಾಕ್ ಡ್ರಿಲ್ ಈ ಹಿಂದೆ 1971 ರಲ್ಲಿ ನಡೆದಿತ್ತು. ಅದೇ ವರ್ಷದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ಧ ಸಂಭವಿಸಿತ್ತು.

ಇದನ್ನು ಓದಿ : ಉಡಾಪೆ ಮಾತಿಗೆ ಗಾಯಕ ಸೋನು ನಿಗಮ್ ಗೆ ಫಿಲ್ಮ್ ಚೇಂಬರ್ ಬ್ಯಾನ್.

ಮಂಗಳೂರು ಬಳಿಕ ಮತ್ತೋರ್ವ ರೌಡಿ ಶೀಟರ್ ಫಿನಿಷ್.

ಪತಿಯ ಕೊಲೆಗೈದ ಪತ್ನಿಗೆ ಜೀವಾವಧಿ ಶಿಕ್ಷೆ