ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news)ಭಟ್ಕಳ (Bhatkal) : ತಾಲೂಕಿನ ಅಳ್ವೆಕೋಡಿ (Alvekodi) ಅಳಿವೆ ತೀರದಲ್ಲಿ ಸಂಭವಿಸಿದ ದೋಣಿ ದುರಂತದಲ್ಲಿ(Boat Tragedy) ನಾಪತ್ತೆಯಾಗಿದ್ದ ಮೂವರು ಮೀನುಗಾರರಿಗಾಗಿ  ಶೋಧ ಕಾರ್ಯಾಚರಣೆ ಮುಂದುವರಿದಿದೆ.

ಇಂದು ಕರಿಕಲ್(Karikal), ತೆಂಗಿನಗುಂಡಿ(Tenginagundi) ಭಾಗದಲ್ಲಿ ಡ್ರೋನ್ (Drone) ಮೂಲಕ ಹುಡುಕಾಟ ನಡೆಸಲಾಗಿತ್ತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಈ ನಡುವೆ ಖ್ಯಾತ ಮುಳುಗು ತಜ್ಞ ಈಶ್ವರ ಮಲ್ಪೆ (Ishwat Malpe) ತಂಡ ಶೋಧಕ್ಕಾಗಿ ಭಟ್ಕಳಕ್ಕೆ ಆಗಮಿಸಿದೆ. ಅಲ್ಲದೇ ತೆಂಗಿನಗುಂಡಿ ಅಳಿವೆ ತೀರದಲ್ಲಿ ಲೈಪ್ ಜಾಕೆಟ್(Life Jacket) ಧರಿಸಿ ಅವರ ತಂಡದ ಸದಸ್ಯರು, ಸ್ಥಳಿಯರ ಜೊತೆಗೂಡಿ ಶೋಧಕ್ಕೆ ಮುಂದಾಗಿದ್ದಾರೆ.

ಜುಲೈ 30ರಂದು ಮಧ್ಯಾಹ್ನ ಅಳ್ವೆಕೋಡಿ ಅಳಿವೆಯಲ್ಲಿ ಗಿಲ್ನೆಟ್ ದೋಣಿ ಮಗುಚಿ ಆರು ಜನ  ನೀರುಪಾಲಾಗಿದ್ದರು. ಇಬ್ಬರನ್ನ ಸ್ಥಳೀಯರು ರಕ್ಷಿಸಿದ್ದರು. ಇನ್ನೂ ನಾಲ್ವರು ನಾಪತ್ತೆಯಾಗಿದ್ದರು. ಗುರುವಾರದಂದು  ಜಾಲಿಯ ರಾಮಕೃಷ್ಣ ಮೊಗೇರ ಅವರ ಮೃತದೇಹ ಹೊನ್ನೆಗದ್ದೆ ಕಡಲತೀರದಲ್ಲಿ ಪತ್ತೆಯಾಗಿತ್ತು.

ಕಳೆದ ಮೂರು ದಿನಗಳಿಂದ ಮೀನುಗಾರರು ಇಡೀ ಸಮುದ್ರವನ್ನ ಶೋಧಿಸುತ್ತಿದ್ದಾರೆ.  ಕಣ್ಮರೆಯಾದ  ಸತೀಶ ಮೊಗೇರ, ಗಣೇಶ ಮೊಗೇರ,

ನಿಶಿತ ಮೊಗೇರ ಅವರ ಸುಳಿವು ಸಿಕ್ಕಿಲ್ಲ



ಮುಳುಗು ತಜ್ಞ ಈಶ್ವರ ಮಲ್ಪೆ ತಂಡ ಈಗ ದೋಣಿಯ ಮೂಲಕ ಹುಡುಕಾಟ ನಡೆಸುತ್ತಿದೆ. ಕಣ್ಮರೆಯಾದ ಮೀನುಗಾರರು ಕೂಡಲೇ ಸಿಗಲಿ ಎಂದು ಕುಟುಂಬದವರು, ಕಡಲತಡಿಯ ಮೀನುಗಾರರು ಪ್ರಾರ್ಥಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಮೀನುಗಾರರಿಗೆ ಕಿವಿಮಾತು ಹೇಳಿದ ಈಶ್ವರ ಮಲ್ಪೆ ಸಮುದ್ರ ಮೀನುಗಾರಿಕೆ ನಡೆಸುವ ಮೀನುಗಾರರು ದಯವಿಟ್ಟು ಲೈಪ್ ಜಾಕೆಟ್ ಧರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.


ಇದನ್ನು ಓದಿ : ಆಟೋ, ಬೈಕ್, ಸೈಕಲ್ ಮೇಲೆ ಬಂದು ಜೂಗಾರಾಟ. 11ಜನರ ಮೇಲೆ ಪ್ರಕರಣ.

ಯಾಂತ್ರಿಕ ದೋಣಿಯಲ್ಲಿ ಸಿಲಿಂಡರ್ ಸೋರಿಕೆ. ಬೆಂಕಿಯಾಗಿ ಆತಂಕ. ತಪ್ಪಿದ ಅನಾಹುತ.

ಪ್ರಜ್ವಲ್ ರೇವಣ್ಣ ಪ್ರಕರಣ. ಸರ್ಕಾರದ ಪರ  ವಾದಿಸಿದ ಅಂಕೋಲೆಯ ಅಶೋಕ ನಾಯ್ಕ.