ಕಾರವಾರ : ನಗರದ ವಾರ್ ಶಿಪ್ ಮ್ಯೂಸಿಯಂ ಹಿಂಬದಿಯ ಗುಡಿಸಲು ತೆರವಿಗೆ ಬಂದ ಅಧಿಕಾರಿಗಳ ಸಿಬ್ಬಂದಿಗಳ ವಿರುದ್ಧ ಮೀನುಗಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಬುಧವಾರ ತಾಲೂಕಾಡಳಿತದಿಂದ ಇಲ್ಲಿನ ಕೆಲವು ಗುಡಿಸಲು ತೆರವು ಕಾರ್ಯಾಚರಣೆಗೆ ಸಿದ್ಧತೆ ನಡೆಸಲಾಗಿತ್ತು. ಈ ಸಂಬಂಧ ಎರಡು ಗುಡಿಸಲಿಗೆ ಯಾರದೋ ಹೆಸರಿನಲ್ಲಿದ್ದ ನೋಟೀಸ್ ಅಂಟಿಸಲಾಗಿತ್ತು. ತೆರವು ಕಾರ್ಯಾಚರಣೆಗೆ ಸ್ಥಳೀಯ ಮೀನುಗಾರರು ಆಕ್ಷೇಪ ವ್ಯಕ್ತಪಡಿಸಿದರು. ಪೊಲೀಸ್ ಬಂದೋಬಸ್ತ್ ಕೂಡ ಮಾಡಲಾಗಿತ್ತು.
ಆಗ ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು ಹಿಡಿದರು. ಅಲ್ಲದೆ ಬಾಡ ಮೀನುಗಾರರ ಬಳೆಗಳನ್ನ ಇಟ್ಟುಕೊಳ್ಳುವ ಶೆಡ್ ತೆಗೆಯದಂತೆ ಒತ್ತಾಯಿಸಿದರು.
ಸ್ಥಳಕ್ಕೆ ಬಂದ ತಹಶೀಲ್ದಾರ್ ನಿಶ್ಚಲ್ ನರೋನಾ ಅವರನ್ನ ಪ್ರಶ್ನಿಸಿ ಶೆಡ್ ತೆಗೆಯದಂತೆ ಎಚ್ಚರಿಸಿದರು. ಆಗ ಬೇರೊಂದು ಗುಡಿಸಲು ತೆಗೆಯುವ ಬದಲು ಇಲ್ಲಿ ಬಂದಿರೋದು ತಪ್ಪಾಗಿದೆ ಎಂದು ತಹಶೀಲ್ದಾರ್ ಅವರು ಅಂಟಿಸಿದ ನೋಟೀಸ್ ಕಿತ್ತು ವಾಪಾಸ್ ಆದರು.