ಕಾರವಾರ(KARWAR) : ಗಾಂಧಿ ಜಯಂತಿ (GANDHI JAYANTI) ಅಂಗವಾಗಿ ಕಾರವಾರದಲ್ಲಿ ಜಿಲ್ಲಾ ನ್ಯಾಯಾಧೀಶರು ಕಸ ಸ್ವಚ್ಛಗೊಳಿಸುವ ಮೂಲಕ ಗಮನ ಸೆಳೆದರು.

ಬೆಳಿಗ್ಗೆ ನಗರದ ಎಂ ಜಿ ರಸ್ತೆಯಲ್ಲಿ(M G ROAD ) ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಡಿ ಎಸ್ ವಿಜಯಕುಮಾರ್ (JUDGE D S VIJAYKUMAR) ಅವರು ಉಳಿದ ನ್ಯಾಯಾಧೀಶರು ಹಾಗೂ ನ್ಯಾಯವಾದಿಗಳೊಂದಿಗೆ ಸ್ವಚ್ಛತೆ ಕೈಗೊಂಡರು.

ಇದಕ್ಕೂ ಮುನ್ನ ಜಿಲ್ಲಾ ನ್ಯಾಯಾಲಯದಿಂದ ಜಾಗೃತಿ ಜಾಥಾ ನಡೆಸಲಾಯಿತು. ನಗರದ ಸುಭಾಷ್ ವೃತ್ತ, ಸವಿತಾ ವೃತ್ತ, ಗ್ರೀನ್ ಸ್ಟ್ರೀಟ್ ಮೂಲಕ ಜಾಥಾ ನಗರಸಭೆ ಉದ್ಯಾನವನಕ್ಕೆ ಆಗಮಿಸಿತು. ಗಾಂಧಿ ಪ್ರತಿಮೆಗೆ ಪುಷ್ಪಾರ್ಚನೆ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ನ್ಯಾಯಾಧೀಶರಾದ ಡಿ ಎಸ್ ವಿಜಯಕುಮಾರ, ಮಹಾತ್ಮಾ ಗಾಂಧಿ (MAHATMA GANDHI) ಅವರು ನಮ್ಮ ಸಮಾಜದಲ್ಲಿ ಎಲ್ಲಾ ಜನರನ್ನ ಒಟ್ಟಿಗೆ ತಂದ ಏಕೈಕ ವ್ಯಕ್ತಿ ಅಂತಾ ಹೇಳಬಹುದು. ಅವರು ಸಲ್ಲಿಸಿದ ಸೇವೆ ಕೇವಲ ದೇಶಕ್ಕೆ ಮಾತ್ರವಲ್ಲ. ಇಡೀ ಮಾನವ ಕುಲಕ್ಕೆ ಆಗಿದೆ. ಅವರು ತೋರಿಸಿದ ಹೆಜ್ಜೆ ಅನುಸರಿಸಬೇಕು. ಅವರ ನೈತಿಕತೆ ಸಮಾಜಕ್ಕೆ ಆಕ್ಸಿಜನ್(OXYGEN) ಆಗಿದೆ . ಮಾಲಿನ್ಯ ಆಗಿದೆ ಅಂತಾ ನಾವು ಅವರನ್ನ ಮರೆಯದೆ ಅವರ ಮಾರ್ಗ ನೈತಿಕ ಗುಣಗಳನ್ನು , ನಾವು ಅನುಸರಿಸಬೇಕು. ಅದನ್ನ ಅಳವಡಿಸಿಕೊಂಡರೆ ನಾವು ಒಳ್ಳೆ ಸಮಾಜ ನಿರ್ಮಾಣ ಸಾಧ್ಯವಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ನ್ಯಾಯವಾದಿಗಳು(LAWYERS) ಮತ್ತು ನ್ಯಾಯಾಲಯ ಸಿಬ್ಬಂದಿಗಳು (COURT STAFF) ಪಾಲ್ಗೊಂಡಿದ್ದರು.

ಇದನ್ನು ಓದಿ : ಮುಡಾ ಸೈಟ್ ವಾಪಾಸ್ ನೀಡಿದ ಸಿಎಂ ಪತ್ನಿ

ಭಟ್ಕಳದಲ್ಲಿ ಅಪರಿಚಿತ ಸಾವು. ಸ್ಥಳಕ್ಕೆ ಪೊಲೀಸರ ದೌಡು

ಮಾನಸಿಕ ಹಿಂಸೆಯಿಂದ ಸೈಟ್ ವಾಪಾಸ್ : ಮಂಕಾಳ್ ವೈದ್ಯ