ಇ ಸಮಾಚಾರ ಡಿಜಿಟಲ್ ನ್ಯೂಸ್ (esamachara digital news) ಕಾರವಾರ(Karwar): ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ(JKKPS) ವತಿಯಿಂದ ನೀಡುವ ಟ್ಯಾಗೋರ್ ಪ್ರಶಸ್ತಿಗೆ(Tagore Award) ಈ ಬಾರೀ ಮೂವರನ್ನ ಆಯ್ಕೆ ಮಾಡಲಾಗಿದೆ.

ಜಿಲ್ಲಾಕೇಂದ್ರ ಕಾರವಾರದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಟ್ಯಾಗೋರ್ ಪ್ರಶಸ್ತಿ ನೀಡಲಾಗುತ್ತಿದೆ. ವಿದ್ಯುನ್ಮಾನ ಮಾದ್ಯಮ ವಿಭಾಗದಿಂದ ಸುವರ್ಣ ವಾಹಿನಿ ಜಿಲ್ಲಾ ವರದಿಗಾರ ಭರತ್ ರಾಜ್ ಕಲ್ಲಡ್ಕ, ಮುದ್ರಣ ಮಾದ್ಯಮ ವಿಭಾಗದಿಂದ ನುಡಿಜೇನು ಪತ್ರಿಕೆ ಉಪಸಂಪಾದಕ ಎಸ್.ಎಸ್ ಸಂದೀಪ್ ಸಾಗರ್, ಹಾಗೂ ಪ್ರಜಾವಾಣಿ ಛಾಯಾಗ್ರಾಹಕ ದಿಲೀಪ್ ರೇವಣಕರ್ ಗೆ ಈ ಬಾರಿ ಪ್ರಶಸ್ತಿ ನೀಡಲು ಸಂಘ ನಿರ್ಧರಿಸಿದೆ.

ಜಿಲ್ಲಾ ಪತ್ರಿಕಾಭವನ ನಿರ್ವಹಣಾ ಸಮಿತಿ ವತಿಯಿಂದ ಕಾರವಾರದಲ್ಲಿ ಆಗಸ್ಟ್ 17ರಂದು ಪತ್ರಿಕಾ ದಿನಾಚರಣೆಯನ್ನ ಹಮ್ಮಿಕೊಂಡಿದ್ದು ಕಾರ್ಯಕ್ರಮದಲ್ಲಿ ಪ್ರಶಸ್ತಿಯನ್ನ ವಿತರಿಸಲಾಗುವುದು ಎಂದು  ಅಧ್ಯಕ್ಷರಾದ ಟಿ.ಬಿ ಹರಿಕಾಂತ್ ತಿಳಿಸಿದ್ದಾರೆ.

ಭರತ್ ರಾಜ್ ಕಲ್ಲಡ್ಕ ಮೂಲತ ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಗ್ರಾಮದವರಾಗಿದ್ದು ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 11 ವರ್ಷ ಅನುಭವನ್ನ ಹೊಂದಿದ್ದಾರೆ. 2014ರಲ್ಲಿ ಪ್ರಜಾವಾಣಿಯ ಬಳಿಕ 2015-17ರವರೆಗೆ ಉದಯವಾಣಿಯಲ್ಲಿ ವರದಿಗಾರರಾಗಿ ಬಳಿಕ 2017ರಿಂದ 19ರವರೆಗೆ ನ್ಯೂಸ್ 18 ಮಂಗಳೂರು ಬ್ಯೂರೋ ಹೆಡ್ ಆಗಿ ಕೆಲಸ ನಿರ್ವಹಿಸಿದ್ದಾರೆ.  ಉತ್ತರ ಕನ್ನಡ ಜಿಲ್ಲೆಯಲ್ಲಿ 2019ರಿಂದ  ಸುವರ್ಣ ವಾಹಿನಿಯ ಜಿಲ್ಲಾ ವರದಿಗಾರರಾಗಿ ಅನೇಕ ಜನಪರ ಸುದ್ದಿಗಳನ್ನ ಪ್ರಕಟಿಸಿ ಗಮನ ಸೆಳೆದಿದ್ದಾರೆ.

ಎಸ್ ಎಸ್ ಸಂದೀಪ್ ಸಾಗರ್ ಮೂಲತ ಸಿದ್ದಾಪುರ ತಾಲೂಕಿನ ಶಿರಳಗಿ ಗ್ರಾಮದವರಾಗಿದ್ದು 2015ರಲ್ಲಿ ಪ್ರಜಾ ಟಿವಿಯ  ಉತ್ತರ ಕನ್ನಡ ಜಿಲ್ಲಾ ವರದಿಗಾರರಾಗಿ ವೃತ್ತಿ ಪ್ರಾರಂಭಿಸಿದ್ದು 2022ರ ವರೆಗೆ ಪ್ರಜಾ ಟಿವಿಯಲ್ಲಿ, 2022ರಿಂದ 2024 ರವರೆಗೆ ವಿಸ್ತಾರ ಟಿವಿ ಜಿಲ್ಲಾ ವರದಿಗಾರರಾಗಿ ಕಳೆದ ಒಂದು ವರ್ಷದಿಂದ ನುಡಿಜೇನು ದಿನಪತ್ರಿಕೆಯ ಉಪ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಜಿಲ್ಲೆಯಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಸುಮಾರು 11 ವರ್ಷಗಳ ಸೇವಾನುಭವವಿದ್ದು  ಸರ್ಕಾರದ ಕಣ್ಣು ತೆರೆಸುವಂತಹ ಅನೇಕ ವರದಿಗಳನ್ನ ಮಾಡುವ ಮೂಲಕ ಜಿಲ್ಲೆಯಲ್ಲಿ ಗಮನ ಸೆಳೆದ ಪತ್ರಕರ್ತ ಎನಿಸಿಕೊಂಡಿದ್ದಾರೆ.

   ದಿಲೀಪ್ ರೇವಣಕರ್ ಸಹ ಕಳೆದ 11 ವರ್ಷದಿಂದ ಪ್ರಜಾವಾಣಿ ಪತ್ರಿಕೆಯ ಛಾಯಾಗ್ರಾಹಕರಾಗಿ ಸೇವೆ ಸಲ್ಲಿಸುವ ಮೂಲಕ ರಾಜ್ಯ ಗಮನಿಸುವಂತ ಛಾಯಾಚಿತ್ರಗಳನ್ನ ನೀಡಿದವರಾಗಿದ್ದಾರೆ. ಪತ್ರಿಕೋದ್ಯಮ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆಯನ್ನ ನೀಡಿದ್ದು ಈ ಹಿನ್ನಲೆಯಲ್ಲಿ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಸಭೆಯಲ್ಲಿ ಜಿಲ್ಲಾ ಕೇಂದ್ರ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶೇಷಗಿರಿ ಮುಂಡಳ್ಳಿ, ಪತ್ರಕರ್ತರಾದ ವಸಂತಕುಮಾರ ಕತಗಾಲ್, ನವೀನ್ ಸಾಗರ್, ಸಂದೀಪ್ ಸಾಗರ್ ಎಂ.ವಿ, ರಾಜೇಶ್ ವೈದ್ಯ, ಕಿಶನ್ ಗುರವ್, ಗಣೇಶ್ ಹೆಗಡೆ, ಪ್ರವೀಣ್ ಹೊಸಂತೆ, ಅವಿನಾಶ್ ಆಗೇರ್ ಇನ್ನಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನು ಓದಿ : ಟೈಲ್ಸ್ ಕೆಲಸಕ್ಕೆ ಬಂದವರು ಮಾರುಕೇರಿಯಲ್ಲಿ ಅಡಿಕೆ ಕದ್ದರು.

ಭಟ್ಕಳದಲ್ಲಿ ಕಿಡಿಗೇಡಿ ಕೃತ್ಯ. ಬೈಕುಗಳಿಗೆ ಬೆಂಕಿ ಹಚ್ಚಿ ಪರಾರಿ.